ಬೀದರ್‌(ಆ.01): ಕುವೈತ್‌ನಲ್ಲಿ ಕನ್ನಡಿಗರು ಸಿಲುಕಿಕೊಂಡಿದ್ದು ಅವರನ್ನು ಆದಷ್ಟು ಬೇಗ ಭಾರತಕ್ಕೆ ವಾಪಸ್‌ ಕರೆಯಿಸಿಕೊಳ್ಳಲು ಪ್ರಯತ್ನಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಕುರಿತಂತೆ ಕುವೈತ್‌ನಲ್ಲಿ ಸಿಲುಕಿರುವ ಕನ್ನಡಿಗ ಕಾರ್ಮಿಕರ ಕುರಿತಾಗಿ ಸುದ್ದಿ ಮಾಧ್ಯಮಗಳು ವರದಿಗಳನ್ನು ಬಿತ್ತರಿಸಿದ್ದನ್ನು ಗಮನಿಸಿದ ಖಂಡ್ರೆ, ಕುವೈತ್‌ನಲ್ಲಿರುವ ಕನ್ನಡಿಗ ಕಾರ್ಮಿಕರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿ, ಅಭಯ ನೀಡಿದ್ದಾರೆ. 

ಬೀದರ್‌: ಕೋವಿಡ್‌ ಆರೋಗ್ಯ ಕೇಂದ್ರವಾದ ಸಪ್ನಾ ಹೋಟೆಲ್‌..!

ಉತ್ತರ ಕರ್ನಾಟಕದ ಯುವಕರನ್ನು ಕೆಲಸಕ್ಕೆ ಕುವೈತ್‌ಗೆ ಕರೆದೊಯ್ದು ಅತಂತ್ರ ಮಾಡಿರುವ ಮೆಗಾ ಇನ್ಫ್ರಾಸ್ಟ್ರಕ್ಷರ್‌ ಲಿಮಿಟೆಡ್‌ ಕಂಪನಿ ವಿರುದ್ಧ ಕ್ರಮ ಕೈಗೊಂಡು, ಯುವಕರನ್ನು ಸ್ವದೇಶಕ್ಕೆ ಮರಳಿ ಕರೆತರಿಸುವಲ್ಲಿ ಕೇಂದ್ರ ವಿದೇಶಾಂಗ ಸಚಿವರೊಂದಿಗೆ ಚರ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.