ಶಿವಮೊಗ್ಗ[ಆ.25]: ಕೊಡಗು ನೆರೆ ಹಾಗೂ ಪ್ರವಾಹ ಸಂತ್ರಸ್ತರ ಕುರಿತು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡಗು ನೆರೆಯಿಂದಾಗಿ ಹಾಗೂ ಪರಿಹಾರ ಕುರಿತು ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತರಾಂ ಅವರು ಭೇಟಿ ನೀಡಿದ ಸಂದರ್ಭದಲ್ಲಿ ವರದಿ ಬಂದ ನಂತರ ಪರಿಹಾರ ಘೋಷಣೆ ಮಾಡಿರುವುದು ಖಂಡನಾರ್ಹವೆಂದು ಹೇಳಿದರು.

ಕಣ್ಣು ಮುಂದೆ ನೆರೆ ಹಾವಳಿಯಿಂದ ಉಂಟಾಗಿರುವ ನಷ್ಟ ಕಾಣಿಸುತ್ತಾ ಇದೆ. ಜನ ಪರಿತಪಿಸುತ್ತಿದ್ದಾರೆ. ಈ ಡ್ಯಾಮೇಜ್ ನೋಡಿಯಾದರೂ ಕನಿಷ್ಟ 100 ಕೋಟಿ ಪರಿಹಾರ ಹಣ ಘೋಷಣೆ ಮಾಡಬೇಕಿತ್ತು. ಆದರೆ ಅವರು ಘೋಷಿಸಿರುವುದು ಕೇವಲ 8 ಕೋಟಿ ರುಪಾಯಿ ಹಣ. ಇದು ಯಾವುದಕ್ಕೆ ನೀಡಲು ಸಾಧ್ಯವೆಂದು ವ್ಯಂಗ್ಯವಾಡಿದ್ದಾರೆ.

ಕೊಡಗು ಪರಿಹಾರಕ್ಕಾಗಿ ಕಾಂಗ್ರೆಸ್ ಪಕ್ಷದ ಜನಪ್ರತಿ ನಿದಿಗಳು ಮತ್ತು ರಾಜ್ಯ ಸಭಾ ಸದಸ್ಯರೊನ್ನೊಳಗೊಂಡಂತೆ 10 ಕೋಟಿ ಹಣ ನೀಡಲು ಮುಂದಾಗಿದ್ದೇವೆ. ಕೊಡಗಿನಲ್ಲಿ ಈ ಪರಿಸ್ಥಿತಿ ಎದುರಿಸದಂತೆ ಜೀವ ವೈವಿದ್ಯ ಮಂಡಳಿ ವರದಿ ತರಿಸಿಕೊಂಡು ಸೂಕ್ತ ಕ್ರಮಗಳನ್ನೂ ಸಹ ಕೈಗೊಳ್ಳಲಾಗುವುದು ಎಂದರು.