Asianet Suvarna News Asianet Suvarna News

ಶೂ ಹಾಕಿಕೊಂಡೇ ಕೆರೆಗೆ ಪೂಜೆ ಮಾಡಿದ ಈಶ್ವರಪ್ಪ

ಬಾಗಲಕೋಟೆ ಜಿಲ್ಲೆಯ ಅತೀ ದೊಡ್ಡ ಕೆರೆಯಾದ ಕಳಸಕೊಪ್ಪ ಕೆರೆ ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಿನ ಅರ್ಪಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೀಳಗಿ ಶಾಸಕ ಮುರುಗೇಶ ನಿರಾಣಿ ಜತೆಗೂಡಿ ಕಾರ್ಯಕ್ರಮಕ್ಕೆ ಆಗಮಿಸಿದ ಈಶ್ವರಪ್ಪ, ಶೂ ಹಾಕಿಕೊಂಡೇ ಕೆರೆಗೆ ಕರ್ಪೂರದ ಆರತಿ ಬೆಳಗಿದ್ದಾರೆ. ಸದ್ಯ ಈ ವಿಚಾರ ವಿವಾದಕ್ಕೆ ಕಾರಣವಾಗಿದೆ.

KS Eshwarappa offers pooja to lake wearing shoes
Author
Bagalkot, First Published Nov 10, 2018, 9:31 AM IST

ಬಾಗಲಕೋಟೆ[ನ.11]: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಶೂ ಧರಿಸಿಯೇ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಕಳಸಕೊಪ್ಪದಲ್ಲಿ ಶುಕ್ರವಾರ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಅತೀ ದೊಡ್ಡ ಕೆರೆಯಾದ ಕಳಸಕೊಪ್ಪ ಕೆರೆ ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಿನ ಅರ್ಪಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೀಳಗಿ ಶಾಸಕ ಮುರುಗೇಶ ನಿರಾಣಿ ಜತೆಗೂಡಿ ಕಾರ್ಯಕ್ರಮಕ್ಕೆ ಆಗಮಿಸಿದ ಈಶ್ವರಪ್ಪ, ಶೂ ಹಾಕಿಕೊಂಡೇ ಕೆರೆಗೆ ಕರ್ಪೂರದ ಆರತಿ ಬೆಳಗಿದರು. ಅಲ್ಲದೇ ತೆಂಗಿನಕಾಯಿ ಸಹ ಒಡೆದರು. 

ಈ ವೇಳೆ ಶಾಸಕ ಮುರುಗೇಶ ನಿರಾಣಿ, ಶೂ ಕಳಚಲು ಸನ್ನೆ ಮಾಡಿದರೂ ಶೂ ತೆಗೆಯದೇ ನಿಂತಿದ್ದರು. ಕೊನೆಗೆ ಕೆರೆಗೆ ಇಳಿಯದ ಈಶ್ವರಪ್ಪ, ನಂತರ ತಮ್ಮ ಕೈಯಲ್ಲಿದ್ದ ಬಾಗಿನವನ್ನು ಸ್ಥಳೀಯ ನಾಯಕರೊಬ್ಬರ ಕೈಗೆ ಕೊಟ್ಟು, ದಂಡೆಯಲ್ಲಿ ನಿಂತು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ 

Follow Us:
Download App:
  • android
  • ios