Asianet Suvarna News Asianet Suvarna News

ರಾಜಕೀಯಕ್ಕೆ ಮಾತ್ರ ಕಾಂಗ್ರೆಸ್‌ನಿಂದ ಗಾಂಧಿ ಹೆಸರು ಬಳಕೆ: ಸಂಸದ ಕರಡಿ

*  ದೇಶಕ್ಕೆ ಮಹತ್ತರ ಕೊಡುಗೆ ನೀಡಿದ ಗಾಂಧೀಜಿ
*  ಶಾಸಕರಿಂದ ಬಡವರಿಗೆ ಬಟ್ಟೆ ವಿತರಣೆ
*  ಖಾದಿ ಖರೀದಿಸಿದ ಸಂಸದ ಸಂಗಣ್ಣ ಕರಡಿ 

Koppal BJP MP Sanganna Karadi Slams on Congress grg
Author
Bengaluru, First Published Oct 3, 2021, 12:28 PM IST | Last Updated Oct 3, 2021, 1:37 PM IST

ಕೊಪ್ಪಳ(ಅ.03): ಗಾಂಧಿ ಹೆಸರು ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌ ನಿಜವಾಗಲೂ ಗಾಂಧೀಜಿಯವರನ್ನು ಮರೆತಿದೆ ಎಂದು ಸಂಸದ ಸಂಗಣ್ಣ ಕರಡಿ(Sanganna Karadi) ಹೇಳಿದ್ದಾರೆ. 

ಅವರು ನಗರದ ಬಿಜೆಪಿ(BJP) ಜಿಲ್ಲಾ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ(Mahatma Gandhi) ಅವರ 152ನೇ ಜನ್ಮದಿನವನ್ನು ಮತ್ತು ಮಾಜಿ ಪ್ರಧಾನಿ ಲಾಲ್‌ಬಹದ್ದೂರ ಶಾಸ್ತ್ರಿ ಅವರ 117ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರದಲ್ಲಿ 7 ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌(Congress) ದೇಶಕ್ಕೆ ಮಹತ್ತರ ಕೊಡುಗೆ ನೀಡಿದ ಗಾಂಧೀಜಿಯವರ ಹೆಸರನ್ನು ಬಳಕೆ ಮಾಡಿಕೊಂಡು ರಾಜಕೀಯ ಮಾಡಿದ್ದನ್ನು ಬಿಟ್ಟರೆ ಅವರ ತತ್ವ, ಸಿದ್ಧಾಂತ ಅನುಷ್ಠಾನಗೊಳಿಸಿದ್ದಿಲ್ಲ. ಆದರೆ, ಅಲ್ಪ ಅವಧಿಯಲ್ಲಿ ಪ್ರಧಾನಿ ನರೇಂದ್ರ(Narendra Modi) ಮೋದಿಜಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಅವರ ಆದರ್ಶಗಳಲ್ಲಿ ಒಂದಾದ ಸ್ವಚ್ಛ ಭಾರತ್‌ ಅಭಿಯಾನವನ್ನು ಕೈಗೊಂಡು ಖಾದಿ ಗ್ರಾಮೋದ್ಯೊಗಕ್ಕೆ ಉತ್ತೇಜನ ನೀಡುವಲ್ಲಿ ಅನುದಾನ ಮೀಸಲಿಟ್ಟಿದೆ.

ಸ್ವಾತಂತ್ರ್ಯ ಹೋರಾಟಕ್ಕೆ ಅವರ ಅಮೂಲ್ಯ ಕೊಡುಗೆಗಳನ್ನು ಗೌರವಿಸಲು ಈ ದಿನದಂದು ಗಾಂಧೀಜಿಯವರ ಚಿಂತನೆಗಳನ್ನು ಮತ್ತು ತತ್ವಶಾಸ್ತ್ರಗಳನ್ನು ಪ್ರಚಾರ ಮಾಡುವ ಅನೇಕ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತದೆ. ಅವರು ಕಂಡ ರಾಮ ರಾಜ್ಯದ ಕನಸನ್ನು ಈಡೇರಿಸುವಲ್ಲಿ, ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ಮಾಣ ಮಾಡುವಲ್ಲಿ ಶ್ರಮವಹಿಸುತ್ತಿದೆ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ ಶಾಸ್ತ್ರಿ ಅವರ ಮೌಲ್ಯಗಳು ಮತ್ತು ತತ್ವಗಳನ್ನಾಧರಿಸಿದ ಅವರ ಜೀವನವು ದೇಶವಾಸಿಗಳಲ್ಲಿ ಸ್ಫೂರ್ತಿಯ ಸೆಲೆಯಾಗಿ ನಿಲ್ಲುತ್ತದೆ ಎಂದರು.

