ಮಂಗಳೂರು(ಜು.29): ಡಿಸಿ ವರ್ಗಾವಣೆ ಬಗ್ಗೆ ಶಾಸಕ ಯು. ಟಿ. ಖಾದರ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದು ಖಾದರ್ ಕಾಲವಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಡಿಸಿ ವರ್ಗಾವಣೆ ಸಂಬಂಧ ಖಾದರ್ ಟ್ವೀಟ್ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದು, ಸರ್ಕಾರದ ಸ್ವಾಭಾವಿಕ ವರ್ಗಾವಣೆ ನಿಯಮದಂತೆ ದ.ಕ ಡಿಸಿ ವರ್ಗಾವಣೆಯಾಗಿದೆ ಎಂದಿದ್ದಾರೆ.

'ಮೊದಲು ಇವಳನ್ನು ಕಡಿದು ಕೊಲ್ಲಬೇಕು': ಡಿಸಿ ಸಿಂಧೂ ರೂಪೇಶ್‌ಗೆ ಕೊಲೆ ಬೆದರಿಕೆ ಹಾಕಿದವ ಅಂದರ್

ಡಿಸಿ ವರ್ಗಾವಣೆಗೆ ರಾಜಕೀಯ ಲೇಪ ಬಳಸಿ ಖಾದರ್ ಅವರು ಆರೋಪ ಮಾಡಿದ್ದಾರೆ. ಅಲ್ಲದೇ ಡಿಸಿಗೆ ಬೆದರಿಕೆ ಹಾಕಿದವರ ಮೇಲೆ ಕ್ರಮ ಕೈಗೊಂಡಿಲ್ಲ ಅಂದಿದ್ದಾರೆ. ಯು.ಟಿ.ಖಾದರ್ ತಕ್ಷಣ ತಮ್ಮ ಮಾತುಗಳನ್ನು ವಾಪಾಸ್ ಪಡೆಯಲಿ ಎಂದಿದ್ದಾರೆ.

ಬೆದರಿಕೆ ಹಾಕಿದವರ ಮೇಲೆ ಈಗಾಗಲೇ ಸ್ವಯಂ ಪ್ರೇರಿತ ಕ್ರಮವಾಗಿದೆ. ಸರ್ಕಾರದ ಸ್ವಾಭಾವಿಕ ನಿಯಮದಂತೆ ಡಿಸಿ ವರ್ಗಾವಣೆಯಾಗಿದೆ. ಯು.ಟಿ.ಖಾದರ್ ಕಾಲದಲ್ಲಿ ಅಧಿಕಾರಿಗಳು, ಪೊಲೀಸರಿಗೆ ಬೆದರಿಕೆ, ಗೂಂಡಾಗಿರಿ ಯಥೇಚ್ಛವಾಗಿ ನಡೆಯುತ್ತಿತ್ತು. ಇವತ್ತು‌ ಖಾದರ್ ಕಾಲವಲ್ಲ ಅನ್ನೋದನ್ನ ‌ಖಾದರ್ ನೆನಪಿಸಿಕೊಳ್ಳಲಿ ಎಂದು ಹೇಳಿದ್ದಾರೆ.