ಮಂಡ್ಯ: ಕೆ ಆರ್ ಪೇಟೆ ತಹಸೀಲ್ದಾರ್ ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಂಡ್ಯ ಜಿಲ್ಲೆಯ, ಕೆಆರ್ ಪೇಟೆ ತಹಸೀಲ್ದಾರ್‌‌ ಮಹೇಶ್ ಚಂದ್ರ ಅವರು ನಾಪತ್ತೆಯಾಗಿದ್ದು, ಅವರ ಕಾರು ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಚಿಕ್ಕವಡ್ಡರಗಡು ಗ್ರಾಮದ ಬಳಿ ಮಾರುತಿ ಒಮಿನಿ ಕಾರು ಹಾಗೂ ಅವರು ಧರಿಸಿದ್ದ ಶೂಗಳು ಪತ್ತೆಯಾಗಿವೆ.

ಮಹೇಶ್ ಚಂದ್ರ ಅವರು ವಾರದ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದು, ಕುಟುಂಬ ಕೆ.ಆರ್.ನಗರದಲ್ಲಿ ವಾಸವಾಗಿದೆ. ಗುರುವಾರ ಸಂಜೆ ಕೆ.ಆರ್.ಪೇಟೆಯಿಂದ ಕೆ.ಆರ್.ನಗರಕ್ಕೆ ಪ್ರಯಾಣಿಸುತ್ತಿದ್ದರು. 

ಸಾಲಿಗ್ರಾಮ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.