Asianet Suvarna News Asianet Suvarna News

ದಲಿತರಿಗೆ ದಾರಿ ಬಿಡಿಸುವಲ್ಲಿ ಕೊರಟಗೆರೆ ತಹಸೀಲ್ದಾರ್ ಯಶಸ್ವಿ: ಸಿಪಿಐ

ನೂರಾರು ಜನ ಓಡಾಡಲು ಜಾಗವಿಲ್ಲದೆ ಆತಂಕದಲ್ಲಿದ್ದ ದಲಿತರಿಗೆ ತಹಸೀಲ್ದಾರ್ ಮುನಿಶಾಮಿ ರೆಡ್ಡಿ ಮತ್ತು ಸಿಪಿಐ ಅನಿಲ್ ಕುಮಾರ್ ದಾರಿ ಬಿಡಿಸಿದ್ದಾರೆ.

Koratagere tehsildar successfully Make  road for Dalits: CPI snr
Author
First Published Oct 11, 2023, 7:30 AM IST

ಕೊರಟಗೆರೆ: ನೂರಾರು ಜನ ಓಡಾಡಲು ಜಾಗವಿಲ್ಲದೆ ಆತಂಕದಲ್ಲಿದ್ದ ದಲಿತರಿಗೆ ತಹಸೀಲ್ದಾರ್ ಮುನಿಶಾಮಿ ರೆಡ್ಡಿ ಮತ್ತು ಸಿಪಿಐ ಅನಿಲ್ ಕುಮಾರ್ ದಾರಿ ಬಿಡಿಸಿದ್ದಾರೆ.

ಕೊರಟಗೆರೆ ಸಿಂಗ್ರಿಹಳ್ಳಿ ಗ್ರಾಮದಲ್ಲಿ ಸವರ್ಣೀಯ ದೇವರಾಜಪ್ಪ ಜಮೀನಿನಲ್ಲೇ 4 ವರ್ಷಗಳಿಂದ ದಲಿತರು ತಮ್ಮ ಮನೆಗಳಿಗೆ ಹೋಗಿ ಬರಲು ಜಾಗ ಬಿಟ್ಟಿದ್ದರು. ದೇವರಾಜಪ್ಪ ಹಾಗೂ ಕೆಲವು ದಲಿತ ಕುಟುಂಬದವರು ವಿಎಸ್.ಎಸ್.ಎನ್ ಚುನಾವಣಾ ವಿಚಾರವಾಗಿ ಸ್ವಲ್ಪ ವೈಮನಸ್ಸು ಉಂಟಾಗಿತ್ತು.

ಈ ವಿಚಾರವಾಗಿ ತಮ್ಮ ಸ್ವಂತ ಜಮೀನಿನಲ್ಲಿ ನೀವು ಸಂಚರಿಸುವುದು ಬೇಡವೆಂದು ದೇವರಾಜಪ್ಪ ವಿರೋಧ ವ್ಯಕ್ತಪಡಿಸಿದ್ದರು. ದಲಿತ ಕುಟುಂಬದ ಕೆಲವರು ದೇವರಾಜಪ್ಪನವರ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಹಾಗೂ ತೆಂಗು ನಾಶ ಮಾಡಿದ್ದರು.

ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದಕ್ಕೆ ಕಾಂಗ್ರೆಸ್ ಮುಖಂಡ ವಾಲೆ ಚಂದ್ರಯ್ಯ ನವರು ಈ ಘಟನೆ ತಹಸೀಲ್ದಾರ್ ಗಮನಕ್ಕೆ ತಂದಿದ್ದಾರೆ. ತಾಲೂಕು ಆಡಳಿತ ಕಚೇರಿಯಲ್ಲಿ ದಲಿತ ಮುಖಂಡರು ಹಾಗೂ ದೇವರಾಜಪ್ಪ ಅವರನ್ನು ಕರೆಸಿ ದೇವರಾಜಪ್ಪ ಅವರಿಗೆ ಮನಪಲಿಸಿ ಆರು ಅಡಿ ಜಾಗವನ್ನು ತಮ್ಮ ಜಮೀನಿನಲ್ಲಿ ಓಡಾಡಲು ದಾರಿ ನೀಡುವಂತೆ ಮನವಿ ಮಾಡಿದರು.ತಹಸೀಲ್ದಾರ್ ಹಾಗೂ ಸಿಪಿಐ ಮಾತಿಗೆ ಬೆಲೆ ನೀಡಿ ದೇವರಾಜಪ್ಪ ದಲಿತರಿಗೆ ದಾರಿ ನೀಡಲು ಒಪ್ಪಿಕೊಂಡು ಮಾನವಿಯತೆ ಮೆರೆದಿದ್ದಾರೆ.

