Asianet Suvarna News

ಅನರ್ಹರನ್ನು ಬಿಜೆಪಿ ಕಾರ್ಯಕರ್ತರೂ ಕೂಡ ಒಪ್ಪುತ್ತಿಲ್ಲ ಎಂದ ಗುಂಡೂರಾವ್

ವಿಶ್ವನಾಥ್ ಮಾತುಗಳಿಗೆ ಏನು ಬೆಲೆ ಇದೆ ಹೇಳಿ| ತಮಗೆ ಬೇಕಾದಾಗ ಹೊಗಳಿ ಬೇಕಿಲ್ಲದಾಗ ಟೀಕಿಸುತ್ತಾರೆ| ಎಲ್ಲ ಸಿದ್ದಾಂತಗಳನ್ನ ಬಿಟ್ಟು ಜೀವಮಾನ‌ದಿಂದ ಟೀಕಿಸಿದ್ದ ಬಿಜೆಪಿಗೆ ಈಗ ಸೇರಿದ್ದಾರೆ| ಇವರೆಂತ ನಾಯಕರು| ವಿಶ್ವನಾಥ್ ಕಾಂಗ್ರೆಸ್‌ನಲ್ಲಿ ಮಂತ್ರಿ ಆಗಿಲ್ವಾ| ವಿಶ್ವನಾಥ್ ಗೆ ಮಂತ್ರಿ ಆಗೋದೆ ದೊಡ್ಡ ವಿಷಯವಾಗಿದೆ ಎಂದ ಗುಂಡೂರಾವ್| 

KPCC President Dinesh Gundurao Talked About Disqualified MLA H Vishwanath
Author
Bengaluru, First Published Nov 24, 2019, 1:05 PM IST
  • Facebook
  • Twitter
  • Whatsapp

ಮೈಸೂರು(ನ.24): ಅನರ್ಹ ಶಾಸಕ ಹೆಚ್.ವಿಶ್ವನಾಥ್ ಓರ್ವ ಬೆಲೆ ಇಲ್ಲದ ಮನುಷ್ಯನಾಗಿದ್ದಾರೆ. ಅವರ ಯಾವ ಹೇಳಿಕೆಗೂ ಮೌಲ್ಯ ಇಲ್ಲ. ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ವ್ಯಂಗ್ಯವಾಡಿದ್ದಾರೆ.

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರ ಮಾತುಗಳಿಗೆ ಏನು ಬೆಲೆ ಇದೆ ಹೇಳಿ.ತಮಗೆ ಬೇಕಾದಾಗ ಹೊಗಳಿ ಬೇಕಿಲ್ಲದಾಗ ಟೀಕಿಸುತ್ತಾರೆ. ಎಲ್ಲ ಸಿದ್ದಾಂತಗಳನ್ನ ಬಿಟ್ಟು ಜೀವಮಾನ‌ದಿಂದ ಟೀಕಿಸಿದ್ದ ಬಿಜೆಪಿಗೆ ಈಗ ಸೇರಿದ್ದಾರೆ. ಇವರೆಂತ ನಾಯಕರಾಗಿದ್ದಾರೆ. ವಿಶ್ವನಾಥ್ ಕಾಂಗ್ರೆಸ್‌ನಲ್ಲಿ ಮಂತ್ರಿ ಆಗಿಲ್ವಾ, ಅವರಿಗೆ ಮಂತ್ರಿ ಆಗೋದೆ ದೊಡ್ಡ ವಿಷಯವಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ಮತ್ತೋರ್ವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬೇರೆಯವರ ಮಾತು ಕೇಳಿ ಹಳ್ಳಕ್ಕೆ ಬಿದ್ದಿದ್ದಾರೆ. ಚುನಾವಣೆಯಲ್ಲಿ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದರಿಂದ ಹತಾಶೆಯಿಂದ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅನರ್ಹರನ್ನು ಬಿಜೆಪಿ ಕಾರ್ಯಕರ್ತರೂ ಒಪ್ಪುತ್ತಿಲ್ಲ. ಈ ನನ್ಮಕ್ಕಳ್ಳು ಮೋಸ ಮಾಡಿ ಹೋದರು ಅಂತ ಕಾಂಗ್ರೆಸ್ ಕಾರ್ಯಕರ್ತರೂ ಒಪ್ಪುತ್ತಿಲ್ಲ. ಹೀಗಾಗಿ ಅನರ್ಹರ ಸೋಲು ಗ್ಯಾರೆಂಟಿ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios