ಮಂಡ್ಯ(ಆ.08): ಕೃಷ್ಣ ರಾಜಸಾಗರ ಆಣೆಕಟ್ಟೆಯ ಒಳ ಹರಿವಿನ ಪ್ರಮಾಣ ಮಂಗಳವಾರ ರಾತ್ರಿಯಿಂದ ಹೆಚ್ಚಾಗಿದೆ. ಬುಧವಾರ ಸಂಜೆ ವೇಳೆಗೆ 26,522 ಕ್ಯುಸೆಕ್‌ ಒಳ ಹರಿವು ಇದೆ.

ಆಣೆಕಟ್ಟೆಯ ನೀರಿನ ಮಟ್ಟ2 ಅಡಿ ಹೆಚ್ಚಾಗಿದೆ. ತಮಿಳುನಾಡಿಗೆ ಅಂದಾಜು 6149 ಕ್ಯುಸೆಕ್‌ ನೀರನ್ನು ಕಾವೇರಿ ನದಿಯ ಮೂಲಕ ಬಿಡಲಾಗುತ್ತಿದೆ.

ಸುವರ್ಣ ನ್ಯೂಸ್‌ ಪ್ರವಾಹ ಪರಿಹಾರ ಅಭಿಯಾನಕ್ಕೆ ದಾರಿ

ಆಣೆಕಟ್ಟೆತುಂಬುವುದಕ್ಕೂ ಮೊದಲೇ ತಮಿಳುನಾಡಿಗೆ ನೀರು ಬಿಡುತ್ತಿರುವ ಸರ್ಕಾರದ ನೀತಿಯನ್ನು ರೈತ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ. ಮಂಡ್ಯದಲ್ಲಿ ಬುಧವಾರವೂ ತುಂತುರು ಮಳೆಯಾಯಿತು. ದಿನವಿಡೀ ಮೋಡ ಕವಿದ ವಾತಾವರಣ ಹಾಗೂ ಶೀತ ಗಾಳಿ ಇತ್ತು. ಮಳೆ ನಿರೀಕ್ಷಿತ ಮಟ್ಟಿಗೆ ಬಂದಿಲ್ಲ. ಮಡಿಕೇರಿ, ಭಾಗಮಂಡಲದಲ್ಲಿ ಮಳೆಯಾಗಿದೆ.

ಕರ್ನಾಟಕದಲ್ಲಿ ಭಾರೀ ಮಳೆ : ನಿಮ್ ನಿಮ್ಮ ಜಿಲ್ಲೆ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ

ಕೆಆರ್‌ಎಸ್‌ ನೀರಿನ ಮಟ್ಟ

ಕೆಆರ್‌ಎಸ್‌ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ​ ​- 88.60 ಅಡಿ

ಒಳ ಹರಿವು - 26522 ಕ್ಯುಸೆಕ್‌

ಹೊರ ಹರಿವು - 6149 ಕ್ಯುಸೆಕ್‌