ಈ ವಿಚಾರವಾಗಿ ಆಡಳಿತವರ್ಗ ಮತ್ತು ಪೊಲೀಸ್ ಇಲಾಖೆ ವತಿಯಿಂದ ಮಾನವೀಯತೆ ಮೆರೆದ ದೇವರಾಜಪ್ಪ ಅವರಿಗೆ ತಹಸೀಲ್ದಾರ್ ಮುನಿಶಾಮಿ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.

ಟ್ರಾಫಿಕ್ ತಡೆಗೆ ಡಿಕೆಶಿ ಪ್ಲಾನ್

ಬೆಂಗಳೂರು (ಅ.08): ವಾರದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಇದನ್ನು ಸುಧಾರಿಸಲು ಮೆಟ್ರೋ ಸೇರಿದಂತೆ ಇನ್ನಿತರೆ ಸಾರಿಗೆ ವ್ಯವಸ್ಥೆಗಳ ಸಂಪರ್ಕ ಕೊಂಡಿ ಯೋಜನೆಯ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಹೊರವರ್ತುಲ ರಸ್ತೆ ಕಂಪನಿಗಳ ಸಂಘದ (ಒಆರ್‌ಆರ್ ಸಿಎ) ಸದಸ್ಯರೊಂದಿಗೆ ಕಾಡುಬೀಸನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ಬಿಡುವುದಿಲ್ಲ. 

ಬೆಂಗಳೂರಿನ ಐದನೇ ಒಂದು ಭಾಗದಷ್ಟು ಆದಾಯ ಹೊರ ವರ್ತುಲ ರಸ್ತೆಯ ಉದ್ದಿಮೆಗಳಿಂದಲೇ ಬರುತ್ತಿದೆ. ಬೆಂಗಳೂರಿನ ಹಾಗೂ ಹೊರ ವರ್ತುಲ ರಸ್ತೆಯ ಉದ್ದಿಮೆಗಳ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಅರಿವಿದೆ. ನೌಕರರರಿಗೆ, ಆ ಭಾಗದ ನಿವಾಸಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸಮಸ್ಯೆ ನಿವಾರಿಸಲು ಆದ್ಯತೆ ನೀಡುತ್ತೇವೆ ಎಂದರು. ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ 6ರಿಂದ 8 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಂಚಾರ ದಟ್ಟಣೆಗೆ ಇರುವ ಸಮಸ್ಯೆಗಳನ್ನು ಮೊದಲು ನಿವಾರಿಸಲಾಗುವುದು. 

ಉದ್ಯೋಗ ಸೃಷ್ಟಿ ಉದ್ದೇಶದಿಂದ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ: ಡಿಕೆಶಿ

ಮುಂದಿನ ಮೂರು ತಿಂಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿರುವ ಅನಧಿಕೃತ ಅಂಗಡಿ- ಮುಂಗಟ್ಟುಗಳನ್ನು ಗುರುತಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ತೆರವುಗೊಳಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರಿನ ಪೊಲೀಸ್, ಬಿಬಿಎಂಪಿ, ಬಿಡಿಎ, ಮೆಟ್ರೋ ಕಮಿಷನರ್‌ಗಳಿಗೆ ಸಂಚಾರ ದಟ್ಟಣೆ ಬಗ್ಗೆ ಅರಿವಿದೆ, ಅವರೂ ಸಹ ಸರ್ಕಾರದ ಒತ್ತಾಸೆಯಂತೆ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

Follow Us:
Download App:
  • android
  • ios