Asianet Suvarna News Asianet Suvarna News

'ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ದೇಶದ ಶಾಂತಿ ಕದಡುತ್ತಿದ್ದಾರೆ'

ಮೋದಿ, ಶಾ ಸೇರಿಕೊಂಡು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದಾರೆ| ಜಾತಿ ಧರ್ಮದ ಹೆಸರಿನಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ| ಯಾವುದೇ ಒಂದು ಜಾತಿಯ ಹೆಸರಿನ‌ ಮೇಲೆ NRC ಹಾಗೂ ಸಿಸಿಎ ಕಾಯ್ದೆ ತರಲು ಹೊರಟಿದೆ|ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ|

Kushtagi MLA Raghavendra Hitnal Talks Over Citizenship Act
Author
Bengaluru, First Published Dec 21, 2019, 1:43 PM IST

ಕೊಪ್ಪಳ(ಡಿ.21): ಸ್ವಾತಂತ್ರ್ಯ ಸಿಕ್ಕ ನಿಂತರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ದೇಶದ ಶಾಂತಿಯನ್ನು ಕದಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿನ ಒಂದು ಭರವಸೆ ಈಡೇರಿಸಿಲ್ಲ, ಜನರ ಮನಸ್ಸನ್ನು ಬೇರೆ ಕಡೆ ಸಳೆಯುತ್ತಿದ್ದಾರೆ. ಹೋರಾಟದಲ್ಲಿ 10 ಕ್ಕೂ ಹೆಚ್ವು ಜನರು ಬಲಿಯಾಗಿದ್ದಾರೆ. ನಿಮಗೆ ಇನ್ನು ಎಷ್ಟು ಬಲಿಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ನಗರದಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ, ಶಾ ಸೇರಿಕೊಂಡು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದಾರೆ. ವಾಮಮಾರ್ಗದ ಮೂಲಕ ಅಧಿಕಾರ ನಡೆಸುತ್ತಿದ್ದಾರೆ. ಜಾತಿ ಧರ್ಮದ ಹೆಸರಿನಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇತಿಹಾಸ ಬಲ್ಲದವರು ಶಾಂತಿ ಕದಡುತ್ತಾರೆ. ಯಾವುದೇ ಒಂದು ಜಾತಿಯ ಹೆಸರಿನ‌ ಮೇಲೆ NRC ಹಾಗೂ ಸಿಸಿಎ ಕಾಯ್ದೆ ತರಲು ಹೊರಟಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇವರಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ. ಪರಸ್ಪರ ಸಹೋದರತ್ವದಿಂದ ದೇಶದಲ್ಲಿ ಜನರು ವಾಸಿಸುತ್ತಿದ್ದಾರೆ. ಮೋದಿ, ಅಮಿತ್ ಶಾ ಮುಂದೊಂದು ದಿನ ಪಾಠ ಕಲಿಯುತ್ತೀರಿ, ದೇಶದ ದುರಂತದ ಕಥೆಯಲ್ಲಿ‌ ಇದು ಸೇರುತ್ತದೆ ಎಂದು ಹೇಳಿದ್ದಾರೆ. 

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಥ್ ಮಿಲಾಫಿ ಮಾಡಿಕೊಂಡವರು ಇದ್ದರೆ ಅದು ನೀವು, ಸರ್ಕಾರ 144 ಸೆಕ್ಷೆನ್ ಹೇರುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇಂದು ಪೌರತ್ವ ಕಾಯ್ದೆ ತಿದ್ದುಪಡಿ, ಮುಂದೆ ಸಂವಿಧಾನ ಬದಲಾವಣೆ ಮಾಡುತ್ತೀರಿ. ಸಿಸಿಎ ಮತ್ತು NRC ಹಿಂದಕ್ಕೆ ಪಡೆದು ದೇಶದಲ್ಲಿ ಶಾಂತಿ ಇರುವಂತೆ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ. 
 

Follow Us:
Download App:
  • android
  • ios