ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಹೊಡೆಯಬೇಕು: ಕೆ.ಎಸ್.ಈಶ್ವರಪ್ಪ
ಮಂಗಳೂರಿನಲ್ಲಿ ನಡೆದ ಬ್ಲಾಸ್ಟ್ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ. ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಹೊಡೆಯಬೇಕು ಅಥವಾ ನೇಣುಗಂಬಕ್ಕೆ ಏರಿಸಬೇಕು ಎಂದಿದ್ದಾರೆ.
ಶಿವಮೊಗ್ಗ (ನ.21): ಮಂಗಳೂರಿನಲ್ಲಿ ನಡೆದ ಬ್ಲಾಸ್ಟ್ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ. ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಹೊಡೆಯಬೇಕು ಅಥವಾ ನೇಣುಗಂಬಕ್ಕೆ ಏರಿಸಬೇಕು. ಹಿಂದೆ ಬಾಂಬ್ ಬ್ಲ್ಯಾಸ್ಟ್ ಎಂಬುದು ಮಾಮೂಲಿಯಾಗಿ ಹೋಗಿತ್ತು. ಇವರಿಗೆ ಎಲ್ಲೂ ಏನೂ ಭಯವಿಲ್ಲದಂತಾಗಿದೆ. ಮಗ, ಮಗಳು, ದೇಶದ್ರೋಹಿ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿರುವುದು ಕೂಡ ಮಾಮೂಲಿಯಾಗಿದೆ. ಅವರವರ ತಂದೆ, ತಾಯಿಗಳು ಇವರಿಗೆಲ್ಲಾ ಬಿಗಿ ಮಾಡಬೇಕು. ಸಮಾಜ ಕೂಡ ಈ ಬಗ್ಗೆ ಗಮನಿಸಬೇಕು. ಯಾರು ಇವರಿಗೆ ಬೆಂಬಲ ಕೊಡುತ್ತಿದ್ದಾರೆ. ಯಾವ ಸಂಘಟನೆ, ರಾಜಕೀಯ ಪಕ್ಷಗಳು ಇವರಿಗೆ ಬೆಂಬಲ ಕೊಡುತ್ತಿದ್ದಾರೆಂಬುದು ಗೊತ್ತಾಗಬೇಕಿದೆ. ಸಮಾಜ ಈ ಬಗ್ಗೆ ಗಮನಿಸಿದರೆ, ಸರಿ ಮಾಡಬಹುದು. ರಾಷ್ಟ್ರದ್ರೋಹಿಗಳ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳುತ್ತೆವೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಖ್ಯಸ್ಥರು ಹೇಳುತ್ತಿರುತ್ತಾರೆ. ಏನು ಬಿಗಿ ಕ್ರಮ ತೆಗೆದುಕೊಂಡಿದ್ದಿರಾ ಎಂದು ನೊಂದವರು ಪ್ರಶ್ನೆ ಮಾಡುತ್ತಾರೆ.
ನಾನು ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿಗೆ ನಾನು ಪ್ರಾರ್ಥನೆ ಮಾಡುತ್ತೇನೆ. ಸೈನಿಕರ ಮೇಲೆ ದಾಳಿ ಮಾಡಿದಾಗ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ಹಾಗೆ, ಇವರ ಮೇಲೆಯೂ ಬಿಗಿ ಕ್ರಮ ತೆಗೆದುಕೊಳ್ಳಬೇಕು. ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಅಥವಾ ನೇಣುಗಂಬಕ್ಕೆ ಏರಿಸಬೇಕು. ಹಿಂದೆ ಆಗುವ ಕ್ರಮಕ್ಕಿಂತ ಈಗ ಬಿಗಿ ಕ್ರಮ ಆಗಿದೆ. ಆದರೂ ಇನ್ನೂ ಹೆಚ್ಚು ಬಿಗಿ ಕ್ರಮವಾಗಬೇಕು. ಸತ್ತಂತ ವ್ಯಕ್ತಿಗಳ ಪಟ್ಟಿ ಓದುವುದಕ್ಕೆ ನಾವು ಇರುವುದಲ್ಲ. ರಾಷ್ಟ್ರದ್ರೋಹಿಗಳಿಗೆ ಮನಸ್ಸು ಪರಿವರ್ತನೆ ಮಾಡುವುದಾದರೆ ಮಾಡಲಿ. ಇಲ್ಲವಾದರೆ ಸರ್ಕಾರ, ಇವರಿಗೆ ಉಗ್ರವಾದ ಶಿಕ್ಷೆ ಕೊಡಲೇಬೇಕು. ಈ ನಿಟ್ಟಿನಲ್ಲಿ ಕಾನೂನು ಜಾರಿಯಾಗಬೇಕು. ಬ್ಲ್ಯಾಸ್ಟ್ ಆಯ್ತು ಎಂದ ಕೂಡಲೇ ಏನು ಉತ್ತರ ಕೊಡಬೇಕು....? ನನಗೆ ಬಹಳ ನೋವಾಗುತ್ತಿದೆ. ದಯಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.
