ಕಾರ್ಮಿಕರನ್ನು ಬಿಟ್ಟು ವಾಪಸ್‌ ಆಗುತ್ತಿದ್ದ ಬಸ್ ಅಪಘಾತ: ಮಾನವೀಯತೆ ಮೆರೆದ ಡಿಸಿಎಂ

ಬೆಂಗಳೂರಿನಲ್ಲಿ ಕಾರ್ಮಿಕರನ್ನು ಬಾಗಲಕೋಟೆಗೆ ಬಿಟ್ಟು ವಾಪಸ್ ಆಗಮಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ವೊಂದು ಅಪಘಾತಕ್ಕಿಡಾಗಿರುವ ಘಟನೆ ಸಂಭವಿಸಿದೆ.

KSRTC Bus accident Near Bellary after Drop migrant workers at Bagalkot

ಬಳ್ಳಾರಿ, (ಮೇ.03): ಲಾಕ್ ಡೌನ್ ಕಾರಣದಿಂದಾಗಿ ಬೆಂಗಳೂರಿನಲ್ಲಿ ಸಿಲುಕಿದ್ದ ಬಾಗಲಕೋಟೆ ಕಾರ್ಮಿಕರನ್ನು ಕರೆದೊಯ್ದು ವಾಪಸ್ ಆಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಅಪಘಾತಕ್ಕಿಡಾಗಿದೆ.

ಬೆಂಗಳೂರಿನಿಂದ ಕರೆದೊಯ್ದು ಬಾಗಕೋಟೆಗೆ ಕಾರ್ಮಿಕರನ್ನು  ಬಿಟ್ಟು ವಾಪಸ್ ರಾಮನಗರಕ್ಕೆ ಬರುವಾಗ ಇಂದು (ಭಾನುವಾರ) ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಸಮೀಪ ಈ ದುರ್ಘಟನೆ ಸಂಭವಿಸಿದೆ.

ಸುವರ್ಣ ನ್ಯೂಸ್‌ ಬಿಗ್‌ ಇಂಪ್ಯಾಕ್ಟ್‌: ಮೂರು ದಿನ KSRTC ಬಸ್‌ ಸಂಚಾರ ಉಚಿತ..!

ಅದೇ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ನೋಡಿ ಕಾರು ನಿಲ್ಲಿಸಿದ್ದಾರೆ.

KSRTC Bus accident Near Bellary after Drop migrant workers at Bagalkotಬಳಿಕ ಗಾಯಾಳು  ಶರಣಪ್ಪ ಅವರನ್ನು ಉಪಚರಿಸಿ  ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕಳುಹಿಸಿದ್ದಲ್ಲದೇ, ಗಾಯಾಳುಗಳಿಗೆ ಹಣ ನೀಡಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನಲ್ಲಿ ಲಾಕ್‌ ಆಗಿರುವ ವಲಸೆ ಕಾರ್ಮಿಕರನ್ನು ರಾಜ್ಯ ಸರ್ಕಾರ ಅವರವರ ಊರಿಗೆ ಕಳುಹಿಸುತ್ತಿದೆ. ಅದರಂತೆ ಈ ಬಸ್‌ ಸಹ ಬೆಂಗಳೂರಿನಿಂದ ಕಾರ್ಮಿಕರನ್ನು ಕರೆದುಕೊಂಡು ಬಾಗಲಕೋಟೆ ಹೋಗಿತ್ತು. 
KSRTC Bus accident Near Bellary after Drop migrant workers at Bagalkotಬದುಕು ಕಟ್ಟಿಕೊಳ್ಳಲು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಕದ ಭಾಗಗಾದೆಷ್ಟೋ ಜನರು ಬೆಂಗಳೂರಿಗೆ ವಲಸೆ ಬಂದಿದ್ದು, ನಾನಾ ಕೆಲಸ ಮಾಡುತ್ತಿದ್ದರು. ಆದ್ರೆ, ಕೊರೋನಾ ತಂದ ಅವಾಂತರದಿಂದ ಬದುಕು ಕಟ್ಟಿಕೊಳ್ಳಲು ಬಂದವರು ಇದೀಗ ಬದುಕಲು ತಮ್ಮ-ತಮ್ಮ ಊರಿಗೆ ಮರಳುತ್ತಿದ್ದಾರೆ. ಮೊದಲ ಲಾಕ್‌ಡೌನ್ ಘೋಷಣೆ ಮಾಡಿದ್ದಾಗಿನಿಂದ ಕಾರ್ಮಿಕರು ತವರಿಗೆ ತೆರಳಲು ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಈಗ ರಾಜ್ಯ ಸರ್ಕಾರವೇ ಅವರವರ ಊರಿಗೆ ತೆರಳು ಉಚಿತ ಕೆಎಸ್‌ಆರ್‌ಟಿಸಿ ಬಸ್ ಬಿಟ್ಟಿದೆ.

Latest Videos
Follow Us:
Download App:
  • android
  • ios