ಕೊರಟಗೆರೆ : ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಸದಸ್ಯ ಗರಂ
ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 50ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕನ್ನಡ ಹಬ್ಬವನ್ನು ತಾಲೂಕಿನ ಕನ್ನಡಪರ ಸಂಘನೆಗಳೊಂದಿಗೆ ಆಚರಿಸಲಾಯಿತು.
ಕೊರಟಗೆರೆ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 50ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕನ್ನಡ ಹಬ್ಬವನ್ನು ತಾಲೂಕಿನ ಕನ್ನಡಪರ ಸಂಘನೆಗಳೊಂದಿಗೆ ಆಚರಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 25ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಹಶಿಲ್ದಾರ್ ರಂಜಿತ್, ಗ್ರೇಡ್ 2 ತಹಸೀಲ್ದಾರ್ ನರಸಿಂಹಮೂರ್ತಿ, ತಾ.ಪಂ ಇಒ ದೊಡ್ಡಸಿದ್ದಯ್ಯ, ಸಿಪಿಐ ಅನಿಲ್ ಕುಮಾರ್, ಪ.ಪಂ ಸದಸ್ಯರಾದ ಪುಟ್ಟನರಸಪ್ಪ, ಎ.ಡಿ ಬಲರಾಮಯ್ಯ, ಓಬಳರಾಜು, ಲಕ್ಷ್ಮೀನಾರಾಯಣ್, ನಾಟಕ ಅಕಾಡೆಮಿ ಮೈಲಾರಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಪುರುಷೋತ್ತಮ್, ಸ.ನೌಕರ ಸಂಘದ ಅಧ್ಯಕ್ಷ ರುದ್ರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು, ಕನ್ನಡ ಪರ ಸಂಘಟನೆಗಳು ಸೇರಿದಂತೆ ತಾ. ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಆಡಳಿತದ ವಿರುದ್ಧ ಗರಂ
ತಾಲೂಕು ಆಡಳಿತ ಏನು ಮಾಡುತ್ತಿದೆ, ಸಂದೇಶ ಎಲ್ಲಿ ಓದಬೇಕಿತ್ತು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲಿ. ಎಂ.ಎಲ್.ಎ ಬರಲ್ಲಿಲ್ಲ ಅಂದರೇ ನಿಮಗೆ ಜವಾಬ್ದಾರಿ ಇಲ್ಲವೇ? ರಾಜ್ಯದಲ್ಲಿ ಕನ್ನಡ ಶಾಲೆ ಮುಚ್ಚುವ ಸ್ಥಿತಿಗೆ ಬಂದಿದೆ. ಕಾರ್ಯಕ್ರಮಗಳಿಗೆ ಶಾಸಕರು ಬಂದರೆ ಯಶಸ್ವಿಯಾಗಿ ಮಾಡುತ್ತೀರಾ ಅವರು ಬಂದಿಲ್ಲವೆಂದರೆ ಇನ್ನೊಂದು ರೀತಿ ಮಾಡುತ್ತಿರಾ. 50ನೇ ವರ್ಷದ ಈ ಸಂಭ್ರಮಾಚರಣೆ ವ್ಯವಸ್ಥಿತವಾಗಿತಬೇಕಿತ್ತು. ಬೇಜವಾಬ್ದಾರಿಯಿಂದ ಕಾರ್ಯಕ್ರಮ ಗಳನ್ನು ಮಾಡಿ ಕನ್ನಡ ನಾಡು, ನುಡಿಗೆ ಅಗೌರವ ತರುವುದು ಬೇಸರದ ಸಂಗತಿ. ಪ್ರಭಾರ ತಹಶೀಲ್ದಾರ್ ಗೆ ಕಾರ್ಯಕ್ರಮಗಳ ಬಗ್ಗೆ ಗೊತ್ತಿರುವುದಿಲ್ಲ, ಬೇರೆ ಅಧಿಕಾರಿಗಳು ತಿಳಿದಿಲ್ವಾ, ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದೇ ಅಸಡ್ಡೆ ತೋರುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
