ಮಂಡ್ಯ [ಡಿ.25]: ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುತ್ತಿದ್ದ ಮಂಡ್ಯದ ಕೆ ಆರ್ ಪೇಟೆಯಲ್ಲಿ ಈ ಬಾರಿ ಪಕ್ಷದ ಅಭ್ಯರ್ಥಿಗೆ ಸೋಲಾಗಿದ್ದು,  ನಮ್ಮ ಅಭ್ಯರ್ಥಿ ಸೋಲಲು ಕಾಂಗ್ರೆಸ್ ಕಾರಣ ಎಂದು ಜಿಪಂ ಸದಸ್ಯ ದಿನೇಶ್ ರಾಜಾಹುಲಿ ಆರೋಪಿಸಿದ್ದಾರೆ. 

ಮಂಡ್ಯದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ದಿನೇಶ್, ಕಾಂಗ್ರೆಸ್ ಅಭ್ಯರ್ಥಿಯು ಇಲ್ಲಿ ಬಿಜೆಪಿಗೆ ಮಾರಾಟವಾಗಿದ್ದರು. 15 ಕೋಟಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ ಚಂದ್ರಶೇಖರ್ ಸೇಲಾಗಿದ್ದರು ಎಂದು ಆರೋಪಿಸಿದರು. 

ಜನರಿಗೆ ವಿಚಾರ ಗೊತ್ತಾಗಲಿಲ್ಲ. ಚುನಾವಣೆಯ ಕೊನೆಯಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರಿಗೆ ಈ ವಿಚಾರ ತಿಳಿದು ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರ ಮಾಡಿದರು ಎಂದರು. 

ಕಾಂಗ್ರೆಸ್‌ ಸೇರಲು ಮುಂದಾಗಿದ್ದ ದೇವೇಗೌಡ!...

ಜೆಡಿಎಸ್ ಅಭ್ಯರ್ಥಿ ದೇವರಾಜು ಅವರು ಈ ಚುನಾವಣೆಯಲ್ಲಿ ಸೋತಿಲ್ಲ. ಪ್ರಭಲ ಪೈಪೋಟಿಯನ್ನು ನೀಡಿದ್ದು, ಇನ್ನಷ್ಟು ಶಕ್ತಿ ಹೆಚ್ಚಿಸಿಕೊಂಡಿದ್ದಾರೆ ಎಂದು ದಿನೇಶ್ ಹೇಳಿದರು.

ಜೆಡಿಎಸ್  ಮುಖಂಡರಾಗಿದ್ದ ನಾರಾಯಣ ಗೌಡ ರಾಜೀನಾಮೆ ನೋಡಿ, ಬಳಿಕ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಗೆಲುವು ಪಡೆದಿದ್ದು, ಭದ್ರಕೋಟೆಯನ್ನು ಜೆಡಿಎಸ್ ಕಳೆದುಕೊಂಡಿದ್ದು, ಇದೀಗ ಈ ಸಂಬಂಧ ಜೆಡಿಎಸ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಲಾಗಿದೆ.