ಬಸವಾಪಟ್ಟಣ (ನ.12):  ಹಲವು ದಶಕಗಳಿಂದ ಅರ್ಥಿಕವಾಗಿ ಹಿಂದುಳಿದ ಹಳ್ಳಿಮೈಸೂರು ಹೋಬಳಿಯನ್ನು ತಾಲೂಕನ್ನಾಗಿ ಘೋಷಿಸಬೇಕೆಂದು ಹೊಳೆನರಸೀಪುರ ತಾಲೂಕು ಕುರುಬ ಸಮಾಜದ ಅಧ್ಯಕ್ಷ, ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.

ಮಾಯಗೌಡನಹಳ್ಳಿ ದೊಡ್ಡಮ್ಮತಾಯಿ ದೇವಸ್ಥಾನದ ಬಳಿ ಹಳ್ಳಿಮೈಸೂರು ಹೋಬಳಿಯ ಎಲ್ಲಾ ಸಮಾಜಗಳ ಪ್ರಮುಖರು ಸಭೆ ಸೇರಿ ಹಳ್ಳಿಮೈಸೂರು ಹೋಬಳಿಯನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ. ಹಳ್ಳಿಮೈಸೂರು ಹೋಬಳಿ ಅರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವುದು ಅಲ್ಲದೆ ಹಿಂದುಳಿದ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. 

ಗೊಂದಲ : ಮರು ಚುನಾವಣೆ ನಡೆಸಲು ಹೆಚ್ಚಿದೆ ಪಟ್ಟು ..

ಬಹುತೇಕ ನೀರಾವರಿ ವಂಚಿತ ಒಣಭೂಮಿಯಾಗಿದ್ದು ಸೌಲಭ್ಯಗಳು ಮರೀಚಿಕೆಯಾಗಿವೆ. ಕೂಡಲೇ ಸರ್ಕಾರ ವರದಿ ತರಿಸಿಕೊಂಡು ಹಳ್ಳಿಮೈಸೂರು ಹೋಬಳಿಯನ್ನು ತಾಲೂಕನ್ನಾಗಿ ಪರಿವರ್ತಿಸಬೇಕು. ಈ ಬಗ್ಗೆ ರೂಪರೇಷಗಳನ್ನು ರೂಪಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಇದೇ ವೇಳೆ ಓಹಿಲೇಶ್ವರ, ಹಾಡ್ಯ ಕುಮಾರ, ರಂಗೇನಹಳ್ಳಿ ಕುಮಾರ ಎಲ್ಲಾ ಸಮಾಜಗಳ ಪ್ರಮುಖರು ಹಾಜರಿದ್ದರು.