ಸಿದ್ದಾಪುರದಲ್ಲಿ ಸ್ಟೇರಿಂಗ್‌ ತುಂಡಾಗಿ ಕಂದಕಕ್ಕೆ ಬಿದ್ದ ಕೆಎಸ್‌ಆರ್‌ಟಿಸಿ ಬಸ್‌: 47 ಪ್ರಯಾಣಿಕರಿಗೆ ಗಾಯ

ಸುಮಾರು 45ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಸಿದ್ದಾಪುರ ತಾಲೂಕಿನ 16ನೇ ಮೈಲಿಕಲ್‌ ಬಳಿ ಸ್ಟೇರಿಂಗ್‌ ತುಂಡಾಗಿ ಕಂದಕಕ್ಕೆ ಉರುಳಿ ಬಿದ್ದಿದೆ.

KSRTC bus falls into ditch with steering broken in Siddapur passenger injured sat

ಉತ್ತರಕನ್ನಡ (ಏ.04): ಸುಮಾರು 45ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ 16ನೇ ಮೈಲಿಕಲ್‌ ಬಳಿ ಸ್ಟೇರಿಂಗ್‌ ತುಂಡಾಗಿ ಕಂದಕಕ್ಕೆ ಉರುಳಿ ಬಿದ್ದಿದೆ.

ರಾಜ್ಯದಲ್ಲಿ ನಿನ್ನೆ ಮಂಡ್ಯ ಜಿಲ್ಲೆಯ ಕನಗನಮರಡಿ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಸ್ಟೇರಿಂಗ್‌ ಲಾಕ್‌ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ್ದು 20ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ತಾಲೂಕಿನ 16ನೇ ಮೈಲಿಕಲ್‌ ಬಳಿ ಕೆಎಸ್‌ಆರ್‌ಟಿಸಿ ಬಸ್‌ನ ಸ್ಟೇರಿಂಗ್‌ ತುಂಡಾಗಿ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ, ಬಸ್‌ ಬಿದ್ದರೂ ಅದು ಪಾತಾಳಕ್ಕೆ ಬೀಳದಂತೆ ಮರಗಳು ತಡೆದಿವೆ. ಇನ್ನು ಬಸ್‌ನಲ್ಲಿ ಇದ್ದ 47 ಪ್ರಯಾಣಿಕರು ಕೂಡ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Mandya Breaking : ಸ್ಟೇರಿಂಗ್‌ ಕಟ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್

ಹಳಿಯಾಳ ಡಿಪೋ ಬಸ್: ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಹಳಿಯಾಳ ಕಡೆಗೆ ಹೊರಟಿದ್ದ ಬಸ್‌ ಇಲ್ಲಿ ಉರುಳಿ ಬಿದ್ದಿದೆ. ಇನ್ನು ಕೆಎಸ್‌ಆರ್‌ಟಿಸಿ ಬಸ್‌ ಹಳಿಯಾಳ ಡಿಪೋಗೆ ಸೇರಿದ್ದಾಗಿದ್ದು, ಬಸ್‌ನ ಚಾಲಕ, ನಿರ್ವಾಹಕ ಒಳಗೊಂಡಂತೆ ಎಲ್ಲ 47 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಬಸ್‌ ಉರುಳಿಬಿದ್ದ ಹಿನ್ನೆಲೆಯಲ್ಲಿ ಬಹುತೇಕ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರ ನೆರವಿನಿಂದ ಬಸ್‌ನೊಳಗಿದ್ದ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕೆಲವರು ನಮಗೆ ಯಾವುದೇ ಗಾಯವಾಗಿಲ್ಲ ಎಂದು ಬೇರೊಂದು ಬಸ್‌ ಹತ್ತಿ ತಮ್ಮ ಊರಿನತ್ತ ಹೊರಟಿದ್ದಾರೆ.

