Asianet Suvarna News Asianet Suvarna News

Anjaneya Birth Place Dispute: ಹನುಮಂತ ಎರಡೆರಡು ಬಾರಿ ಜನಿಸಿದನೇ?: ಸಂಸದ ಕರಡಿ

*  ಮತ್ತೆ ಹನುಮನ ಜನ್ಮಸ್ಥಳ ವಿವಾದದ ಅಗತ್ಯವಿಲ್ಲ
*  ಹನುಮನ ಜನ್ಮಸ್ಥಳದ ಬಗ್ಗೆ ಅನೇಕ ದಾಖಲೆ ನೀಡಿರುವ ಇತಿಹಾಸಕಾರರು
*  ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ, ಇದರಲ್ಲಿ ಎರಡು ಮಾತಿಲ್ಲ 

Koppal BJP MP Sanganna Karadi Questioned Hanuman Was Born Two Times grg
Author
Bengaluru, First Published Feb 17, 2022, 6:45 AM IST

ಕೊಪ್ಪಳಫೆ.17):  ಹನುಮಂತ (Anjaneya) ಎರಡೆರಡು ಬಾರಿ ಜನಿಸಿದನೇ? ಕಿಷ್ಕಿಂಧೆಯ ಅಂಜನಾದ್ರಿಯಲ್ಲಿಯೇ ಹನುಮ ಜನಿಸಿರುವ(Birth Place) ಕುರಿತು ಸಾಕಷ್ಟು ದಾಖಲೆ ಇದ್ದರೂ ಟಿಟಿಡಿಯವರು(TTD) ಯಾಕೆ ವಿವಾದ ಮಾಡುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ(Sanganna Karadi) ಪ್ರಶ್ನಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ಈ ಕುರಿತು ಹೇಳಿಕೆ ನೀಡಿ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯನ್ನು(Anjanadri) ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡುವುದಾಗಿ ಘೋಷಿಸಿದ್ದಾರೆ. ಮತ್ತೆ ಹನುಮನ ಜನ್ಮಸ್ಥಳ ವಿವಾದದ ಅಗತ್ಯವಿಲ್ಲ. ಆದರೂ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಈ ಕುರಿತು ಸ್ಪಷ್ಟಪಡಿಸುವಂತೆ ಕೋರುತ್ತೇವೆ ಎಂದರು.

ಭುಗಿಲೆದ್ದಿದೆ ಆಂಜನೇಯ ಜನ್ಮ ಸ್ಥಳ ವಿವಾದ : ಯಾಕೆ ಕಿತ್ತಾಟ..?

ಜಿಲ್ಲೆಯ ಇತಿಹಾಸಕಾರರು(Historians) ಅನೇಕ ದಾಖಲೆ(Rocords) ನೀಡಿದ್ದಾರೆ. ಅದನ್ನು ಸರ್ಕಾರವೂ ಘೋಷಣೆ ಮಾಡಿದೆ. ಹೀಗಾಗಿ ಗಂಗಾವತಿ ತಾಲೂಕಿನ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ. ಇದರಲ್ಲಿ ಎರಡು ಮಾತಿಲ್ಲ ಎಂದರು.

ತಿರುಪತಿ ‘ಹನುಮ ಜನ್ಮಸ್ಥಳ’ ಅಭಿವೃದ್ಧಿಗೆ ಶಂಕು

ತಿರುಮಲ: ತಿರುಮಲ(Tirumala) ಬೆಟ್ಟದಲ್ಲಿರುವ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಾನ ಎಂಬ ಹೊಸ ವಾದ ಹುಟ್ಟುಹಾಕಿರುವ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ(Tirupati Tirumala Temple Board), ಇದೀಗ ಈ ಸ್ಥಳವನ್ನು ಆಂಜನೇಯನ ಜನ್ಮಸ್ಥಳವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಫೆ.15 ರಂದು ಭೂಮಿಪೂಜೆ ನಡೆಸಿದೆ.

ಕರ್ನಾಟಕದ(Karnataka) ಕೊಪ್ಪಳ(Koppal) ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟವು ಆಂಜನೇಯನ ಜನ್ಮಸ್ಥಾನವೆಂದು ಶತಮಾನಗಳಿಂದ ನಂಬಿಕೊಂಡು ಬರಲಾಗಿದೆ. ಆದರೆ ಇದೀಗ ಟಿಟಿಡಿ ಹೊಸ ವಾದ ಮುಂದಿಟ್ಟು ತನ್ನ ತಿರುಪತಿ ಸಮೀಪದ ಅಂಜನಾದ್ರಿ ಬೆಟ್ಟವನ್ನು ಹಾಗೂ ಬಾಲ ಹನುಮಾನ್‌ ಮಂದಿರವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ.

