ಅಪಘಾತ ತಪ್ಪಿಸಲು ಹೋಗಿ ಉರುಳಿ ಬಿದ್ದ KSRTC ಬಸ್
- ಅಪಘಾತ ತಪ್ಪಿಸಲು ಹೋಗಿ KSRTC ಬಸ್ ಗದ್ದೆಗೆ ಉರುಳಿದ ಘಟನೆ ತುಮಕೂರಿನಲ್ಲಿಂದು ನಡೆದಿದೆ
- ಕಾರು ಮತ್ತು ಕೆ.ಎಸ್.ಆರ್.ಟಿಸಿ ಬಸ್ ನಡುವೆ ಅಪಘಾತ ತಪ್ಪಿಸಲು ಹೋಗಿ ದುರಂತ
ತುಮಕೂರು (ಸೆ.12): ಅಪಘಾತ ತಪ್ಪಿಸಲು ಹೋಗಿ KSRTC ಬಸ್ ಗದ್ದೆಗೆ ಉರುಳಿದ ಘಟನೆ ತುಮಕೂರಿನಲ್ಲಿಂದು ನಡೆದಿದೆ.
ಕೊರಟಗೆರೆ ತಾಲೂಕಿನ ತಣ್ಣೇನಹಳ್ಳಿ ಬಳಿ ಘಟನೆ ನಡೆದಿದೆ.
ಕಾರು ಮತ್ತು ಕೆ.ಎಸ್.ಆರ್.ಟಿಸಿ ಬಸ್ ನಡುವೆ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಕಾರು ತಪ್ಪಿಸಲು ಹೋಗಿ ಬಸ್ ಉರುಳಿದೆ. ಕೆ.ಎಸ್ ಆರ್ ಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.
ಚಾಲಕಗೆ ಲೋ BP:ನಿಯಂತ್ರಣ ತಪ್ಪಿ ಕ್ಯಾಂಟರ್‌ಗೆ ಡಿಕ್ಕಿಯಾದ KSRTC ಬಸ್
ಬೆಂಗಳೂರಿನಿಂದ ಕೊರಟಗೆರೆಯತ್ತ ಹೋಗುತಿದ್ದ ಬದ್ ಕೊರಟಗೆರೆಯಿಂದ ಬೆಂಗಳೂರಿನತ್ತ ಹೊರಟಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಚಾಲಕ ಗದ್ದೆಗೆ ಬಸ್ ಇಳಿಸಿದ್ದ ವೇಳೆ ಉರುಳಿ ಬಿದ್ದಿದೆ.
ಅದಷ್ಟವಶಾತ್ ಕಾರು ಮತ್ತು ಬಸ್ಸಿನಲ್ಲಿದ್ದವರೆಲ್ಲಾ ಸುರಕ್ಷಿತರಾಗಿದ್ದಾರೆ. ಬಸ್ ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.