Kolar: ಭ್ರಷ್ಟಾಚಾರ ಬಗ್ಗೆ ಪ್ರಶ್ನಿಸಿದ ಕೆಆರ್‌ಎಸ್ ಪಕ್ಷದವರ ಮೇಲೆ ಬ್ರೋಕರ್‌ಗಳಿಂದ ಹಲ್ಲೆ

ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ದಲ್ಲಾಳಿಗಳು ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಆರ್​ಟಿಒ ಕಚೇರಿಯಲ್ಲಿ ನಡೆದಿದೆ. ಇಲ್ಲಿ ಏನೇ ಕೆಲಸ ಆಗ್ಬೇಕಾದ್ರು ಇಲ್ಲಿ ಬ್ರೋಕರ್‌ಗಳು ಮೂಲಕವೇ ತೆರಳಿ ಲಂಚ ನೀಡಿದ್ರೆ ಮಾತ್ರ ಕೆಲಸ ಆಗುತ್ತೆ.

KRS party members attacked by brokers for questioning about corruption in kolar gvd

ಕೋಲಾರ (ಜು.21): ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ದಲ್ಲಾಳಿಗಳು ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಆರ್​ಟಿಒ ಕಚೇರಿಯಲ್ಲಿ ನಡೆದಿದೆ. ಇಲ್ಲಿ ಏನೇ ಕೆಲಸ ಆಗ್ಬೇಕಾದ್ರು ಇಲ್ಲಿ ಬ್ರೋಕರ್‌ಗಳು ಮೂಲಕವೇ ತೆರಳಿ ಲಂಚ ನೀಡಿದ್ರೆ ಮಾತ್ರ ಕೆಲಸ ಆಗುತ್ತೆ, ಇಲ್ಲವಾದ್ರೆ ಸುಖಾಸುಮ್ಮನೆ ಓಡಾಡಿಸುತ್ತಾರೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿತ್ತು. 

ಈ ವಿಚಾರವಾಗಿ ಇಂದುಕೋಲಾರ ಜಿಲ್ಲೆಯ ಕೆಆರ್​ಎಸ್​ ಪಕ್ಷದ ಕಾರ್ಯಕರ್ತರ ವಿಡಿಯೋ ಮಾಡಿ, ಪ್ರಶ್ನೆ ಮಾಡಲು ಮುಂದಾದಾಗ ಅಲ್ಲೇ ಇದ್ದ ಬ್ರೋಕರ್‌ಗಳು ಹಲ್ಲೆ ಮಾಡಿದ್ದಾರೆ. ಕೋಲಾರದ ಆರ್​ಟಿಒ ಕಚೇರಿಯ ಮುಂಭಾಗ ಈ ಹಲ್ಲೆ ಪ್ರಕರಣ ನಡೆದಿದ್ದು, ಕೆಆರ್​ಎಸ್​ ಪಕ್ಷದ ಮುಳಬಾಗಿಲು ತಾಲೂಕಿನ ಯುವ ಘಟಕದ ಅಧ್ಯಕ್ಷ ಗಣೇಶ್​, ಆನಂದ್, ಮಹೇಶ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇನ್ನು ಇದೇ ವೇಳೆ KRS ಪಕ್ಷದ ಜಿಲ್ಲಾಧ್ಯಕ್ಷೆ ಇಂದಿರಾ ರೆಡ್ಡಿ ಸಹ ಅಲ್ಲೇ ಇದ್ದರು. ಅವರ ಮೇಲೆಯೂ ಕೆಲವರು ಹಲ್ಲೆಗೆ ಮುಂದಾಗಿದ್ದಾರೆ. 

ಕೊಲೆಯಾದವನೇ ಬೇರೊಂದು ಹತ್ಯೆ ಕೇಸಿನ ಆರೋಪಿ, ಪೊಲೀಸ್ ತನಿಖೆ ವೇಳೆ ಆಘಾತಕಾರಿ ಅಂಶ ಬೆಳಕಿಗೆ

ಇನ್ನು ಆರ್​ಟಿಒ ಕಚೇರಿಯಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ದ ಪ್ರಶ್ನೆ ಮಾಡಿದ್ದಲ್ಲದೆ, ಅದನ್ನು ವಿಡಿಯೋ ಮಾಡಿದ್ದಕ್ಕೆ ಸಿಟ್ಟಾದ ದಲ್ಲಾಳಿಗಳು ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಕೋಲಾರ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ. ಇನ್ನು ಇತ್ತೀಚೆಗೆ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲೂ ಸಹ ಸಚಿವ ವಿ.ಸೋಮಣ್ಣ ಅವರ ಬೃಹತ್ ಫ್ಲೆಕ್ಸ್ ಹಾಕಿದ್ದನ್ನು ಪ್ರಶ್ನಿಸಿದ್ದಾಗಲೂ ಸೋಮಣ್ಣ ಬೆಂಬಲಿಗರು ಕೆಆರ್​ಎಸ್ ಪಕ್ಷದವರ ಮೇಲೆ ಹಲ್ಲೆ ನಡೆಸಿದ್ದರು.

