ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ವಿವಿಗಳಿಗೆ ಅಧಿಸೂಚನೆಯೊಂದನ್ನು ನೀಡಿ, ಹಿಂದಿನ ಸರ್ಕಾರ ನೇಮಿಸಿದ್ದ ಸಿಂಡಿಕೇಟ್ ಸದಸ್ಯರನ್ನು ಸದಸ್ಯತ್ವದಿಂದ ಮುಕ್ತಗೊಳಿಸುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕುವೆಂಪು ವಿವಿ ಸಿಂಡಿಕೇಟ್’ಗೆ ಹಿಂದಿನ ಸರ್ಕಾರ ನೇಮಕ ಮಾಡಿದ್ದ ಆರು ಸದಸ್ಯರ ಸದಸ್ಯತ್ವವನ್ನು ಮುಕ್ತಗೊಳಿಸಲಾಗಿದೆ.

ಶಿವಮೊಗ್ಗ(ಜು.26]: ಸರ್ಕಾರ ಬದಲಾಗುತ್ತಿದ್ದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಅಧಿಕಾರದಿಂದ ಮುಕ್ತಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ವಿವಿ ಸಿಂಡಿಕೇಟ್ ಸದಸ್ಯರಿಗೂ ಈ ಬಿಸಿ ತಾಗಿದೆ. ಕುವೆಂಪು ವಿವಿಯ ಸಿಂಡಿಕೇಟ್ ಸದಸ್ಯತ್ವದಿಂದ ಆರು ಜನರನ್ನು ಮುಕ್ತಗೊಳಿಸಲಾಗಿದೆ. ವಿವಿ ಕುಲಸಚಿವ ಪ್ರೊ. ಭೋಜ್ಯಾನಾಯ್ಕ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ವಿವಿಗಳಿಗೆ ಅಧಿಸೂಚನೆಯೊಂದನ್ನು ನೀಡಿ, ಹಿಂದಿನ ಸರ್ಕಾರ ನೇಮಿಸಿದ್ದ ಸಿಂಡಿಕೇಟ್ ಸದಸ್ಯರನ್ನು ಸದಸ್ಯತ್ವದಿಂದ ಮುಕ್ತಗೊಳಿಸುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕುವೆಂಪು ವಿವಿ ಸಿಂಡಿಕೇಟ್’ಗೆ ಹಿಂದಿನ ಸರ್ಕಾರ ನೇಮಕ ಮಾಡಿದ್ದ ಆರು ಸದಸ್ಯರ ಸದಸ್ಯತ್ವವನ್ನು ಮುಕ್ತಗೊಳಿಸಲಾಗಿದೆ.

ಅವರುಗಳೆಂದರೆ, ಶಿವಮೊಗ್ಗದ ವಿಶ್ವನಾಥ (ಕಾಶಿ), ಸಾಗರದ ಮೊಸ್ಮದ್ ಜಕ್ರಿಯ, ತರೀಕೆರೆಯ ಅನ್ಬು, ಬೆಂಗಳೂರಿನ ಸುನೀತಾ, ಕೋಲಾರದ ಡಾ.ಟಿ.ವಿ.ನಾರಾಯಣಸ್ವಾಮಿ, ಚಳ್ಳಕೆರೆಯ ಅಶ್ವಥನಾಯಕ.