ಈಶಾನ್ಯ, ವಾಯುವ್ಯ ಸಾರಿಗೆಯಲ್ಲಿ ಕಳಪೆ ಬಸ್‌:  ರಾಜ್ಯದಲ್ಲಿ ಬೆಂಗಳೂರು ವಿಭಾಗವನ್ನು ಬಿಟ್ಟರೆ ಉಳಿದಂತೆ ಈಶಾನ್ಯ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ವಿಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಗುಯಣಮಟ್ಟವಾಗಿಲ್ಲ ಎಂದು ಆರೋಪ ಕೇಳಿಬಂದಿದೆ. ಈ ಆರೋಪದ ಬೆನಲ್ಲೇ ಹಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಅಪಘಾತಕ್ಕೆ ಈಡಾಗುತ್ತಿದ್ದು, ಸಾರಿಗೆ ಇಲಾಖೆಯ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಹೊಸ ಬಸ್‌ಗಳನ್ನು ಖರೀದಿಸಿ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಜನಪ್ರತಿನಿಧಿಗಳು ಹೇಳುತ್ತಿದ್ದರೂ ಕಾರ್ಯಗತ ಮಾತ್ರ ಆಗಿಲ್ಲ. ಈ ಹಿನ್ನೆಲೆಯಲ್ಲಿ ಹಳೆಯ ಬಸ್‌ಗಳೇ ಸಂಚಾರ ಮಾಡುತ್ತಿವೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನೈಸ್‌ ರಸ್ತೆಯಲ್ಲಿ ಬೈಕ್‌ ಟೈರ್‌ ಬಸ್ಟ್‌: ತಡೆಗೋಡೆಗೆ ಗುದ್ದಿ ಇಂಜಿನಿಯರ್‌ ಸಾವು

ನಿನ್ನೆ ಮಂಡ್ಯದಲ್ಲಿ ಬಸ್‌ ಸ್ಟೇರಿಂಗ್‌ ಲಾಕ್‌: ಮಂಡ್ಯ ಜಿಲ್ಲೆಯ ಬಸ್‌ ಅಪಘಾತದ ಸ್ಥಳವೆಂದೇ ಹೇಳಲಾಗುವ  ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ನಿನ್ನೆ ಕೆಎಸ್‌ಆರ್‌ಟಿಸಿ ಬಸ್‌ನ ಸ್ಟೇರಿಂಗ್‌ ಲಾಕ್‌ ಆಗಿ ರಸ್ತೆ ಪಕ್ಕದ ಕಬ್ಬಿನ ಗದ್ದೆಗೆ ಬಸ್‌ ನುಗ್ಗಿದ ಘಟನೆ ನಡೆದಿತ್ತು. ಸುಮಾರು 30ಕ್ಕೂ ಅಧಿಕ ಪ್ರಯಾಣಿಕರು ಇದ್ದ ಕೆಎಸ್‌ಆರ್‌ಟಿಸಿ ಬಸ್‌ನ ಲಾಕ್‌ ಆಗಿದ್ದು, ಪಕ್ಕದಲ್ಲಿಯೇ ಇದ್ದ ಕಬ್ಬಿನ ಗದ್ದೆಗೆ ನುಗ್ಗಿದೆ. ಒಂದು ವೇಳೆ ಬಸ್‌ ಏನಾದರೂ ಇನ್ನೊಂದು ಬದಿಯಲ್ಲಿನ ದೊಡ್ಡ ಕಾಲುವೆಗೆ ಬಿದ್ದಿದ್ದರೆ ದೊಡ್ಡ ಅಪಘಾತ ಹಾಗೂ ಸಾವು ನೋವು ಉಂಟಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಸ್ಟೇರಿಂಗ್‌ ತುಂಡಾದ ನಂತರ ಚಾಲಕನ ಸಮಯ ಪ್ರಜ್ಞೆಯಿಂದ ಬಸ್‌ ಅನ್ನು ಗದ್ದೆಗೆ ನುಗ್ಗಿಸಿ ನಿಲ್ಲಿಸಿದ್ದಾರೆ. ಈ ಮೂಲಕ ಪ್ರಯಾಣಿಕರ ಜೀವ ಉಳಿಸಿದ್ದಾರೆ.

Latest Videos
Follow Us:
Download App:
  • android
  • ios