ಆರೋಪಿ ಗುರುತು ಪತ್ತೆಗೆ ಸಂಬಂಧಿಕರಿಗೆ ಬುಲಾವ್: ಮಂಗಳೂರಿನಲ್ಲಿ ಶನಿವಾರ ಆಟೋದಲ್ಲಿ ಸಂಭವಿಸಿದ ಸ್ಫೋಟದಿಂದ ಗಾಯಗೊಂಡಿರುವ ಆರೋಪಿ ಗುರುತಿಗಾಗಿ ಅವನ ಸಂಬಂಧಿಗಳನ್ನು ಕರೆಸಿದ್ದೇವೆ. ಭಾನುವಾರ ಮಧ್ಯರಾತ್ರಿ ಅವರು ಮಂಗಳೂರಿಗೆ ಬರಲಿದ್ದಾರೆ. ಸದ್ಯ ಆರೋಪಿಯ ಮುಖ ಸುಟ್ಟಗಾಯಗಳಿಂದ ಊದಿಕೊಂಡಿದ್ದು, ಮಾತನಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಆರೋಪಿಯ ಗುರುತು ಪತ್ತೆ ನಡೆಯಬೇಕಿದೆ. ಒಂದೋ ಡಿಎನ್‌ಎ ಅಥವಾ ಸಂಬಂಧಿಕರಿಂದ ಗುರುತು ಪತ್ತೆ ನಡೆಸಬೇಕಿದೆ. ಈ ಕಾರಣಕ್ಕಾಗಿ ಆತನ ಸಂಬಂಧಿಕರನ್ನು ಕರೆಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
Mangaluru: ಕುಕ್ಕರ್ ಬಾಂಬ್ ಸ್ಫೋಟಿಸಿದ್ದು ಗೋಡೆ ಬರಹದ ಆರೋಪಿ ಶಾರೀಕ್?
ಘಟನೆ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮಂಗಳೂರಿಗೆ ಆಗಮಿಸಿದ ಅವರು ಆಸ್ಪತ್ರೆ ಭೇಟಿ, ಸ್ಥಳ ಪರಿಶೀಲನೆ, ಸ್ಥಳೀಯರೊಂದಿಗೆ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆರೋಪಿಯ ಗುರುತು ಖಚಿತಪಡಿಸಿದ ಬಳಿಕವೇ ಹೇಳುತ್ತೇವೆ. ಸೋಮವಾರ ಈ ಬಗ್ಗೆ ಸ್ಪಷ್ಟಮಾಹಿತಿ ನೀಡುವುದಾಗಿ ಹೇಳಿದರು.
ಮಂಗಳೂರಿನಲ್ಲಿ ಬಾಂಬ್ ಸ್ಫೋಟ, ಕೊಡಗಿನಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಪರಿಶೀಲನೆ
ಆರೋಪಿ ಎಂದು ಗುರುತಿಸಿಕೊಂಡಾತನಿಗೆ ಶೇ.45ರಷ್ಟುಸುಟ್ಟಗಾಯಗಳಾಗಿವೆ. ಅವನು ಕೈ ಚಿಹ್ನೆಯ ಮೂಲಕ ಮಾತ್ರ ಪ್ರಶ್ನೆಗೆ ಉತ್ತರ ಹೇಳುತ್ತಿದ್ದಾನೆ. ಸದ್ಯದ ವಿಚಾರಣೆಯಿಂದ ಬಹಳಷ್ಟುಮಾಹಿತಿ ಸಿಕ್ಕಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿ ಮಂಗಳೂರಿನಲ್ಲಿ ಎಲ್ಲೆಲ್ಲ ಹೋಗಿದ್ದಾನೆ, ಯಾರ ಜೊತೆ ಸಂಪರ್ಕದಲ್ಲಿದ್ದಾನೆ ಅನ್ನೋದನ್ನು ತನಿಖೆ ಮಾಡಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಬೇರೆ ಬೇರೆ ಆಂಗಲ್‌ನಲ್ಲಿ ತನಿಖೆ ನಡೆಯಲಿದೆ. ಅದರ ಬಳಿಕವೇ ಖಚಿತವಾಗಿ ಆರೋಪಿಯ ರೋಲ್ ಬಗ್ಗೆ ತಿಳಿಯಲಿದೆ ಎಂದರು.