ಸುಬ್ರಹ್ಮಣ್ಯ [ಮಾ.16]: ಕರೋನಾ ಆತಂಕ ಹಿನ್ನೆಲೆಯಲ್ಲಿ ವಿಶೇಷ ಸೇವೆ ಸಲ್ಲಿಸುವ ಭಕ್ತರು ತಲಾ ಇಬ್ಬರಂತೆ ಮಾತ್ರ ಪಾಲ್ಗೊಳ್ಳಿ ಎಂದು ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಗಳು ಮನವಿ ಮಾಡಿದ್ದಾರೆ. 

ಕೊರೋನಾ ಆತಂಕ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಭಕ್ತರ ಹಿತದೃಷ್ಟಿಯಿಂದ ಕ್ಷೇತ್ರದ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಮತ್ತಿತರ ಸೇವೆಗಳನ್ನು ನೆರವೇರಿಸುವ ಭಕ್ತರು ಸೇವೆಗಳಿಗೆ ತಲಾ ಇಬ್ಬರಂತೆ ಮಾತ್ರ ಭಾಗವಹಿಸಿ, ಸಹಕರಿಸಿ ಎಂದು ದೇವಸ್ಥಾನದ ಆಡಳಿತ ಮನವಿ ಮಾಡಿದೆ.

ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ?...

ಏತನ್ಮಧ್ಯೆ, ರಾಜ್ಯದೆಲ್ಲೆಡೆ ಕೊರೋನಾ ಸೋಂಕಿನ ಆತಂಕದ ಪರಿಣಾಮ ಕ್ಷೇತ್ರದ ಭಕ್ತರ ಮೇಲೆ ಹೆಚ್ಚೇನೂ ಪರಿಣಾಮ ಬಿದ್ದಿಲ್ಲ. ಉರಿಬಿಸಿಲ ನಡುವೆಯೂ ಭಾನುವಾರ ಸಾಕಷ್ಟುಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ವಿಶೇಷ ಪೂಜೆ ಸಲ್ಲಿಸಿದರು.