ಮಂಗಳೂರು (ಸೆ.13): ಅನ್‌ಲಾಕ್‌ಡೌನ್‌ ವೇಳೆ ಗಡಿಪ್ರದೇಶದಲ್ಲಿ ಮುಕ್ತ ಸಂಚಾರಕ್ಕೆ ಕಿರಿಕ್‌ ಮಾಡಿದ್ದ ಕಾಸರಗೋಡು ಜಿಲ್ಲಾಡಳಿತ ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಅಂತಾರಾಜ್ಯ ಬಸ್‌ಸಂಚಾರ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದು ಸೆ.21ರಿಂದ ಕೆಎಸ್‌ಆರ್‌ಟಿಸಿ(ಕೇರಳ) ಬಸ್‌ಗಳನ್ನು ಓಡಿಸಲು ಮುಂದಾಗಿದೆ. 

ಹೀಗಾಗಿ ಬರೋಬ್ಬರಿ ಆರು ತಿಂಗಳ ಬಳಿಕ ಈ ಮಾರ್ಗದಲ್ಲಿ ಬಸ್‌ಗಳು ಓಡಾಡಲಿದ್ದು ಉಭಯ ರಾಜ್ಯಗಳ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ. 

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೇವೆ ...

ಪ್ರಯಾಣಿಕರ ಬೇಡಿಕೆಗನುಗುಣವಾಗಿ ಕೇರಳ ಬಸ್‌ಗಳು ರಸ್ತೆಗಿಳಿಯಲಿದ್ದು ಒಂದು ಬಸ್‌ನಲ್ಲಿ ತಲಾ 40 ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಸಿಗಲಿದೆ. ಕರ್ನಾಟಕ ಕೆಎಸ್ಸಾರ್ಟಿಸಿ ಬಸ್‌ ಪ್ರಾರಂಭಿಸುವ ಬಗ್ಗೆ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.