ಮೈಸೂರು(ಫೆ.11): ಕೃಷ್ಣರಾಜ ಬಿಜೆಪಿ ಶಾಸಕ ಎಸ್‌.ಎ ರಾಮ್‌ದಾಸ್ ಅವರಿಗೆ ಹೃದಯಾಘಾತವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮ್‌ದಾಸ್  ಅವರಿಗೆ ಲಘು ಹೃದಯಾಘಾತ‌ವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಘು ಹೃದಯಾಘಾತದ ಪರಿಣಾಮ ಶಾಸಕ ರಾಮದಾಸ್‌ಗೆ ಸ್ಟಂಟ್ ಅಳವಡಿಸಲಾಗಿದ್ದು, ವೈದ್ಯರು ಯಶಸ್ವಿಯಾಗಿ ಆಪರೇಷನ್ ಮುಗಿಸಿದ್ದಾರೆ.

ಹಸಿದು ಬಂದವರಿಗೆ ಹೊಟ್ಟೆ ತುಂಬಿಸಿ ಆಯ್ತು, ಇನ್ನು ಹಿರಿಯರಿಗೆ ಸಚಿವ ಸ್ಥಾನ

ಇತ್ತೀಚೆಗಷ್ಟೇ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನ ಹಿರಿಯರಿಗೆ ಸಚಿವ ಸ್ಥಾನ ನೀಡಬೇಕೆಂದು ಅವರು ಹೇಳಿದ್ದರು. ಹೊರಗಿನಿಂದ ಬಂದವರಿಗೆ ಸ್ಥಾನ ಕೊಡಲಾಗಿದ್ದು, ಇನ್ನು ಪಕ್ಷದ ಹಿರಿಯರನ್ನು ಪರಿಗಣಿಸಬೇಕೆಂದು ಅವರು ಅಭಿಪ್ರಾಯಪಟ್ಟಿದ್ದರು.

ಇತ್ತೀಚೆಗಷ್ಟೇ ರಾಮ್‌ದಾಸ್ ಅವರ ಪ್ರೇಯಸಿ ಪ್ರೇಮಾ ಕುಮಾರಿ ಅವರು ಫೇಸ್‌ಬುಕ್ ವಿಡಿಯೋ ಮೂಲಕ ರಾಮ್‌ದಾಸ್‌ಗೆ ಸಚಿವ ಸ್ಥಾನ ನೀಡದ ಬಗ್ಗೆ ಆಕ್ರೋಶ ವ್ಯಕ್ತಡಿಸಿದ್ದರು.