kpcc ಶೀಘ್ರ ಪುನಾರಚನೆ
ಬೆಂಗಳೂರು (ನ.02): ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪುನರ್ ರಚನೆ ಬಗ್ಗೆ ಚರ್ಚೆ ನಡೆಸಿದ್ದು, ಸದ್ಯದಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಕೆಪಿಸಿಸಿ ಪುನರ್ ರಚನೆ ಪ್ರಸ್ತಾವನೆ ಇಡುತ್ತೇವೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಕೆಪಿಸಿಸಿ ಸಂಘಟನಾ ವಿಭಾಗದ ಪ್ರಮುಖ ಪದಾಧಿಕಾರಿ ಸ್ಥಾನಗಳಲ್ಲಿರುವ ಅನೇಕರು ಶಾಸಕರಾಗಿದ್ದಾರೆ ಹಾಗೂ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಹೀಗಾಗಿ ಕೆಪಿಸಿಸಿ ಪುನರ್ ರಚನೆ ಅನಿವಾರ್ಯ ಎಂಬುದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದರು. ಈ ವೇಳೆ ಕೆಪಿಸಿಸಿ ಪುನರ್ ರಚನೆ ಮಾಡುವ ಮೂಲಕ ಪದಾಧಿಕಾರಿ ಸ್ಥಾನಗಳಲ್ಲಿರುವ ಸಚಿವರು, ಶಾಸಕರಿಗೆ ಜವಾಬ್ದಾರಿಯಿಂದ ಮುಕ್ತಿ ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಈ ಬಗ್ಗೆ ಸದ್ಯದಲ್ಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಸರ್ಕಾರಿ ಶಾಲೆಗಳಿಗಿನ್ನು ಉಚಿತ ವಿದ್ಯುತ್, ನೀರು: ಸಿದ್ದರಾಮಯ್ಯ ಘೋಷಣೆ
ಕೆಪಿಸಿಸಿ ಪುನರ್ ರಚನೆ ಮೂಲಕ ಪದಾಧಿಕಾರಿ ಹುದ್ದೆಗಳಲ್ಲಿರುವ ಶಾಸಕರು, ಸಚಿವರಿಗೆ ಜವಾಬ್ದಾರಿಯಿಂದ ಮುಕ್ತಿ ನೀಡಲಾಗುವುದು ಎಂದು ಹೇಳಿದರು. ಇನ್ನು ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ಪಕ್ಷಕ್ಕೆ ಹುಮ್ಮಸ್ಸಿನಿಂದ ದುಡಿಯುತ್ತಿರುವ ಯುವಕರ ಹೆಗಲಿಗೆ ನೀಡಬೇಕಾಗಿದೆ. ಮುಂದೆ ಶಾಸಕರು, ಸಂಸದರಾಗಬಹುದಾದ ಸಂಘಟನಾಚತುರ ಯುವಕರನ್ನು ಹುಡುಕಿ ಜವಾಬ್ದಾರಿಯನ್ನು ಹಸ್ತಾಂತರಿಸಲಾಗುವುದು. ತನ್ಮೂಲಕ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದರು.
ಬಿಜೆಪಿಗೆ ತಿರುಗೇಟು: ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ತಿಕ್ಕಾಟ ಶುರುವಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಹೌದು ಈ ಹೇಳಿಕೆಯನ್ನೂ ನಾನೂ ಕೇಳಿದ್ದೇನೆ. ಬಿಜೆಪಿಯವರು 6 ತಿಂಗಳ ಹಿಂದೆ ನೇಮಕ ಮಾಡಿರುವ ವಿರೋಧಪಕ್ಷದ ನಾಯಕರು ಈ ಹೇಳಿಕೆ ನೀಡಿದ್ದರು’ ಎಂದು ಪ್ರತಿಪಕ್ಷ ನಾಯಕರ ನೇಮಕ ಮಾಡದ ಬಿಜೆಪಿಗೆ ಟಾಂಗ್ ನ ಈಡಿದರು.