Asianet Suvarna News Asianet Suvarna News

Kannada Rajyotsava: ಬೀದರ್ ಕೋಟೆಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ

ಇಲ್ಲಿನ ಐತಿಹಾಸಿಕ ಬೀದರ್ ಕೋಟೆಯ  ಆವರಣದಲ್ಲಿ ಇಲ್ಲಿನ 'ಬಿದರಿ ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು' ಶಾಹೀನ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಕೋಟಿ ಕಂಠ ಗಾಯನ ಅದ್ಧೂರಿ ಯಶಸ್ವಿ ಕಂಡಿತು.

Koti kanta gayana in Bidar Fort gow
Author
First Published Oct 28, 2022, 11:04 PM IST

ಬೀದರ್ (ಅ.28): ಇಲ್ಲಿನ ಐತಿಹಾಸಿಕ ಬೀದರ್ ಕೋಟೆಯ  ಆವರಣದಲ್ಲಿ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಮಾತಾಡ್ ಮಾತಾಡ್ ಕೋಟಿ ಕಂಠ ಗಾಯನ ಐತಿಹಾಸಿಕ ಸ್ಮಾರಕ ಸ್ಥಳಗಳ ಬೀಡಾದ ಕೋಟೆಯಲ್ಲಿ ಕನ್ನಡದ ಹಾಡುಗಳನ್ನು ಮೊಳಗಿಸುವಲ್ಲಿ ಇಲ್ಲಿನ 'ಬಿದರಿ ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು' ಶಾಹೀನ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಅದ್ಧೂರಿ ಯಶಸ್ವಿ ಕಂಡಿತು. 'ಬಿದರಿ ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ' ಯ ಅಧ್ಯಕ್ಷರಾದ ಖ್ಯಾತ ಗಾಯಕಿ ಶ್ರೀಮತಿ ರೇಖಾ ಅಪ್ಪಾರಾವ್ ಸೌದಿ ಅವರ ನೇತೃತ್ವದಲ್ಲಿ ಜಿಲ್ಲೆಯ ಶಾಹೀನ ಶಿಕ್ಷಣ ಸಂಸ್ಥೆ  ಸಹಯೋಗದಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕನ್ನಡ ಪ್ರೇಮಿಗಳು ಈ ಅಮೃತ ಘಳಿಗೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು. ಕುವೆಂಪು ರಚಿತ ನಾಡಗೀತೆಯಿಂದ ಆರಂಭಾವಾದ ಗಾಯನದಲ್ಲಿ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ಕನ್ನಡ ಡಿಂಡಿಮ,  ಡಿ.ಎಸ್ ಕರ್ಕಿ ಅವರ ಹಚ್ಚೇವು ಕನ್ನಡದ ದೀಪ,   ಚೆನ್ನವೀರ ಕಣವಿ ಅವರ ವಿಶ್ವ ವಿನೂತನ ಹಾಗೂ ಹಂಸಲೇಖಾ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಸಾವಿರಾರು ವಿದ್ಯಾರ್ಥಿಗಳ ಕಂಠದಿಂದ ಇಡೀ ಕೋಟೆಯ ಆವರಣದಲ್ಲಿ ಮೊಳಗಿತು. ಈ ಸಂದರ್ಭದಲ್ಲಿ ಸಂಕಲ್ಪ ವಿಧಿಯನ್ನು ಬೋಧಿಸಲಾಯಿತು.

ಬೆಂಗಳೂರು: ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮೊಳಗಿದ ಕನ್ನಡದ ಹಾಡು..!

ಈ ಸಂದರ್ಭದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಯ ಮಾಹೇರ್ ಮೇಡಂ, ಹಿರಿಯ ಜಾನಪದ ಗಾಯಕರಾದ ಶಂಭುಲಿಂಗ ವಾಲ್ದೊಡ್ಡಿ, ಪಶು ವೈದ್ಯ ವಿವಿ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ, ಗಾಯಕ ರಾಜೇಶ್ ಕುಲಕರ್ಣಿ, ಹಿರಿಯ ಪತ್ರಕರ್ತ ಅಪ್ಪಾರಾವ್ ಸೌದಿ, ಕಲಾವಿದ ಯೇಸುದಾಸ್ ಅಲಿಯಂಬುರೆ, ಅಜಯ್ ಯೇಸುದಾಸ್ ಮತ್ತಿತರು ಇದ್ದರು.

ಉಡುಪಿ: ಕಡಲಿನ ನಡುವೆ ನೂರಾರು ಬೋಟುಗಳಲ್ಲಿ ಕೋಟಿ ಕಂಠ ಗಾಯನ

ಐತಿಹಾಸಿಕ ಸ್ಮಾರಕಗಳ ಮುಂದೆ ಕೋಟಿ ಕಂಠ ಗಾಯನ:  ಮದ್ದೂರು ತಾಲೂಕಿನ ಶಿವಪುರ ಸತ್ಯಾಗ್ರಹ ಸೌಧ, ಮೈಸೂರಿನ ಅರಮನೆ ಆವರಣ, ಹಂಪಿಯ ಐತಿಹಾಸಿಕ ಬಸವಣ್ಣ ಮಂಟಪ, ಕುಮಟಾದ ಮಿರ್ಜಾನ್‌ ಕೋಟೆ, ಹುಬ್ಬಳ್ಳಿಯ ಕಿಮ್ಸ್‌ ಆವರಣ, ಬಳ್ಳಾರಿಯ ವಿಮ್ಸ್‌ ಆವರಣ, ಕೊಪ್ಪಳದ ಗವಿಮಠ ಆವರಣ, ಕಾರವಾರದ ಸದಾಶಿವ ಗಡದ ಕೋಟೆ ಸೇರಿದಂತೆ ರಾಜ್ಯದ ಐತಿಹಾಸಿಕ ಸ್ಮಾರಕ ಸೇರಿದಂತೆ ಎಲ್ಲೆಡೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ, ಅದ್ಧೂರಿಯಾಗಿ 

Follow Us:
Download App:
  • android
  • ios