ಮೈಸೂರು(ಫೆ.09): ಹಸಿದು ಬಂದವರಿಗೆ ಸಚಿವ ಸ್ಥಾನ ಕೊಟ್ಟಾಯ್ತು. ಇನ್ನು ಪಕ್ಷದ ಹಿರಿಯರನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕೃಷ್ಣರಾಜ ಶಾಸಕ ಎಸ್‌. ಎ. ರಾಮದಾಸ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಅನ್ಯ ಮಾರ್ಗದಲ್ಲಿ ಅಥವಾ ಒತ್ತಡದ ರಾಜಕೀಯ ಮಾಡಿ ಸಚಿವನಾಗಲ್ಲ. ಸೂಕ್ತ ಸಮಯದಲ್ಲಿ ಯಡಿಯೂರಪ್ಪನವರು ಸೂಕ್ತ ನಿರ್ಣಯ ತೆಗೆದುಕೊಳ್ತಾರೆ. ಮೈಸೂರಿಗೆ ಪ್ರಾಧಿನಿತ್ಯ ಕೊಡ್ತಾರೆ ಎಂಬ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಮ್‌ದಾಸ್‌ಗೆ ಸಚಿವ ಸ್ಥಾನವಿಲ್ಲ, ಸಿಎಂ ವಿರುದ್ಧ ಪ್ರೇಮಾ ಕುಮಾರಿ ಕಿಡಿಕಿಡಿ

ಮೈಸೂರಿನ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ಕೊಡಲೇಬೇಕು. ಈಗ ಹಸಿದು ಬಂದವರಿಗೆ ಹೊಟ್ಟೆ ತುಂಬಿಸುವ ಕೆಲಸ ಆಗಿದೆ. ಈಗ ಹಿರಿಯರನ್ನ ಗಣನೆಗೆ ತೆಗೆದುಕೊಂಡು ಸಚಿವ ಸ್ಥಾನ ಕೊಡಬೇಕಿದೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ರಾಮದಾಸ್ ಹೇಳಿದ್ದಾರೆ.

ಪರೋಕ್ಷವಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದ ರಾಮದಾಸ್ ಬಿಎಸ್‌ವೈ ಹಿರಿಯರನ್ನ ಗಮನಕ್ಕೆ ತೆಗೆದುಕೊಳ್ಳುವ ವಿಶ್ವಾಸ ಇದೆ. ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮೈಸೂರಿಗೆ ಸಚಿವ ಸ್ಥಾನ ಬೇಕಿದೆ. ಮೈಸೂರು ಕಡೆಗಣನೆ‌ ಆಗಿದೆ ಎಂಬುದು ಜನಸಾಮಾನ್ಯರಿಗು ಗೊತ್ತಿದೆ. ಯಾರಿಗಾದರು ಕೊಡಲಿ ಆದರೆ ಪಕ್ಷದ ಹಿರಿಯರನ್ನ ಗಣನೆಗೆ ತೆಗೆದುಕೊಳ್ಳಲಿ ಎಂದಿದ್ದಾರೆ.