ಮೈಸೂರು ದಸರಾ: KSRTCಯಿಂದ ವಿಶೇಷ ಪ್ರವಾಸ ಪ್ಯಾಕೇಜ್..ಮಿಸ್ ಮಾಡ್ಕೊಬೇಡಿ
ನಾಡಹಬ್ಬ ದಸರಾಕ್ಕೆ ದಿನಗಣನೆ/ ಪ್ರವಾಸಿಗರಿಗೆ ವಿಶೇಷ ಟೂರ್ ಪ್ಯಾಕೇಜ್ ನೀಡಿದ KSRTC/ 4 ಐರಾವತ ಕ್ಲಬ್ ಕ್ಲಾಸ್ ಪ್ಯಾಕೇಜ್/ ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ ಪ್ಯಾಕೇಜ್/ ಕಡಿಮೆ ದರದಲ್ಲಿ ಐರಾವತ ಅನುಭವ
ಮೈಸೂರು[ಸೆ. 20] ಜಗತ್ತೇ ಮೆಚ್ಚಿಕೊಂಡಿರುವ ನಾಡಹಬ್ಬ ದಸರಾಕ್ಕೆ ದಿನಗಣನೆ ಆರಂಭವಾಗಿದ್ದು ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ[ಕೆಎಸ್ ಆರ್ ಟಿಸಿ] ವಿಶೇಷ ಪ್ಯಾಕೇಜ್ ಟೂರ್ ಕೊಡಮಾಡಿದೆ.
ದಸರಾ ರಜೆ, ವಾರಾಂತ್ಯ ರಜೆ ವೇಳೆ ದಸರಾ ವೀಕ್ಷಣೆಗೆ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವೇಗದೂತ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್ ಬಸ್ ಗಳಲ್ಲಿನ ವಿಶೇಷ ಅನುಭವ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್13 ರವರೆಗೆ ಪ್ರವಾಸಿಗರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಒಂದು ದಿನದ ವಿಶೇಷ ಪ್ರವಾಸ ಸೌಲಭ್ಯವನ್ನು ಕೆಎಸ್‌ಆರ್‌ಟಿಸಿ ನೀಡಿದೆ. ಮೈಸೂರಿನ ಸುತ್ತಮುತ್ತ ಅಂದರೆ ಮಡಿಕೇರಿ, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ತಲಕಾಡು, ಊಟಿ, ಶಿಂಷಾ,ಬಂಡೀಪುರಕ್ಕೆ ಒಂದು ದಿನದ ಪ್ರವಾಸ ಕೈಗೊಳ್ಳಬಹುದು. 4 ಐರಾವತ ಕ್ಲಬ್ ಕ್ಲಾಸ್ ಪ್ಯಾಕೇಜ್ ನೀಡಲಾಗಿದೆ.
1. ಮಡಿಕೇರಿ: ಗೋಲ್ಡನ್ ಟೆಂಪಲ್, ನಿಸರ್ಗಧಾಮ, ಹಾರಂಗಿ, ರಾಜಾಸೀಟ್, ಅಬ್ಬಿ ಜಲಪಾತ ನೋಡಿಕೊಂಡು ಬರಬಹುದು. ಬೆಳಗ್ಗೆ 6.30. ಮೈಸೂರಿನ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಹೊರಡಲಿದ್ದು ಒಬ್ಬರಿಗೆ 1200 ರೂ. ನಿಗದಿ ಮಾಡಲಾಗಿದೆ.
2. ಊಟಿ: ಸರಕಾರಿ ಬಟಾನಿಕಲ್ ಉದ್ಯಾನ, ರೋಸ್ ಮತ್ತು ಇಟಾಲಿಯನ್ ಉದ್ಯಾನ, ಬೋಟ್ ಹೌಸ್, ಹೊರಡುವ ಸಮಯ ಬೆಳಗ್ಗೆ 6 ಗಂಟೆ, ಒಬ್ಬರಿಗೆ 1600 ರೂಪಾಯಿ ದರ ಇದೆ.
