ಉಡುಪಿ ಮಠದ ಭಕ್ತರಿಗಿಲ್ಲ ಪ್ರವೇಶಕ್ಕೆ ಅವಕಾಶ

ಉಡುಪಿಯಲ್ಲಿ ಅದ್ದೂರಿಯ ಕೃಷ್ಣ ಜನ್ಮಾಷ್ಟಮಿ ನಡೆಯಲಿದ್ದು, ಆದರೆ ಈ ಬಾರಿ ಭಕ್ತರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

Krishna Janmastami No Entry For Devotees in Udupi Mutt

ಉಡುಪಿ (ಸೆ.10): ಪೊಡವಿಗೊಡೆಯ ಶ್ರೀಕೃಷ್ಣನ ಊರಾದ ಉಡುಪಿಯಲ್ಲಿ ಗುರುವಾರದಿಂದ 2 ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

 ಈ ಬಾರಿ ಕೊರೋನಾದಿಂದಾಗಿ ಭಕ್ತರಿಗೆ, ಸಾರ್ವಜನಿಕರಿಗೆ ಪ್ರವೇಶಾವಕಾಶ ನೀಡಲಾಗಿಲ್ಲ. ಗುರುವಾರ ಮಠದೊಳಗಿನ ಧಾರ್ಮಿಕ ಆಚರಣೆಗಳೆಲ್ಲವೂ ಪರ್ಯಾಯ ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ಸಂಪ್ರದಾಯದಂತೆ ನಡೆಯುತ್ತವೆ. 

ಶುಕ್ರವಾರ ರಥಬೀದಿಯಲ್ಲಿ ಉತ್ಸವಾದಿ ಸಂಭ್ರಮಗಳಿರುವುದಿಲ್ಲ. 1 ಲಕ್ಷ ಉಂಡೆ ಹಾಗೂ 1 ಲಕ್ಷ ಚಕ್ಕುಲಿಗಳನ್ನು ತಯಾರಿಸಿ ವಿತರಿಸಲು ಸಿದ್ಧತೆ ನಡೆಸಲಾಗಿದೆ.

 

ಸೆ.10ರಂದು ಮಠದೊಳಗಿನ ಧಾರ್ಮಿಕ ಆಚರಣೆಗಳೆಲ್ಲವೂ ಪರ್ಯಾಯ ಶ್ರೀ ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ಸಂಪ್ರದಾಯದಂತೆ ನಡೆಯುತ್ತವೆ. ನಡುರಾತ್ರಿ ಪರ್ಯಾಯ ಶ್ರೀಗಳು ಕೃಷ್ಣನಿಗೆ ಅಘ್ರ್ಯಪ್ರದಾನ ಮಾಡಲಿದ್ದಾರೆ.

ಪೇಜಾವರ ಶ್ರೀಗಳ ಚಾತುರ್ಮಾಸ್ಯ ಸಮಾಪನ : ಸೀತಾ ನದಿಯಲ್ಲಿ ಸೀಮೊಲ್ಲಂಘನ

ಆದರೆ ಸೆ.11ರಂದು ರಥಬೀದಿಯಲ್ಲಿ ಉತ್ಸಾವಧಿ ಸಂಭ್ರಮಗಳಿರುವುದಿಲ್ಲ. ಕೃಷ್ಣನ ಲೀಲೆಗಳನ್ನು ತೋರಿಸುವ ಗೊಲ್ಲ ವೇಷಧಾರಿಗಳು, ಮೊಸರು ಕುಡಿಕೆಗಳನ್ನು ಒಡೆಯುವಂತಹ ಸಂಪ್ರದಾಯಗಳು ಸಾಂಕೇತಿಕವಾಗಿ ನಡೆಯುತ್ತವೆ. ಇದಕ್ಕೆ ಬೇಕಾದ ತಯಾರಿಗಳನ್ನು ನಡೆಸಲಾಗಿದೆ.

ಜಿಲ್ಲಾಡಳಿತದ ಸೂಚನೆಯಂತೆ ಸೆ.10, 11ರಂದು ನಡೆಯುವ ಆಚರಣೆಗಳಲ್ಲಿ ಭಕ್ತರಿಗೆ ಪಾಲುಗೊಳ್ಳುವುದಕ್ಕೆ ಅವಕಾಶ ಇಲ್ಲ. ಅಷ್ಟಮಠಾಧೀಶರು ಮತ್ತು ಮಠದ ಪರಿವಾರದವರು ಮಾತ್ರ ಭಾಗವಹಿಸಲಿದ್ದಾರೆ.

* ಲಕ್ಷ ಚಕ್ಕುಲಿ-ಉಂಡೆ

ಉಡುಪಿ ಕೃಷ್ಣಾಷ್ಟಮಿ ಎಂದರೆ ಕೃಷ್ಣಮಠದಲ್ಲಿ ಬಾಲಕೃಷ್ಣನಿಗೆ ನೈವೇದ್ಯ ಮಾಡುವ ಚಕ್ಕುಲಿ, ಉಂಡೆ ಪ್ರಸಾದಕ್ಕೆ ತನ್ನದೇ ಆದ ಮಹತ್ವ ಇದೆ. ಈ ಬಾರಿ ಭಕ್ತಾಧಿಗಳಿಗೆ ಭಾಗವಹಿಸಲು ಸಾಧ್ಯವಾಗದಿದ್ದರೂ, ಸಾಧ್ಯಾನುಸಾರ ಭಕ್ತರಿಗೆ ಕೃಷ್ಣಪ್ರಸಾದವನ್ನು ವಿತರಿಸಬೇಕು ಎಂದು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶಿಸಿದ್ದು, ಅದಕ್ಕಾಗಿ 1 ಲಕ್ಷ ಉಂಡೆ ಹಾಗೂ 1 ಲಕ್ಷ ಚಕ್ಕುಲಿಗಳನ್ನು ತಯಾರಿಸಿ ವಿತರಿಸಲು ಸಿದ್ಧತೆ ನಡೆಸಲಾಗಿದೆ.

* ಹುಲಿ ವೇಷಗಳಿಲ್ಲ

ಉಡುಪಿ ಕೃಷ್ಣಾಷ್ಟಮಿಯ ಇನ್ನೊಂದು ವೈಶಿಷ್ಟ್ಯ ಎಂದರೆ ಕೃಷ್ಣ ಲೀಲೋತ್ಸವದಲ್ಲಿ ಹುಲಿ ಮತ್ತು ಇತರ ವೇಷಧಾರಿಗಳ ಕುಣಿತ. ಆದರೆ ಈ ಬಾರಿ ಉತ್ಸವವೇ ಇಲ್ಲದಿರುವುರಿಂದ ವೇಷಧಾರಿಗಳಿಗೂ ಅವಕಾಶ ಇಲ್ಲ. ಕಟಪಾಡಿಯ ರವಿ ಮುಂತಾದವರು ವೈವಿಧ್ಯಮಯ ವೇಷಗಳನ್ನು ಹಾಕಿ ಹಣ ಸಂಗ್ರಹಿಸಿ, ಅಗತ್ಯ ಇರುವ ರೋಗಿಗಳ ಚಿಕಿತ್ಸೆಗೆ ದಾನ ಮಾಡುತ್ತಿದ್ದರು, ಅದಕ್ಕೂ ಈ ಬಾರಿ ಕೊರೋನಾ ಅಡ್ಡಗಾಲು ಹಾಕಿದೆ.

Latest Videos
Follow Us:
Download App:
  • android
  • ios