'ವಿಶ್ವದಲ್ಲಿ ಭಾರತದ ಘನತೆ ಹೆಚ್ಚಿಸಿದ ಪ್ರಧಾನಿ ಮೋದಿ'

ವಿಭಾಗದ ಸಹ ಪ್ರಭಾರಿ ಚಂದ್ರಶೇಖರಗೌಡ ಪಾಟೀಲ್‌ ಹಲಗೇರಿ ಮಾತನಾಡಿ, ವಿಶ್ವಸಂಸ್ಥೆಯು ಗಾಂಧಿ ಜಯಂತಿಯನ್ನು ‘ಅಂತಾರಾಷ್ಟ್ರೀಯ ಅಹಿಂಸಾ ದಿನ’ ಎಂದು ಆಚರಿಸಿ ಮಹಾತ್ಮ ಗಾಂಧಿಯವರಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸುತ್ತಿರುವುದು ಇಡೀ ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಗಾಂಧಿ ಅವರ ಮಹತ್ವದ ದಂಡಿ ಉಪ್ಪಿನ ಸತ್ಯಾಗ್ರಹ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಲಾನಯನ ಆಂದೋಲನವಾಗಿ ಮಾರ್ಪಟ್ಟಿತು ಎಂದರೆ ತಪ್ಪಾಗಲಾರದು. ಗಾಂಧಿ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲದೇ ಅಸ್ಪೃಶ್ಯರಿಗೆ, ಕೆಳಜಾತಿಯವರಿಗೆ ನ್ಯಾಯಯುತ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಿದರು. ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡರು. ಅವರು ಅಸ್ಪೃಶ್ಯರನ್ನು ಹರಿಜನರು, ದೇವರ ಮಕ್ಕಳು ಎಂದು ಕರೆದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹೇಮಲತಾ ನಾಯಕ, ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ. ಚಂದ್ರಶೇಖರ, ಕೆಡಿಪಿ ಸದಸ್ಯ ಅಮರೇಶ ಕರಡಿ, ಸುನಿಲ್‌ ಹೆಸರೂರು, ರವಿಚಂದ್ರ ಮಾಲಿಪಾಟೀಲ…, ರಮೇಶ ಕವಲೂರ, ಅಮರೇಶ ಮುರುಲಿ, ನಾಗರತ್ನ ಪಾಟೀಲ, ಭಾರತಿ ಗುಡ್ಲಾನೂರ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಬಿ. ಗಿರೀಶಾನಂದ ಜ್ಞಾನಸುಂದರ, ಸಹ ಸಂಚಾಲಕ ಶ್ರೀ ನಿವಾಸ್‌ ಪೂಜಾರ ಹಾಗೂ ಅನೇಕರು ಉಪಸ್ಥಿತರಿದ್ದರು.

ಖಾದಿ ಖರೀದಿಸಿದ ಸಂಗಣ್ಣ:

ಕಾರ್ಯಕ್ರಮದ ನಂತರದಲ್ಲಿ ಖಾದಿ ಗ್ರಾಮೋದ್ಯೋಗವನ್ನು ಉತ್ತೇಜಿಸಬೇಕು ಮತ್ತು ಖಾದಿ ವಸ್ತುಗಳನ್ನು ಬಳಸುವಲ್ಲಿ ಜಾಗೃತಿ ಮೂಡಿಸಲು ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ತಾಲೂಕು ಕ್ರೀಡಾಂಗಣದ ಎದುರಿಗೆ ಇರುವ ಖಾದಿ ಭಂಡಾರಕ್ಕೆ ತೆರಳಿ ಸ್ವದೇಶಿ ಖಾದಿ ವಸ್ತುಗಳನ್ನು ಸ್ವತಃ ಖರೀದಿಸಿ ಪಕ್ಷದ ಕಾರ್ಯಕರ್ತರಿಗೆ ಖಾದಿ ಖರೀದಿಸಿ ಪ್ರೋತ್ಸಾಹಿಸಲು ಸೂಚಿಸಿದರು.

ಶಾಸಕರಿಂದ ಬಡವರಿಗೆ ಬಟ್ಟೆ ವಿತರಣೆ

ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ನಗರದಲ್ಲಿ ಸುಮಾರು 200 ಕಡು ಬಡವರಿಗೆ ಶಾಸಕ ಪರಣ್ಣ ಮುನವಳ್ಳಿ ಬಟ್ಟೆ ವಿತರಿಸಿದರು. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ. ಬಿಜೆಪಿ ನಗರ ಘಟಕ ಅಧ್ಯಕ್ಷ ಕಾಶೀನಾಥ್‌ ಚಿತ್ರಗಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಡಿಗರ್‌, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಸಂಗಯ್ಯಸ್ವಾಮಿ ಸಂಶಿಮಠ, ಶ್ರೀನಿವಾಸ ದೂಳ ಸೇರಿದಂತೆ ಇತರರು ಇದ್ದರು.
 

Latest Videos
Follow Us:
Download App:
  • android
  • ios