ಮಂಡ್ಯ(ಜ.17): ಗಗನಚುಕ್ಕಿ ಜಲಪಾತೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ ಜಲಪಾತದಲ್ಲಿ ನೀರೇ ಇಲ್ಲ. ಜಲಪಾತೋತ್ಸವದ ವೈಭವ ಸೃಷ್ಟಿಸೋದಕ್ಕೆ ಅಧಿಕಾರಿಗಳು ಕೆಆರ್‌ಎಸ್‌ನ ನೀರನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಮಂಡ್ಯದ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಲಪಾತೋತ್ಸವಕ್ಕಾಗಿ ಡ್ಯಾಂ ನೀರು ಖಾಲಿ ಮಾಡೋಕೆ ಹೊರಟಿದ್ದಾರಾ ಅಧಿಕಾರಿಗಳು..? ಇಂತಹ ಪ್ರಶ್ನೆ ಸದ್ಯ ಮಂಡ್ಯದಲ್ಲಿ ಕೇಳಿ ಬರುತ್ತಿದೆ. ಕೆಆರ್ಎಸ್‌ ಡ್ಯಾಂನಿಂದ ನೀರು ಹರಿಸಿ ಜಲಪಾತೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

4 ವರ್ಷದ ನಂತರ ಗಗನಚುಕ್ಕಿ ಜಲಪಾತೋತ್ಸವ..! ಸಂಭ್ರಮಕ್ಕೆ ದಿನಗಣನೆ..!

ನೀರಿಲ್ಲದ ಜಲಪಾತದಲ್ಲಿ ವೈಭವ ಸೃಷ್ಟಿಗೆ KRS ಡ್ಯಾಂ ನೀರು ಬಳಕೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಜಲಪಾತೋತ್ಸವಕ್ಕಾಗಿ ಅಣೆಕಟ್ಟೆ ನೀರಿನ ಮೇಲೆ ಅಧಿಕಾರಿಗಳು ಕಣ್ಣು ಹಾಕಿದ್ದು, ಇದನ್ನು ರೈತರು ವಿರೋಧಿಸುತ್ತಿದ್ದಾರೆ.

ಡ್ಯಾಂಗಳ ನೀರು ಬಳಸಿ ಜಲಪಾತೋತ್ಸವ ಆಚರಿಸಲು ಮಂಡ್ಯ ಜಿಲ್ಲಾಡಳಿತ ಸಜ್ಜಾಗಿದ್ದು, ಜನವರಿ 18,19 ಗಗನಚುಕ್ಕಿ ಜಲಪಾತೋತ್ಸವ ನಡೆಯಲಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ನೀರಿಲ್ಲದೇ ಸೊರಗಿ ಹೋಗಿದೆ. ವೈಭವ ಮರು ಸೃಷ್ಟಿಗೆ ಕನಿಷ್ಠ 2-3 TMC ನೀರು ಅಗತ್ಯವಿದ್ದು, 15ಸಾವಿರ ಕ್ಯೂಸೆಕ್‌ ನಷ್ಟು ಮೂರು ದಿನ ನೀರು ಬಿಟ್ರೆ 4 ಟಿಎಂಸಿ ನೀರು ಖಾಲಿಯಾಗಲಿದೆ.

ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ, ಅಧ್ಬುತ ಕ್ಷಣ ಕಣ್ತುಂಬಿಕೊಂಡ ಭಕ್ತರು

ಜಲಪಾತೋತ್ಸವದ ನೆಪದಲ್ಲಿ ನೀರು ಖಾಲಿಯಾದ್ರೆ ಜೂನ್, ಜುಲೈನಲ್ಲಿ ನೀರಿನ ಸಮಸ್ಯೆ ಕಾಡಬಹುದು ಎಂಬುದು ರೈತರ ಆತಂಕ. ಕೃಷಿಯ ಜತೆಗೆ ಬೆಂಗಳೂರಿಗೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ನೀರು ಹರಿಸದಿದ್ದರೆ ಜಲಪಾತೋತ್ಸವಕ್ಕೆ ಯಾವುದೇ ಮೆರುಗು ಇರುವುದಿಲ್ಲ.

ಈಗಾಗಲೇ ವೇದಿಕೆ ನಿರ್ಮಾಣ ಸೇರಿದಂತೆ ಉತ್ಸವಕ್ಕೆ ಭರದ ತಯಾರಿ ನಡೆಸಲಾಗಿದ್ದು, ಜಲಪಾತ ವೀಕ್ಷಣೆಗೆ ಬಣ್ಣ ಬಣ್ಣದ ಲೈಟ್ ಅಳವಡಿಸಲಾಗಿದೆ. ಡ್ಯಾಂನಿಂದ ನೀರು ಬಿಟ್ಟು ಜಲಪಾತೋತ್ಸವ ಆಚರಿಸುವುದಕ್ಕೆ ಅನ್ನದಾತರ ವಿರೋಧ ವ್ಯಕ್ತವಾಗಿದೆ.

ಸಂಕ್ರಾಂತಿ ಸಂಭ್ರಮ: ಈ ಊರಲ್ಲಿ ದನಗಳ ಮೆರವಣಿಗೆಗೆ ಖರ್ಚು ಮಾಡೋದು ಲಕ್ಷ ಲಕ್ಷ..!

ಈ ನಡುವೆ ಶಾಸಕರು ಪ್ರತಿಷ್ಠೆಗಾಗಿ ಜಲಪಾತೋತ್ಸವ ಆಚರಣೆಗೆ ಮುಂದಾಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಸಚಿವರು, ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಜಲಪಾತೋತ್ಸವ ಆಚರಣೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಎರಡು ಬಾರಿ ಮುಂದೂಡಿದ್ದ ಜಲಪಾತೋತ್ಸವವನ್ನು ಆಚರಿಸಲು ಶಾಸಕ ಅನ್ನದಾನಿ ಮುಂದಾಗಿದ್ದಾರೆ.