'ಕುಮಾರಸ್ವಾಮಿಯವರಿಂದ ಬಿಜೆಪಿಗೆ ಬೆಂಬಲ : ಹತಾಶ ಮನೋಭಾವದಿಂದ ಕೈ ಟೀಕೆ'
- ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಂದ ಹತಾಶೆಯ ಹೇಳಿಕೆ
- 2023ರ ಚುನಾವಣೆ ನೀವೇ ಹೇಳಿದಂತೆ ನಿಮ್ಮ ಕೊನೆಯ ಚುನಾವಣೆ ಎಂಬುದನ್ನು ಜನರೇ ನಿರ್ಧರಿಸಿದ್ದಾರೆ
ಮೈಸೂರು (ಅ.14): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಹತಾಶೆಯ ಹೇಳಿಕೆ ನೀಡುತ್ತಿದ್ದಾರೆ. 2023ರ ಚುನಾವಣೆ (Election) ನೀವೇ ಹೇಳಿದಂತೆ ನಿಮ್ಮ ಕೊನೆಯ ಚುನಾವಣೆ ಎಂಬುದನ್ನು ಜನರೇ ನಿರ್ಧರಿಸಿದ್ದಾರೆ ಎಂದು ಕೆಪಿಸಿಸಿ (KPCC) ವಕ್ತಾರ ಎಂ. ಲಕ್ಷ್ಮಣ (M Laxman) ವ್ಯಂಗ್ಯವಾಡಿದರು.
ಇತ್ತೀಚೆಗೆ ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ನಿಮ್ಹಾನ್ಸ್ (Nimhans) ಮನೋವೈದ್ಯರನ್ನು ಕೇಳಿದ್ದೇನೆ. ಇದರ ಹಿಂದೆ ಜೆಡಿಎಸ್‌ನ (JDS) ಅಸ್ತಿತ್ವ ಉಳಿಸಿಕೊಳ್ಳಲು ಪ್ರಚಾರ ಪಡೆಯುವ ಉದ್ದೇಶ ಇರಬಹುದು, ಬಿಜೆಪಿಯಿಂದ (BJP) ಸುಪಾರಿ ಪಡೆದಿರಬೇಕು, ಹತಾಶ ಮನೋಭಾವ ಕಾಡುತ್ತಿರಬೇಕು ಎಂಬ ಕಾರಣ ಪಟ್ಟಿಮಾಡಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್‌ಗೆ ಸಿದ್ದರಾಮಯ್ಯರಿಂದಲೇ ಬೆಂಕಿ: ಕುಮಾರಸ್ವಾಮಿ
ವಿರೋಧ ಪಕ್ಷದ ನಾಯಕರ ಬಗ್ಗೆ ಅಗೌರವವಾಗಿ ನಡೆದುಕೊಳ್ಳುತ್ತಿರುವ ಕುಮಾರಸ್ವಾಮಿ ಅವರ ವಿರುದ್ಧ ವಿಧಾನಸಭಾಧ್ಯಕ್ಷರು ಹಕ್ಕುಚ್ಯುತಿ ಜಾರಿಗೊಳಿಸಬೇಕು. ಕಣ್ಣೀರು ಸುರಿಸಿ ಅನುಕಂಪ ಗಿಟ್ಟಿಸುವುದು, ಕಾಂಗ್ರೆಸ್ (Congress) ಮುಖಂಡರ ತೇಜೋವಧೆ ಮಾಡಿ ಮತ ಗಿಟ್ಟಿಸಬಹುದು ಎಂಬ ಆಸೆ ಬಿಡಬೇಕು. ಜಾತಿಗಳನ್ನು ಒಡೆಯುವುದೇ ನಿಮ್ಮ ಹುನ್ನಾರ. ಒಕ್ಕಲಿಗ ಸಮುದಾಯ ನಿಮ್ಮಿಂದ ದೂರವಾಗುತ್ತಿದೆ. ಕುರುಬ ಮತ್ತು ಒಕ್ಕಲಿಗ ಸಮುದಾಯದ ನಡುವೆ ದೊಡ್ಡ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದೀರಿ. ಆದರೆ ಒಕ್ಕಲಿಗ (Vokkaliga) ಸಮುದಾಯ ನಿಮ್ಮ ಮಾತನ್ನು ನಂಬಲ್ಲ ಎಂದರು.
ಸಿದ್ದರಾಮಯ್ಯ (Siddaramaiah) ಯಾರನ್ನಾದರೂ ಭೇಟಿ ಆಗುವುದಾದರೆ ಹಗಲು ಹೊತ್ತಲ್ಲೇ, ಎಲ್ಲರೆದುರಲ್ಲೇ ಭೇಟಿ ಆಗುತ್ತಾರೆ. ರಾತ್ರಿ ಹೊತ್ತಲ್ಲಿ, ಟವೆಲ್ ಹಾಕಿ ಮುಖ ಮುಚ್ಚಿಕೊಂಡು ಭೇಟಿ ಆಗುವುದಿಲ್ಲ. ಕುಮಾರಸ್ವಾಮಿ ಅವರೇ, ನೀವು ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ. ಸುಳ್ಳು ಹೇಳುತ್ತಾ ಕಾಲಹರಣ ಮಾಡಬೇಡಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಶಿವಣ್ಣ, ನಾಗಭೂಷಣ
ಸವಾಲು ಹಾಕಿದ ಸಿದ್ದರಾಮಯ್ಯ
ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಸಿದ್ದರಾಮಯ್ಯ ಕದ್ದುಮುಚ್ಚಿ ಭೇಟಿಯಾಗಿದ್ದಾರೆ ಎನ್ನುವ ಕುಮಾರಸ್ವಾಮಿಯವರ ಹೇಳಿಕೆ ರಾಜ್ಯ ರಾಜಕಾರಣಲ್ಲಿ (Sate Politics) ಭಾರೀ ಸಂಚಲನ ಮೂಡಿಸಿದೆ.
ಸಿದ್ದು-ಬಿಎಸ್‌ವೈ ಕದ್ದುಮುಚ್ಚಿ ಭೇಟಿ: ಇದಕ್ಕೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ
ಇನ್ನು ಈ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಡಿಯೂರಪ್ಪರನ್ನ ಹುಟ್ಟುಹಬ್ಬದ ದಿನ ನಾನು ಭೇಟಿ ಮಾಡಿದ್ದೆ. ಅದನ್ನ ಹೊರತುಪಡಿಸಿ ನಾನು ಯಡಿಯೂರಪ್ಪರನ್ನ ಭೇಟಿ ಮಾಡಿಲ್ಲ. ಭೇಟಿ ಮಾಡೋ ಗಿರಾಕಿ ಕುಮಾರಸ್ವಾಮಿ. ನಾನು ಭೇಟಿ ಮಾಡಿದ್ದೇನೆ ಎಂದು ಪ್ರೂ ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.