Asianet Suvarna News

ಡಿ.ಕೆ.​ಶಿ​ವ​ಕು​ಮಾ​ರ್‌ ಪದ​ಗ್ರ​ಹಣ: 4 ಲಕ್ಷ ಕಾರ್ಯಕರ್ತರಿಂದ ವೀಕ್ಷಣೆ

ಪದಗ್ರಹಣ ಕಾರ್ಯಕ್ರದ ವೀಕ್ಷಣೆಗಾಗಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲಾಗುವುದು| ದೇಶವೇ ಕೊರೋನಾ ಸಂಕಷ್ಟದಲ್ಲಿದೆ| ಈ ಹಿನ್ನೆಲೆಯಲ್ಲಿ ಅತ್ಯಂತ ಸರಳ ಮತ್ತು ವಿಭಿನ್ನವಾಗಿ ಕಾರ್ಯಕ್ರಮ ಆಯೋಜನೆ| ಒಂದೇ ಬಾರಿ 4 ಲಕ್ಷ ಮಂದಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ|

KPCC Working President Satish Jarakiholi Talks Over D K Shivakumar Sworn in Function
Author
Bengaluru, First Published May 29, 2020, 11:46 AM IST
  • Facebook
  • Twitter
  • Whatsapp

ಗದಗ(ಮೇ.29): ಕರ್ನಾ​ಟಕ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಡಿ.ಕೆ.​ಶಿ​ವ​ಕು​ಮಾ​ರ್‌ ಹಾಗೂ ಮೂವರು ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಜೂ.7 ರಂದು ಜರುಗಲಿದೆ ಎಂದು ಕೆಪಿಸಿಸಿ ರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದನ ಅವರು, ಪದಗ್ರಹಣ ಕಾರ್ಯಕ್ರದ ವೀಕ್ಷಣೆಗಾಗಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಕೆಪಿಸಿಸಿ ಅಧ್ಯಕ್ಷರಾಗಿ ಜೂ.7ರಂದು ಡಿಕೆಶಿ ಅಧಿಕಾರ ಸ್ವೀಕಾರ..?

ದೇಶವೇ ಕೊರೋನಾ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಸರಳ ಮತ್ತು ವಿಭಿನ್ನವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ 800 ಸ್ಥಳಗಳಲ್ಲಿ 50 ಜನ ಕಾರ್ಯಕರ್ತರು ಸೇರಲಿದ್ದು, ಆಯಾ ಗ್ರಾಮಗಳಲ್ಲಿ ಸಣ್ಣದಾಗಿ ಕಾರ್ಯಕ್ರಮ ಮಾಡಲಿದ್ದಾರೆ. ಒಂದೇ ಬಾರಿ 4 ಲಕ್ಷ ಮಂದಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಲಾಗಿದೆ. ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಂಡು, ವಿಭಿನ್ನವಾಗಿ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios