ಕೆಪಿಸಿಸಿ ಅಧ್ಯಕ್ಷ ಡಿಕೆಶಿ -ಸಿದ್ದರಾಮಯ್ಯ ನಡುವೆ ಇದೆಯಾ ವೈಮನಸ್ಸು..? ಎರಡು ದಾರಿಯಲ್ಲಿ ಮುಖಂಡರು
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಪ್ರಾಣ ಕಳೆದುಕೊಂಡಿದ್ದು, ಇಲ್ಲಿಗೆ ಇಂದು ಕೈ ನಾಯಕರು ಭೇಟಿ ನೀಡಿದ್ದು ಈ ವೇಳೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ತೆರಳಿದ್ದಾರೆ. ಇದರಿಂದ ಹೊಸ ಅನುಮಾನ ಒಂದು ಮೂಡಿದೆ.
ಚಾಮರಾಜನಗರ (ಮೇ.04): ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಸಮನ್ವಯದ ಕೊರತೆ ಇದೆಯಾ ಎನ್ನುವ ಅನುಮಾನಗಳು ಹುಟ್ಟಿವೆ.
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಪ್ರಾಣ ಕಳೆದುಕೊಂಡಿದ್ದು, ಇಲ್ಲಿಗೆ ಇಂದು ಕೈ ನಾಯಕರು ಭೇಟಿ ನೀಡಿದ್ದು ಈ ವೇಳೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ತೆರಳಿದ್ದಾರೆ.
ಚಾಮರಾಜನಗರಕ್ಕೆ ಇಬ್ಬರೂ ಬೆಂಗಳೂರಿನಿಂದ ಹೊರಟಿದ್ದು, ಸಿದ್ದು ಹೆಲಿಕಾಪ್ಟರ್ ಮೂಲಕ ತೆರಳಿದರೆ ಡಿಕೆಶಿ ರಸ್ತೆ ಮೂಲಕ ತೆರಳಿದರು. ಸಿದ್ದರಾಮಯ್ಯ ಒಂದು ದಾರಿ, ಡಿಕೆಶಿ ಇನ್ನೊಂದು ದಾರಿಯಲ್ಲಿ ಸಾಗಿದರು.
ಚಾಮರಾಜನಗರ ದುರಂತ : ವೈದ್ಯರ ಮೇಲೆ ಕೆಂಡಾಮಂಡಲವಾದ ಸಿದ್ದರಾಮಯ್ಯ
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತರ ಕುಟುಂಬಗಳನ್ನು ಭೇಟಿ ಆಗಿ ಅಧಿಕಾರಿಗಳ ಸಭೆ ನಡೆಸಲು ಸಾಂತ್ವನ ಹೇಳಲು ನಾಯಕರು ಎರಡು ದಾರಿಯಲ್ಲಿ ತೆರಳಿದರು.
ಇಬ್ಬರು ನಾಯಕರ ನಡೆಯಿಂದ ಸಮನ್ವಯದ ಕೊರತೆಯ ಅನುಮಾನ ಮೂಡಿದ್ದು, ಮೂಡಿಸಲು ಕಾರ್ಯಾಧ್ಯಕ್ಷ ಆರ್.ದ್ರುವನಾರಾಣ ಯತ್ತಿಸಿದ್ದಾರೆನ್ನಲಾಗಿದೆ. ಮೊದಲಿಗೆ ಇಬ್ಬರನ್ನು ಐಬಿಯಲ್ಲಿ ಸೇರಿಸಿ ನಂತರ ಒಟ್ಟಿಗೆ ಜಿಲ್ಲಾಸ್ಪತ್ರೆಗೆ ಹೊರಡಿಸಲು ವ್ಯವಸ್ಥೆ ಮಾಡಿದ್ದರೆನ್ನಲಾಗಿದೆ.