ಸವಾಲಿನ ಹಾದಿ: ಹಿಂದುಳಿದ ತಾಲೂಕು ಕೂಡ್ಲಿಗಿ ಇನ್ನಾದರೂ ಪ್ರಗತಿಯ ಹಾದಿ ಹಿಡಿದಿತೇ?

ಕೂಡ್ಲಿಗಿ ಎಂದರೆ ಥಟ್ಟನೆ ನೆನಪಾಗುವುದು ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಒಂದು ಎಂದು. ಇಂಥ ಕ್ಷೇತ್ರದ ಅಭಿವೃದ್ಧಿ ಹಳಿಗೆ ತರುವ ಭಾರ ನೂತನ ಶಾಸಕರ ಮೇಲಿದೆ.

Kudligi assembly constituency  did the backward taluka join the path of progress rav

ಭೀಮಣ್ಣ ಗಜಾಪುರ

ಕೂಡ್ಲಿಗಿ (ಮೇ.21) : ಕೂಡ್ಲಿಗಿ ಎಂದರೆ ಥಟ್ಟನೆ ನೆನಪಾಗುವುದು ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಒಂದು ಎಂದು. ಇಂಥ ಕ್ಷೇತ್ರದ ಅಭಿವೃದ್ಧಿ ಹಳಿಗೆ ತರುವ ಭಾರ ನೂತನ ಶಾಸಕರ ಮೇಲಿದೆ.

ಕ್ಷೇತ್ರದ ನೂತನ ಶಾಸಕ ಡಾ. ಎನ್‌.ಟಿ. ಶ್ರೀನಿವಾಸ್‌ ಅವರು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಹಳೆಯ ಸಮಸ್ಯೆ, ಸವಾಲುಗಳಿಗೆ ನೂತನ ಶಾಸಕರು ಹೇಗೆ ಸ್ಪಂದಿಸುತ್ತಾರೆ ಎಂದು ಮತದಾರರು ಕಾತರದಿಂದ ಕಾಯುತ್ತಿದ್ದಾರೆ.

ಕ್ಷೇತ್ರದ ಹಲವೆಡೆ ಫೆä್ಲೕರೈಡ್‌ ನೀರಿನ ಸಮಸ್ಯೆ ಕಾಡುತ್ತಿದೆ. ಎಲ್ಲ ಹಳ್ಳಿಗೂ ಶುದ್ಧ ನೀರು ಪೂರೈಕೆ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳಿಸಿ ಜನರಿಗೆ ಶೀಘ್ರ ಶುದ್ಧ ನೀರು ಕೊಡುವ ಜವಾಬ್ದಾರಿ ನೂತನ ಶಾಸಕರ ಮೇಲಿದೆ. ಅಲ್ಲದೇ ಹಲವೆಡೆ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ. ಅವುಗಳನ್ನು ದುರಸ್ತಿಗೊಳಿಸಿ ಜನರಿಗೆ ಶುದ್ಧ ನೀರು ಪೂರೈಕೆಗೆ ಮುಂದಾಗಬೇಕಿದೆ.

ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಸಿದ್ದರಾಮಯ್ಯ: ವೈದ್ಯರಿಂದ ತಪಾಸಣೆ

ಸಾರಿಗೆ ಡಿಪೋಗೆ ಬೇಕು ಚಿಕಿತ್ಸೆ:

ಕೂಡ್ಲಿಗಿ ಈಶಾನ್ಯ ಸಾರಿಗೆ ಡಿಪೋ ಜಿಲ್ಲೆಯಲ್ಲಿಯೇ ಅತ್ಯಂತ ಹಳೆಯದು ಎಂಬ ಖ್ಯಾತಿ ಹೊಂದಿದೆ. ಆದರೆ ಇಲ್ಲಿನ ನಿರ್ವಹಣೆ ಮಾತ್ರ ಅವ್ಯವಸ್ಥೆಯಿಂದ ಕೂಡಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಅಲ್ಲದೇ ತಾಲೂಕಿನ ಶೇ. 65ರಷ್ಟುಹಳ್ಳಿಗಳಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳೇ ಸಂಚರಿಸುವುದಿಲ್ಲ. ಗುಡೇಕೋಟೆ, ಹೊಸಹಳ್ಳಿ ಹೋಬಳಿಯ ಹಳ್ಳಿಗಳ ಜನತೆ ಈಗಲೂ ಸಾರಿಗೆ ಬಸ್ಸುಗಳನ್ನು ನೋಡುವುದು ಚುನಾವಣೆ ದಿನ ಮಾತ್ರ. ಹೀಗಾಗಿ ಇಲ್ಲಿನ ಸಾರಿಗೆ ಡಿಪೋಗೆ ಮೊದಲು ಅಗತ್ಯ ಚಿಕಿತ್ಸೆ ನೀಡಬೇಕಿದೆ. ಪ್ರತಿ ಹಳ್ಳಿಗೂ ಬಸ್‌ ಸಂಚಾರಕ್ಕೆ ಆದ್ಯತೆ ಮೇಲೆ ಕ್ರಮ ವಹಿಸಬೇಕಿದೆ.

ಕೆರೆ ತುಂಬಿಸುವ ಯೋಜನೆ:

ಈ ಹಿಂದಿನ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ತಾಲೂಕಿನ 80 ಕೆರೆಗಳಿಗೆ ನೀರುಣಿಸುವ ಯೋಜನೆ ತಂದು ಕಾಮಗಾರಿ ಮುಗಿಯುವ ಹಂತಕ್ಕೆ ನೋಡಿಕೊಂಡಿದ್ದರು. ಚುನಾವಣೆಗೂ ಮುಂಚೆ ಕಾಮಗಾರಿ ಉದ್ಘಾಟನೆ ಮಾಡುವ ಆಸೆ ಇತ್ತು. ಆದರೆ ಪೈಪ್‌ಲೈನ್‌ ಮಾಡುವಾಗ ಕೆಲವು ರೈತರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿ 4- 5 ಕಿಮೀ ಸ್ಥಗಿತಗೊಂಡಿತ್ತು. ಹೀಗಾಗಿ ತಾಲೂಕಿನ ಕೆರೆಗಳಿಗೆ ನೀರು ಬರುವುದು ತಡವಾಯಿತು. ಈಗ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ನೂತನ ಶಾಸಕರು ಬಾಕಿ ಉಳಿದಿರುವ ಶೇ. 5ರಷ್ಟುಕಾಮಗಾರಿಯನ್ನು ಶೀಘ್ರ ಮುಗಿಸಿ ಕೆರೆ ತುಂಬಿಸಬೇಕಿದೆ.

ಕೂಡ್ಲಿಗಿಗೂ ಬರಲಿದೆ ರೈಲು ಮಾರ್ಗ; 5 ದಶಕಗಳ ಬೇಡಿಕೆ ಈಡೇರಿಕೆಗೆ ಕಾಲ ಸನ್ನಿಹಿತ

ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಹಂತ- ಹಂತವಾಗಿ ಬಗೆಹರಿಸುತ್ತೇನೆ. ಕ್ಷೇತ್ರದ ಜನತೆ, ಮುಖಂಡರು ನನಗೆ ಸಹಕಾರ, ಮಾರ್ಗದರ್ಶನ ನೀಡಿ ದಿಕ್ಸೂಚಿಯಾಗಬೇಕು. ಅಂದಾಗ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ.

ಡಾ. ಎನ್‌.ಟಿ. ಶ್ರೀನಿವಾಸ್‌, ಶಾಸಕ

Latest Videos
Follow Us:
Download App:
  • android
  • ios