ಮಾಲೂರು ಪಟ್ಟಣದಲ್ಲಿ 2 ಪೊಲೀಸ್‌ ಠಾಣೆ ಸ್ಥಾಪಿಸಿ: ಬೆಳೆಯುತ್ತಿರುವ ಮಾಲೂರು ಪಟ್ಟಣದ ಅನುಗುಣವಾಗಿ ಎರಡನೇ ಪೊಲೀಸ್‌ ಠಾಣೆಯಾಗಿ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಗ್ರಾಮೀಣ ಪೊಲೀಸ್‌ ಠಾಣೆ ಸ್ಥಾಪಿಸಬೇಕೆಂದು ಬಿಜೆಪಿ ಪ್ರಧಾನ ಕಾರ‍್ಯದರ್ಶಿ ಪಿ.ವೆಂಕಟೇಶ್‌ ಕುಮಾರ್‌ ಅಗ್ರಹಿಸಿದ್ದಾರೆ. ಈ ಸಂಬಂಧ ಪಟ್ಟಣದಲ್ಲಿ ಜನಸಂರ್ಪಕ ಸಭೆಯಲ್ಲಿ ಭಾಗವಹಿಸಿದ್ದ ಐಜಿ ಚಂದ್ರಶೇಖರ್‌ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೈಗಾರಿಕಾ ವಲಯ ಹೆಚ್ಚಾಗುತ್ತಿರುವ ಮಾಲೂರು ತಾಲೂಕಿನಲ್ಲಿ ಹೂರಗಿನವರು ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನರು ಬಂದು ನೆಲೆಸಿದ್ದಾರೆ.

ಕೊಲೆ ಕೇಸಿಗಾಗಿ ಕೆರೆ ನೀರು ಖಾಲಿ: ತಾವೇ ಹೂತಿದ್ದ ಶವ ತೆಗೆಯಲು ಪೊಲೀಸ್‌ ಕಸರತ್ತು

ಜನಸಂಖ್ಯೆ ಹಾಗೂ ವಾಹನ ಸಂಖ್ಯೆ ಶೀಘ್ರವಾಗಿ ಹೆಚ್ಚುತ್ತ ಸಾಗುತ್ತಿದೆ. ಜನಸಂಖ್ಯೆ ಹಾಗೂ ಅಪರಾಧ ಪ್ರಕರಣಗಳ ಅನುಗುಣವಾಗಿ ಪಟ್ಟಣಕ್ಕೆ ಎರಡು ಪೊಲೀಸ್‌ ಠಾಣೆ ಅವಶ್ಯವಾಗಿದೆ ಎಂದರು. ಅದಲ್ಲದೇ ಪಟ್ಟಣವು ತಮಿಳುನಾಡಿನಿಂದ ಆಂಧ್ರ ಪ್ರದೇಶಕ್ಕೆ ಸಂರ್ಪಕ ರಸ್ತೆ ಹೊಂದಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಲಾರಿ, ಟ್ರಕ್‌ಗಳು ಸಾಗುತ್ತಿವೆ ಎಂದ ವೆಂಕಟೇಶ್‌, ಎರಡು ಠಾಣೆ ಜತೆಯಲ್ಲಿ ಸಂಚಾರಿ ಪೊಲೀಸ್‌ ಠಾಣೆ ಸ್ಥಾಪನೆಗೆ ಅವಕಾಶ ಮಾಡಿಕೊಂಡಬೇಕು ಎಂದು ಅಗ್ರಹಿಸಿದರು. ಹೆಚ್ಚು ವಾಹನ ಸಂಚಾರ ಇರುವ ಪಟ್ಟಣದ ಡಾ.ರಾಜ್‌ ವೃತ್ತ ಹಾಗೂ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ನಿಲ್ಲಿಸಲಾಗಿರುವ ಟ್ರಾಫಿಕ್‌ ಸಿಗ್ನಲ್‌ಗೆ ಚಾಲನೆ ನೀಡಬೇಕೆಂದು ಮನವಿ ಮಾಡಿದರು.

Latest Videos
Follow Us:
Download App:
  • android
  • ios