ಹುಬ್ಬಳ್ಳಿ[ಮಾ.02]: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತು ಹೇಳಿಕೆ ನೀಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಾಪ್ರಹಾರ ಮುಂದುವರೆಸಿದ್ದಾರೆ. ಯತ್ನಾಳ್‌ ಮಾಡಲು ಕೆಲಸವಿಲ್ಲದ ನಿರುದ್ಯೋಗಿ ಆಗಿದ್ದು, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ನಿಜವಾದ ದೇಶಭಕ್ತಿ ಇದ್ದರೆ ಯತ್ನಾಳ್‌ ಶಾಸಕ ಸ್ಥಾನ ರದ್ದುಪಡಿಸಬೇಕು. ಗಾಂಧೀಜಿ ಅವರ 105ನೇ ಜನ್ಮದಿನಾಚರಣೆ ಮಾಡುವ ಬಿಜೆಪಿಗರು, ಇನ್ನೊಂದೆಡೆ ಗಾಂಧಿ ಭಾವಚಿತ್ರಕ್ಕೆ ಗನ್‌ ಹಿಡಿದು ಸಂಭ್ರಮಿಸುತ್ತಾರೆ. ಸಂವಿಧಾನ ಬುಡಮೇಲು ಮಾಡುವ ಕಾರ್ಯ ಬಿಜೆಪಿಯಿಂದ ಆಗುತ್ತಿದೆ ಎಂದು ದೂರಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯಡಿಯೂರಪ್ಪ ಜನ್ಮದಿನಾಚರಣೆಗೆ ಸಿದ್ದರಾಮಯ್ಯ ಹೋಗಿದ್ದಕ್ಕೆ ಯಾರ ವಿರೋಧವೂ ಇಲ್ಲ. ಅವರು ತಮ್ಮ ಸಿದ್ಧಾಂತದ ನಿಲುವಿಗೆ ಬದ್ಧರಾಗಿದ್ದಾರೆ. ಸ್ನೇಹವೇ ಬೇರೆ ರಾಜಕೀಯವೆ ಬೇರೆ ಎಂದು ಹೇಳಿದ್ದಾರೆ.