ಕನಕಪುರ: ತಂದೆ ಸಮಾಧಿಗೆ ಪೂಜೆ, ಎಡೆ ಇಟ್ಟ ಡಿ.ಕೆ. ಶಿವಕುಮಾರ್
ತಂದೆ ಡಿ.ಕೆ.ಕೆಂಪೇಗೌಡರು ಮತ್ತು ಪೂರ್ವಜರ ಸಮಾಧಿಗಳಿಗೆ ಗಣೇಶನ ಹಬ್ಬದ ದಿನದಂದು ಪೂಜೆ ಸಲ್ಲಿಸಿ ಎಡೆ ಇಟ್ಟ ಡಿ.ಕೆ.ಶಿವಕುಮಾರ್ ಅವರು ಕುಟುಂಬ| ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ದೊಡ್ಡಾಲಹಳ್ಳಿ ಗ್ರಾಮ|
ಕನಕಪುರ(ಆ.24): ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿರುವ ತಂದೆ ಡಿ.ಕೆ.ಕೆಂಪೇಗೌಡರು ಮತ್ತು ಪೂರ್ವಜರ ಸಮಾಧಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಶನಿವಾರ ಗಣೇಶನ ಹಬ್ಬದ ದಿನದಂದು ಪೂಜೆ ಸಲ್ಲಿಸಿ ಎಡೆ ಇಟ್ಟರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರತಿವರ್ಷ ಗಣೇಶನ ಹಬ್ಬದ ದಿನ ನಮ್ಮ ತಂದೆ ಮತ್ತು ಪೂರ್ವಜರಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ. ಹಾಗಾಗಿ ಇಂದು ಕುಟುಂಬದವರ ಜೊತೆಗೆ ಬಂದು ಪೂಜೆ ಸಲ್ಲಿಸಿದ್ದೇನೆ. ಹಿರಿಯರಿಗೆ ಎಡೆ ಇಟ್ಟು ಆತ್ಮಕ್ಕೆ ಶಾಂತಿ ಕೋರಿ ಅವರ ಆಶೀರ್ವಾದ ಬೇಡಿದ್ದೇವೆ ಎಂದರು.
ಡಿಕೆ ಸಹೋದರರ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ : ಕೈ ಗೆಲುವಿಗೆ ರಣತಂತ್ರ
ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್ ಈ ವೇಳೆ ಇದ್ದರು.