ಚಾಲಕನಿಗೆ ಲೋ ಬಿಪಿಯಿಂದಾಗಿ ನಿಯಂತ್ರಣ ತಪ್ಪಿದ KSRTC ಬಸ್ ಕ್ಯಾಂಟರ್‌ಗೆ ಡಿಕ್ಕಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲುಕಿನ ಬಾಬುರಾಯನಕೊಪ್ಪಲು ಬಳಿ ಇಂದು ದುರ್ಘಟನೆ
ಮಂಡ್ಯ (ಸೆ.12): ಚಾಲಕನಿಗೆ ಲೋ ಬಿಪಿಯಿಂದಾಗಿ ನಿಯಂತ್ರಣ ತಪ್ಪಿದ KSRTC ಬಸ್ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲುಕಿನ ಬಾಬುರಾಯನಕೊಪ್ಪಲು ಬಳಿ ಇಂದು ದುರ್ಘಟನೆಯಾಗಿದೆ.
KSRTC ಲಾಭದತ್ತ ಒಯ್ಯಲು ತಜ್ಞರ ಸಮಿತಿ
KSRTC ಬಸ್ ಚಾಲಕ ಮಂಜುನಾಥ್‌ಗೆ ಲೊ ಬಿಪಿಯಾಗಿದ್ದು, ಬಸ್ ನಿಯಂತ್ರನ ಕಳೆದುಕೊಂಡು ಡಿಕ್ಕಿ ಸಂಭವಿಸಿದೆ. ಮೈಸೂರಿನಿಂದ ಬೆಂಗಳೂರು ಕಡೆ ತೆರಳುತ್ತಿದ್ದ ನಂಜನಗೂಡು ಡಿಪೋಗೆ ಸೇರಿದ KSRTC ಬಸ್ ಅಪಘಾತಕ್ಕೀಡಾಗಿದೆ.
ಅಪಘಾತದಿಂದ ಚಾಲಕ ಮಂಜುನಾಥ್‌ಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಮತ್ತ್ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
