ಹಾಸನ [ಜ.30]: ಸಾರಿಗೆ ಬಸ್ ಹಾಗೂ ಮೂರು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಮೂವರು ಸ್ಥಳದಕ್ಕೇ ಸಾವಿಗೀಡಾಗಿದ್ದಾರೆ. 

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸೂಳೆಕೆರೆ ಬಳಿ ಅಪಘಾತವಾಗಿದೆ. 11ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

 ಬೆಂಗಳೂರು - ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಘಟನೆ ನಡೆದಿದೆ. 

ಮಂಗಳೂರು - ಬಳ್ಳಾರಿ ಮತ್ತೊಂದು ಬಸ್ ಸೇವೆ : ಶಿವಮೊಗ್ಗ ಮೂಲಕ ಸಂಚಾರ.

ಕೆಎಸ್ ಆರ್ ಟಿಸಿ ಬಸ್, ಟಾಟಾ ಮ್ಯಾಜಿಕ್ ಹಾಗೂ ಗೂಡ್ಸ್ ಗಾಡಿ ನಡುವೆ ಅಪಘಾತವಾಗಿದ್ದು,  ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅರಸೀಕೆರೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.