ಮೈಸೂರು(ಜ.30): ಕುರುಬರೇ ಕುರುಬರಿಗೆ ಕುರಿ ದಾನ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕುರುಬ ಜನಾಂಗದ ಜನ ಕುರುಬರಿಗೇ ಉಚಿತವಾಗಿ ಕುರಿಗಳನ್ನು ವಿತರಿಸಿ ಖುಷಿ ಪಟ್ಟಿರುವ ಘಟನೆ ನಡೆದಿದೆ.

ಕುರುಬರಿಂದ ಕುರುಬರಿಗೆ ಕುರಿ ದಾನ ನಡೆದಿದ್ದು ಪುಕ್ಕಟೆಯಾಗಿ ಕುರಿಗಳು ಸಿಕ್ಕಿವೆ. ಮೈಸೂರಿನಲ್ಲೊಂದು ವಿನೂತನ ಕಾರ್ಯಕ್ರಮ ನಡೆದಿದ್ದು, ಎಸ್‌‌.ಪ್ರಕಾಶ್ ಪ್ರಿಯದರ್ಶಿ‌ನಿ ಸ್ನೇಹ ಬಳಗದಿಂದ ಸಹಾಯ ಹಸ್ತ ಕಾರ್ಯಕ್ರಮ ನಡೆದಿದೆ.

ಮೇಯರ್ ಸ್ಥಾನ JDS, ಕಾಂಗ್ರೆಸ್ ಮೈತ್ರಿ ಪಾಲು: ಬಿಜೆಪಿಗೆ ಭಾರೀ ಮುಖಭಂಗ

ಮೈಸೂರಿ‌ನ ಆರಾಧ್ಯ ಮಹಾಸಭಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನ ಕುರಿ ಕೊಟ್ಟು ಖುಷಿಪಟ್ಟಿದ್ದಾರೆ. ಹಲವಾರು ಜನ ಕುರಿ ಮರಿಗಳನ್ನು ಪಡೆದು ಹೊತ್ತೊಯ್ದಿದ್ದಾರೆ. ಕಾರ್ಯಕ್ರಮದ ಬಗ್ಗೆ ಜೆಡಿಎಸ್ ಕಾರ್ಯಕರ್ತ ಪ್ರಕಾಶ್ ಪ್ರಿಯದರ್ಶಿನಿ ಮಾತನಾಡಿದ್ದಾರೆ.

ಕುರಿ ಲಕ್ಷ್ಮಿಯ ಸಂಕೇತ. ಕುರಿ ಸಾಕಣೆ ನಮ್ಮ ಕುಲಕಸುಬು. ಒಂದು ಮರಿಯಿಂದ ಕುರಿ ಸಾಕಣೆ ಶುರು ಮಾಡಿದರೂ ಜೀವನ ರೂಪಿಸಿಕೊಳ್ಳಬಹುದು‌. ಆದ್ದರಿಂದ ಉಳ್ಳವರಿಂದ ದಾನ ಪಡೆದು ಬಡವರಿಗೆ ಕುರಿ ಕೊಟ್ಟಿದ್ದೇವೆ ಎಂದು ಕಾರ್ಯಕ್ರಮ ಆಯೋಜಕ ಪ್ರಕಾಶ್ ಪ್ರಿಯದರ್ಶಿನಿ ಹೇಳಿದ್ದಾರೆ.

'ಹು ಈಸ್ ಹೀ, ಸುಧಾಕರ್ ಏನು ಚೀಫ್ ಮಿನಿಸ್ಟ್ರಾ..'? ವಿಶ್ವನಾಥ್ ಸಿಡಿಮಿಡಿ