ರಾಜ್ಯದ 20 ಪ್ರವಾಸಿ ಸ್ಥಳಗಳು ಶೀಘ್ರ ವಿಶ್ವದರ್ಜೆಗೆ!
3. ಬಂಡೀಪುರ: ಸೋಮನಾಥಪುರ, ತಲಕಾಡು, ಮುಡುಕುತೊರೆ, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ರಾಷ್ಟ್ರೀಯ ಅರಣ್ಯ, ನಂಜನಗೂಡು ತಾಣಗಳನ್ನು ಕಣ್ಣು ತುಂಬಿಕೊಳ್ಳಬಹುದು. ಬೆಳಗ್ಗೆ 6.30 ಬಸ್ ಹೊರಡಲಿದ್ದು ಒಬ್ಬರಿಗೆ1000 ರೂ. ನಿಗದಿ ಮಾಡಲಾಗಿದೆ.
4. ಶಿಂಷಾ: ಶಿಂಷಾ (ಗಗನಚುಕ್ಕಿ ಮತ್ತು ಭರಚುಕ್ಕಿ), ನಿಮಿಷಾಂಬಾ ದೇವಸ್ಥಾನ, ಶ್ರೀರಂಗಪಟ್ಟಣ, ರಂಗನತಿಟ್ಟು ಪಕ್ಷಿಧಾಮ, ಬಲಮುರಿ, KRS . ಬೆಳಗ್ಗೆ 6.30 ಬಸ್ ಹೊರಡಲಿದ್ದು ಒಬ್ಬರಿಗೆ 800 ರೂ. ಇದೆ.
ಜತೆಗೆ 3 ಪ್ಯಾಕೇಜ್‌ಗಳಲ್ಲಿ ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ ಸೌಲಭ್ಯವನ್ನೂ ಕೆಎಸ್‌ಆರ್‌ಟಿಸಿ ಒದಗಿಸಿದೆ. ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ದೇವಾಲಯ, ಪ್ರವಾಸಿ ತಾಣ, ಅರಣ್ಯ ಪ್ರದೇಶ ಹಾಗೂ ಜಲಪಾತಗಳನ್ನು ಪ್ರವಾಸಿಗರು ವೀಕ್ಷಿಸಬಹುದು. ಬೆಳಗ್ಗೆ 6.30ಕ್ಕೆ ಮೈಸೂರಿನ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಹೊರಡಲಿದೆ.
1. ಗಿರಿದರ್ಶಿನಿ ಪ್ಯಾಕೇಜ್: ಈ ಪ್ಯಾಕೇಜ್‌ನಲ್ಲಿ ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ, ಬಂಡೀಪುರ ಹಾಗೂ ಗೋಪಾಲಸ್ವಾಮಿ ಬೆಟ್ಟಗೆ ಭೇಟಿ ನೀಡಬಹುದು. ಬೆಳಗ್ಗೆ 6.30. ದರ, ವಯಸ್ಕರಿಗೆ 350 ರೂ., ಮಕ್ಕಳಿಗೆ 175 ರೂ ನಿಗದಿ ಮಾಡಲಾಗಿದೆ.
2. ದೇವದರ್ಶಿನಿ ಪ್ಯಾಕೇಜ್: ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್‌ಎಸ್ ತೋರಿಸಲಾಗುತ್ತದೆ. ವಯಸ್ಕರಿಗೆ 275, ಮಕ್ಕಳಿಗೆ 140 ರೂ. ನಿಗದಿ ಮಾಡಲಾಗಿದೆ.
3. ಜಲದರ್ಶಿನಿ ಪ್ಯಾಕೇಜ್: ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗ ಧಾಮ, ಅಬ್ಬಿ ಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯ, ಕೆಆರ್‌ಎಸ್ ಜಲಾಶಯ. ಹೊರಡುವ ಸಮಯ ವಯಸ್ಕರಿಗೆ 375, ಮಕ್ಕಳಿಗೆ 190 ರೂ. ಹೆಚ್ಚಿನ ಮಾಹಿತಿಗೆ ಮೊಬೈಲ್ KSRTC ಬುಕಿಂಗ್ 7760990822 ಸಂಪರ್ಕಿಸಬಹುದು.