ತಿರುಮಲ ಬೆಟ್ಟದಲ್ಲಿನ ಆಕಾಶಗಂಗಾ ಪ್ರದೇಶದಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ, ವಿಶಾಖ ಶ್ರೀ ಶಾರದ ಪೀಠದ ಸ್ವರೂಪಾನಂದ ಸರಸ್ವತಿ, ಶ್ರೀತುಳಸಿ ಸೇವಾನ್ಯಾಸ, ಚಿತ್ರಕೂಟದ ಶ್ರೀ ರಾಮಭದ್ರಾಚಾರ್ಯ, ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವೀಶಗಿರಿಜಾಗಿರಿ ಮೊದಲಾದವರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಸ್ವರೂಪಾನಂದ ಸರಸ್ವತಿ, ‘ಆಂಧ್ರಪ್ರದೇಶವು ವೇದಗಳ ಉಗಮ ಸ್ಥಾನವಾಗಿದ್ದು, ಹನುಮಂತನು ಈ ಅಂಜನಾದ್ರಿ ಬೆಟ್ಟದಲ್ಲೇ ಜನಿಸಿದ್ದಾನೆ. ಇದನ್ನು ಹಲವು ವೈದಿಕ ಮತ್ತು ವೈಜ್ಞಾನಿಕ ತಜ್ಞರು ಸಂಶೋಧನೆ ನಡೆಸಿ ಖಚಿತಪಡಿಸಿದ್ದಾರೆ’ ಎಂದು ಹೇಳಿದರು.

ಜಗದ್ಗುರು ರಾಮಭದ್ರಾಚಾರ್ಯರು ಮಾತನಾಡಿ, ‘ಕರ್ನಾಟಕದಲ್ಲಿ ಹನುಮಂತ ಹುಟ್ಟಿದ್ದಾನೆ ಎಂಬ ವಾದಗಳಿವೆ. ಆದರೆ ವೇದ-ಪುರಾಣಗಳನ್ನು ಆಳಕ್ಕಿಳಿದು ಪರಿಶೀಲಿಸಿದಾಗ ತಿರುಪತಿಯ ಅಂಜನಾದ್ರಿ ಬೆಟ್ಟವೇ ಆತನ ಜನ್ಮಸ್ಥಳ ಎಂಬುದನ್ನು ಸಾಬೀತುಪಡಿಸುತ್ತದೆ. ಮುಂದೆ ಆತ ಕರ್ನಾಟಕದ ಕಿಷ್ಕಿಂದೆ ಸೇರಿ ವಿವಿಧ ಭಾಗಗಳಲ್ಲಿ ತನ್ನ ಜೀವನ ನಡೆಸಿದ್ದಾನೆ’ ಎಂದರು.

ಅಯೋಧ್ಯೆಯ ಗೋವಿಂದಗಿರಿ ಮಹಾರಾಜರು ಮಾತನಾಡಿ, ‘ಜನ್ಮಸ್ಥಳದ ಬಗ್ಗೆ ಭಿನ್ನಾಭಿಪ್ರಾಯ ಮರೆತು ದೇಶಕ್ಕೆ ಒಳ್ಳೆಯದಾಗುವತ್ತ ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.

ಅಂಜನಾದ್ರಿಯೇ ಹನುಮ ಜನ್ಮಸ್ಥಳ : ಟಿಟಿಡಿಗೆ ತಿರುಗೇಟು

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಜವಾಹರರೆಡ್ಡಿ ಮಾತನಾಡಿ, ‘ತಿರುಪತಿಯೇ ಹನುಮ ಜನ್ಮಸ್ಥಳ ಎಂದು ಸಾಬೀತು ಮಾಡುವ ಪೌರಾಣಿಕ ಹಾಗೂ ಐತಿಹಾಸಿಕ ಸಂಶೋಧನೆ ಸಂಶೋಧನೆ ನಡೆಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ನೀಲನಕ್ಷೆ ಬಿಡುಗಡೆ:

ಈ ನಡುವೆ, ಅಂಜನಾದ್ರಿ ಬೆಟ್ಟದಲ್ಲಿ ಭವ್ಯ ದೇಗುಲ ನಿರ್ಮಾಣ ಹಾಗೂ ಇತರ ಅಭಿವೃದ್ಧಿ ಚಟುವಟಿಕೆ ನಡೆಸುವ ನೀಲನಕ್ಷೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
 

Follow Us:
Download App:
  • android
  • ios