ಟಿಪ್ಪು ಸುಲ್ತಾನ್ ರಾಜಾಡಳಿದ 1818 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಈ ಸೇತುವೆಯನ್ನ ಕಟ್ಟಲಾಗಿತ್ತು ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಕಳೆದ ಮೂರು ದಿನದ ಹಿಂದೆಯಷ್ಟೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು
ಚಾಮರಾಜನಗರ(ಜು.16): ಕಾವೇರಿ ನೀರಿನ ರಭಸಕ್ಕೆ 200 ವರ್ಷಗಳ ಐತಿಹಾಸಿಕ ಸೇತುವೆ ಕೊಚ್ಚಿಹೋಗಿರುವ ಘಟನೆ ನಡೆದಿದೆ.
ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಭರಚುಕ್ಕಿ ಜಲಪಾತಕ್ಕೆ ಹೋಗುವ ಮುನ್ನಾ ಸಿಗುವ ವೆಸ್ಲಿ ಸೇತುವೆಯು ನೀರಿನ ಸೆಳವಿಗೆ ಸಿಲುಕಿ ಐತಿಹಾಸಿಕ ಸೇತುವೆ ಇನ್ನಿಲ್ಲದಂತಾಗಿದೆ.
ಟಿಪ್ಪು ಸುಲ್ತಾನ್ ರಾಜಾಡಳಿದ 1818 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಈ ಸೇತುವೆಯನ್ನ ಕಟ್ಟಲಾಗಿತ್ತು. 200 ವರ್ಷಗಳ ಹಿಂದೆ ಕಟ್ಟಿದ್ದ ಈ ಸೇತುವೆಗೆ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಾಣಗೊಂಡಿದೆಯಾದರೂ, ಈ ಸೇತುವೆ ಮೂಲಕವೆ ಅನೇಕ ಪ್ರವಾಸಿಗರು ಭರಚುಕ್ಕಿಗೆ ತೆರಳಲು ಇಚ್ಛಿಸುತ್ತಿದ್ದರು.
ಸಂಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಿರುವ ವೆಸ್ಲಿ ಸೇತುವೆ ಬಳಿ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಕಳೆದ ಮೂರು ದಿನದ ಹಿಂದೆಯಷ್ಟೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು. ಒಂದು ವೇಳೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಭಾರೀ ಅನಾಹುತವೇ ಸಂಭವಿಸಲಿತ್ತು. ಇನ್ನು ಐತಿಹಾಸಿಕ ಸೇತುವೆ ಕೊಚ್ಚಿಹೋಗಿರುವ ಕುರಿತು ಪಿಎಸ್ ಐ ವನರಾಜು ದೃಢಪಡಿಸಿದ್ದಾರೆ.
