ಶಿರಾ (ಅ.28):  ಆರ್‌.ಆರ್‌. ನಗರದಲ್ಲಿ ಬಿಜೆಪಿ ನೋಟು, ಕಾಂಗ್ರೆಸ್‌ ವೋಟು ಎಂದಿದ್ದಕ್ಕೆ ನನ್ನ ಮೇಲೆ ದೂರು ಕೊಟ್ಟಿದ್ದಾರೆ. ನಾನು ದಾಖಲೆ ಇಟ್ಟುಕೊಂಡೇ ಮಾತನಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಅವರು ಶಿರಾ ತಾಲೂಕು ಚೆನ್ನೇನಹಳ್ಳಿ ಮಾತನಾಡಿ, ಶಿರಾದಲ್ಲೂ ಕೂಡ ಆರ್‌ಆರ್‌ ನಗರದ ರೀತಿಯೇ ಹಣ ಹಂಚಲಾಗುತ್ತಿದ್ದು ಚುನಾವಣಾ ಆಯೋಗ ಕಣ್ಣು ಮುಚ್ಚು ಕೂತಿದೆ ಎಂದರು.

ಮತದಾರರ ಬೆನ್ನಿಗೆ ಚೂರಿ ಹಾಕಿದ ಮುನಿರತ್ನಗೆ ತಕ್ಕಪಾಠ ಕಲಿಸಿ: ಸಿದ್ದರಾಮಯ್ಯ

ಪ್ರತಿಯೊಂದು ವಿಚಾರದಲ್ಲೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ವಿರುದ್ಧವಾಗಿ ಚುನಾವಣೆ ಮಾಡುತ್ತಿರುವುದಾಗಿ ಹರಿಹಾಯ್ದ ಅವರು, ತಾವು ಚುನಾವಣಾ ಆಯೋಗಕ್ಕೆ ದೂರು ದಾಖಲಿಸುವುದಾಗಿ ತಿಳಿಸಿದರು. ಶಿರಾದಲ್ಲಿ ಜನ ನಮ್ಮ ಪಕ್ಷದ ಪರ ವಿಶ್ವಾಸ ವ್ಯಕ್ತಪಡಿಸುತ್ತಿದ್ದು ಬಿಜೆಪಿ ಹಾಗೂ ಜೆಡಿಎಸ್‌ ತೊರೆದು ನಮ್ಮ ಪಕ್ಷ ಸೇರುತ್ತಿದ್ದಾರೆ ಎಂದರು.