ಗಂಗಾವತಿ [ಸೆ.09]: ಮಗಳು ಮೃತಪಟ್ಟಸುದ್ದಿಯನ್ನು ತಂದೆ (ಕಂಡೆಕ್ಟರ್‌)ಗೆ ತಿಳಿಸಲು ವಿಳಂಬ ಮಾಡಿದ ಆರೋಪದ ಮೇಲೆ ಈಶಾನ್ಯ ಸಾರಿಗೆ ಘಟಕದ ಸಹಾಯಕ ನಿಯಂತ್ರಣಾಧಿಕಾರಿ ಅಮಾನತು ಮಾಡಲಾಗಿದೆ.

ನಿಯಂತ್ರಣಾಧಿಕಾರಿ ಹೇಮಾವತಿ ಅವರನ್ನು ಈಶಾನ್ಯ ಸಾರಿಗೆ ಘಟಕದ ಜಿಲ್ಲಾ ನಿಯಂತ್ರಣಾಧಿಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

4 ದಿನಗಳ ಹಿಂದೆ ಗಂಗಾವತಿ- ಕೊಲ್ಲಾಪುರ ಬಸ್‌ನ ನಿರ್ವಾಹಕ ಮಂಜುನಾಥ ಎನ್ನುವವರ ಪುತ್ರಿ ಮೃತಪಟ್ಟಿದ್ದರು. ಆದರೆ, ಮಂಜನಾಥ್‌ ಅವರಿಗೆ ಈ ಸುದ್ದಿ ತಿಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂಬ ಕಾರಣಕ್ಕೆ ಹೇಮಾವತಿ ಅವರನ್ನು ಅಮಾನತು ಮಾಡಲಾಗಿದೆ.