ವಿಜಯನಗರ: ಕೊರೋನಾ 2ನೇ ಅಲೆ ಭೀತಿ, ಕೊಟ್ಟೂರೇಶ್ವರ ರಥೋತ್ಸವ ರದ್ದು

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಜಾತ್ರಾ ಮಹೋತ್ಸವ| ಮಾ. 7 ರಂದು ನಡೆಯಬೇಕಿದ್ದ ರಥೋತ್ಸವ| ಪೂಜಾ, ಕೈಂಕರ್ಯಗಳಿಗೆ ಮಾತ್ರ ಅವಕಾಶ| ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಉತ್ತರ ರಥೋತ್ಸವ| 

Kottureshwara Fair Cancel due to Corona 2nd Wave grg

ವಿಜಯನಗರ(ಫೆ.25):  ಮಹಾಮಾರಿ ಕೊರೋನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಕೊಟ್ಟೂರು ಪಟ್ಟಣದ ಉತ್ತರ ಕರ್ನಾಟಕದ ಅತಿದೊಡ್ಡ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವವನ್ನ ಜಿಲ್ಲಾಡಳಿತ ರದ್ದು ಮಾಡಿ ಜಿಲ್ಲಾಧಿಕಾರಿ ಮಂಜುನಾಥ್ ಅವರು ಆದೇಶ ಹೊರಡಿಸಿದ್ದಾರೆ.

ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ. 7 ರಂದು ನಡೆಯಬೇಕಿದ್ದ ರಥೋತ್ಸವವನ್ನ ರದ್ದು ಮಾಡಲು ಜಿಲ್ಲಾಡಳಿತ ತಿರ್ಮಾನಿಸಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಉತ್ತರ ರಥೋತ್ಸವ ನಡೆಯುತ್ತಿತ್ತು. 

'ಸಚಿವ ಆನಂದ ಸಿಂಗ್ ಬಳ್ಳಾರಿ ಜಿಲ್ಲೆಯಲ್ಲಿ ಇರೋದು ಬೇಕಾಗಿಲ್ಲ'

ಪ್ರತಿ ವರ್ಷದಂತೆ ಪೂಜಾ, ಕೈಂಕರ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.  ರಾಜ್ಯದ ವಿವಿ ಜಿಲ್ಲೆಗಳಿಂದ ಪಾದಯಾತ್ರೆಯ ಮೂಲಕವೂ ಭಕ್ತರು ಆಗಮಿಸುತ್ತಿದ್ದರು. ಹೊರಗಿನ ಜನರಿಗೆ ಕೊಟ್ಟೂರಿಗೆ ಬರಲು ಅವಕಾಶವಿಲ್ಲ ಸರಳ ಪೂಜೆಯ ಕೈಂಕರ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
 

Latest Videos
Follow Us:
Download App:
  • android
  • ios