ಫೆಬ್ರವರಿಯಲ್ಲಿ ಕೊಪ್ಪಳ ರಜತ ಸಂಭ್ರಮ, ಆನೆಗೊಂದಿ ಉತ್ಸವ: ಸಚಿವ ಆನಂದ ಸಿಂಗ್
ಕೊಪ್ಪಳ ಜಿಲ್ಲೆಯಾಗಿ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ರತಜ ಸಂಭ್ರಮ ಹಾಗೂ ಆನೆಗೊಂದಿ ಉತ್ಸವವನ್ನು ಫೆಬ್ರವರಿಯಲ್ಲಿ ಆಚರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದರು.
ಕೊಪ್ಪಳ (ಜ.27) : ಕೊಪ್ಪಳ ಜಿಲ್ಲೆಯಾಗಿ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ರತಜ ಸಂಭ್ರಮ ಹಾಗೂ ಆನೆಗೊಂದಿ ಉತ್ಸವವನ್ನು ಫೆಬ್ರವರಿಯಲ್ಲಿ ಆಚರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಜತ ಸಂಭ್ರಮದ ಕೊಪ್ಪಳ ಜಿಲ್ಲಾ ಉತ್ಸವ ಆಚರಣೆಗೆ ನನ್ನ ಇಲಾಖೆಯಿಂದ .50 ಲಕ್ಷ ನೀಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೂ ಅಗತ್ಯ ಅನುದಾನ ದೊರೆಯುವ ನಿರೀಕ್ಷೆಯಲ್ಲಿದ್ದೇವೆ. ಇನ್ನು ಆನೆಗೊಂದಿ ಉತ್ಸವಕ್ಕೆ .1 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಎರಡೂ ಉತ್ಸವಗಳನ್ನು ಫೆಬ್ರವರಿಯಲ್ಲಿ ಆಚರಿಸಲಾಗುವುದು ಎಂದರು.
Karnataka Tourism: ಪ್ರವಾಸಿ ಗೈಡ್‌ಗಳಿಗೆ ಸರ್ಕಾರದ ಭಾರಿ ಬಂಪರ್!
ಸ್ಥಳೀಯವಾಗಿ ಸಂಸದರು, ಶಾಸಕರು ಮತ್ತು ಜಿಲ್ಲಾಡಳಿತ ಸೇರಿಕೊಂಡು ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಇದಕ್ಕೆ ಬೇಕಾಗಿರುವ ಸಂಪನ್ಮೂಲವನ್ನು ಸ್ಥಳೀಯವಾಗಿಯೂ ಕ್ರೋಡೀಕರಣ ಮಾಡಿಕೊಂಡು ಅತ್ಯುತ್ತಮವಾಗಿ ಆಚರಣೆ ಮಾಡಲಾಗುವುದು ಎಂದರು.
ಕೊಪ್ಪಳ ಜಿಲ್ಲೆಯಾಗಿ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ರಜತ ಸಂಭ್ರಮ ಕಾರ್ಯಕ್ರಮವನ್ನು ಈಗಾಗಲೇ ಆಚರಣೆ ಮಾಡಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಹೀಗಾಗಿ ಈಗ ಸರ್ಕಾರವೂ ಅಸ್ತು ಎಂದಿರುವುದರಿಂದ ಅಗತ್ಯ ತಯಾರಿಯನ್ನು ಜಿಲ್ಲಾಡಳಿತ ಮಾಡಿರುವುದರಿಂದ ಕೇವಲ ದಿನಾಂಕ ನಿಗದಿ ಮಾತ್ರ ಬಾಕಿ ಇದೆ ಎಂದರು.
ಸ್ಥಳೀಯ ತಂಡಗಳಿಗೆ ಅವಕಾಶ:
ಹಂಪಿ ಉತ್ಸವವನ್ನು ಈ ಬಾರಿ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಇದನ್ನು ಆಚರಣೆ ಮಾಡುವ ಮುನ್ನ ಎಂ.ಪಿ. ಪ್ರಕಾಶ ಅವರನ್ನು ಸ್ಮರಿಸಲೇಬೇಕು. ಅವರ ಇಚ್ಛಾಶಕ್ತಿಯಿಂದ ಪ್ರಾರಂಭವಾಗಿರುವ ಹಂಪಿ ಉತ್ಸವ ಇಂದು ದೇಶದ ಗಮನ ಸೆಳೆಯುತ್ತಿದೆ. ಈ ಬಾರಿ ಸಿನಿಮಾ ಅಭಿರುಚಿಗೆ ಬದಲಾಗಿ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಹಾಗಂತ ಗುಣಮಟ್ಟವಿಲ್ಲದ ಕಾರ್ಯಕ್ರಮಗಳನ್ನು ನಡೆಸಲು ಆಗದು. ಗುಣಮಟ್ಟವನ್ನು ಗಮನಿಸಿಯೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.
ಹಂಪಿ ಉತ್ಸವಕ್ಕೆ ಅಪಾರ ಪ್ರಮಾಣದ ಜನರು ಹರಿದುಬರುತ್ತಾರೆ. ಸ್ಥಳಾವಕಾಶ ಒದಗಿಸುವುದೇ ದೊಡ್ಡ ಸವಾಲು. ಆದರೂ ಇರುವ ಸ್ಥಳಗಳಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಬೇರೆ ಜಿಲ್ಲೆಯಲ್ಲಿ ನಡೆಯುವ ಉತ್ಸವಗಳನ್ನು ನಾನು ನೋಡಿದ್ದೇನೆ, ಅಲ್ಲಿ ಜಾಗ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಅನುಕೂಲವಾಗುತ್ತದೆ. ಇಲ್ಲಿ ಇರುವ ಜಾಗದಲ್ಲಿಯೇ ಅಚ್ಚುಕಟ್ಟಾಗಿ ಮಾಡಲಾಗುತ್ತದೆ ಎಂದರು.
ತೆರವು ಸೂಕ್ತ:
ಹಂಪಿಯಲ್ಲಿ ಕೆಲವೊಂದು ಸ್ಥಳಗಳಲ್ಲಿ ಹಲವು ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ. ಇದರಿಂದ ಹಂಪಿಯ ಸೌಂದರ್ಯ ಸವಿಯಲು ತೊಂದರೆಯಾಗುತ್ತದೆ. ಹೀಗಾಗಿ ಈ ಬಗ್ಗೆ ಕ್ರಮ ವಹಿಸಿ, ಅವರನ್ನು ಸ್ಥಳಾಂತರ ಮಾಡಬೇಕಾಗಿದೆ. ಸುಮಾರು 80- 90 ಕುಟುಂಬಗಳು ಇದ್ದು, ಅವರಿಗೆ ಸೂಕ್ತ ಪರಿಹಾರ ಮತ್ತು ಸ್ಥಳಾವಕಾಶವನ್ನು ಒದಗಿಸಿ ತೆರವು ಮಾಡಬೇಕಾಗಿದೆ ಎಂದರು.
ಕೊಪ್ಪಳ: ಉದ್ಯೋಗ ಖಾತ್ರಿಯಲ್ಲಿ ಶೇ. 105ರಷ್ಟು ಪ್ರಗತಿ ಸಾಧಿಸಿದ್ದೇವೆ : ಸಚಿವ ಆನಂದ ಸಿಂಗ್
ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಹಾಗೂ ಜಿಪಂ ಸಿಇಒ ¶ೌಜಿಯಾ ತರನ್ನುಮ್ ಇದ್ದರು.