ಭ್ರಷ್ಟಾಚಾರ ಸಹಿಸಲ್ಲ, ಕೆಲಸ ಸರಿಯಾಗಿ ಮಾಡಿ: ಪೊಲೀಸರಿಗೆ ಮಂಗಳೂರಿನ ನೂತನ ಕಮಿಷನರ್ ಎಚ್ಚರಿಕೆ!

ನಗರಕ್ಕೆ ಎಂಟ್ರಿಯಾಗುತ್ತಲೇ ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಮಂಗಳೂರಿನ ‌ನೂತನ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದು, ಭ್ರಷ್ಟಾಚಾರದ ವಿಷಯದಲ್ಲಿ ಝೀರೋ ಟಾಲರೆನ್ಸ್ ಅಂತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

Kuldeep Kumar R Jain posted as new Mangaluru Police Commissioner rav

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರುo (ಫೆ.24): ನಗರಕ್ಕೆ ಎಂಟ್ರಿಯಾಗುತ್ತಲೇ ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಮಂಗಳೂರಿನ ‌ನೂತನ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದು, ಭ್ರಷ್ಟಾಚಾರದ ವಿಷಯದಲ್ಲಿ ಝೀರೋ ಟಾಲರೆನ್ಸ್ ಅಂತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ನಿನ್ನೆಯಷ್ಟೇ ಮಂಗಳೂರು ಕಮಿಷನರ್ ಶಶಿಕುಮಾರ್(N Shashikumar IPS) ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ನೂತನ ಕಮಿಷನರ್(Mangaluru Police Commissioner) ಆಗಿ ಕುಲದೀಪ್ ಆರ್.ಜೈನ್(Kuldeep Kumar R Jain) ಆಗಮಿಸಿದ್ದಾರೆ. 

 

ಮಂಗಳೂರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಎತ್ತಂಗಡಿ: ಕುಲದೀಪ್‌ ಜೈನ್ ಹೊಸ ಕಮಿಷನರ್

ನಿರ್ಗಮಿತ ಕಮಿಷನರ್ ಶಶಿಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದ ಅವರು ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. 

ಮಂಗಳೂರಿನ ಕೆಲ ‌ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ(Curruption) ತಾಂಡವವಾಡುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಕುಲದೀಪ್.ಆರ್. ಜೈನ್, ಭ್ರಷ್ಟಾಚಾರವನ್ನ ಸಹಿಸಲ್ಲ, ಯಾವುದೇ ಮಾಹಿತಿ ಇದ್ರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ತೀನಿ. ನನ್ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ನಾನು ಕೇಳಿಕೊಳ್ಳುತ್ತೇನೆ. ಯಾವುದಕ್ಕೂ ಅವಕಾಶ ಕೊಡದೇ ಕೆಲಸ ಸರಿಯಾಗಿ ಮಾಡಿ. ಜನರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡಿ. ಭ್ರಷ್ಟಾಚಾರದ ಬಗ್ಗೆ ಮೊದಲು ನಾನೇ ಕಣ್ಗಾವಲು ಇಡ್ತೇನೆ. ಯಾವುದೇ ಥರದ ಅಕ್ರಮ ಚಟುವಟಿಕೆಗಳ ಮೇಲೆ ‌ಕ್ರಮ ಕೈಗೊಳ್ತೀವಿ. ಅಕ್ರಮ ಚಟುವಟಿಕೆ ಮಾಹಿತಿ ಬಂದ್ರೆ ಕ್ರಮ ನಿಶ್ಚಿತ. ಯಾರೇ ಅದರ ಜವಾಬ್ದಾರಿ ಇದ್ದರೂ ಕಠಿಣ ಕ್ರಮ ಆಗುತ್ತೆ. ಸೂಕ್ಷ್ಮವಾಗಿದ್ದ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡ್ತೀನಿ. ಎಲ್ಲರ ಸಹಯೋಗದೊಂದಿಗೆ ಒಳ್ಳೆಯ ರೀತಿ ಕೆಲಸ ಮಾಡುತ್ತೇನೆ. ಮಂಗಳೂರು ಬಹಳ ಚೆನ್ನಾಗಿದೆ, ನಿನ್ನೆ ರಾತ್ರಿಯೇ ನೋಡಿಕೊಂಡು ಬಂದೆ.‌ ಹತ್ತು ವರ್ಷದ ಹಿಂದೆ ಪ್ರೊಬೆಷನರಿಯಾಗಿ ಇಲ್ಲಿಗೆ ಬಂದಿದ್ದೆ. ಇಲ್ಲಿ ಚಾಲೆಂಜ್ ಅನ್ನೋದಕ್ಕಿಂದ ದಿನನಿತ್ಯ ಸರಿಯಾಗಿ ಕೆಲಸ ಮಾಡಬೇಕು‌. ಸೂಪರ್ ವಿಷನ್, ಸಂಪರ್ಕ ಚೆನ್ನಾಗಿದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತೆ. ಟ್ರಾಫಿಕ್ ಜಾಗೃತಿ ‌ಮತ್ತು ಕ್ರಮಗಳ ಬಗ್ಗೆ ವಿಶೇಷ ಗಮನ ಹರಿಸುತ್ತೇನೆ‌. ಮಂಗಳೂರಿನ ಜನರು ದಯವಿಟ್ಟು ಟ್ರಾಫಿಕ್ ರೂಲ್ಸ್ ಪಾಲಿಸಿ ಎಂದರು

ಮಂಗಳೂರು ಪೊಲೀಸ್ ಕಮಿಷನರ್ ಭ್ರಷ್ಟಾಚಾರದಲ್ಲಿ ಭಾಗಿ: ಲೋಕಾಯುಕ್ತ ದೂರುದಾರ ಕಬೀರ್ ಉಳ್ಳಾಲ್ ಆರೋಪ!

ಹುಟ್ಟಿದ್ದು ರಾಜಸ್ಥಾನ, ಬೆಳೆದಿದ್ದು ಚೆನ್ನೈ!

ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಕುಲದೀಪ್ ಆರ್.ಜೈನ್ ಅವರು ಹುಟ್ಟಿದ್ದು ರಾಜಸ್ಥಾನ, ಬೆಳೆದಿದ್ದು ಚೆನ್ನೈನಲ್ಲಿ. 2011ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರೋ ಇವರು ಹತ್ತು ವರ್ಷಗಳ ಹಿಂದೆ ದ.ಕ ಜಿಲ್ಲೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಆ ಬಳಿಕ ಚನ್ನಪಟ್ಟಣ ಎಎಸ್ಪಿ, ಚಾಮರಾಜನಗರ ಎಸ್ಪಿ, ಬಿಜಾಪುರ ಎಸ್ಪಿ, ಬೆಂಗಳೂರು ಸಿಟಿ ಕ್ರೈಂ ಮತ್ತು ಟ್ರಾಫಿಕ್ ಡಿಸಿಪಿ, ಕೆಎಸ್ಆರ್ಪಿ ಹಾಗೂ ಎಸಿಬಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Latest Videos
Follow Us:
Download App:
  • android
  • ios