Asianet Suvarna News Asianet Suvarna News

Konkan Railway: ಹಳಿ ಮೇಲೆ 500 ಮೀಟರ್‌ ಓಡಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ದುರಂತ ತಪ್ಪಿಸಿದ!

ಕೊಂಕಣ ರೈಲ್ವೆಯಲ್ಲಿ ಹಳಿ ತಪ್ಪುವುದರಿಂದ ಸಂಭವಿಸಬಹುದಾಗಿದ್ದ ಭೀಕರ ಅಪಘಾತವನ್ನು ಮಾದೇವ ನಾಯ್ಕ ಎಂಬ ಸಿಬ್ಬಂದಿ ತಮ್ಮ ಸಮಯಪ್ರಜ್ಞೆಯಿಂದ ತಪ್ಪಿಸಿದ್ದಾರೆ. ಕೇವಲ 5 ನಿಮಿಷಗಳಲ್ಲಿ 500 ಮೀಟರ್ ಓಡಿ ರೈಲನ್ನು ನಿಲ್ಲಿಸುವ ಮೂಲಕ ಸಾವಿರಾರು ಪ್ರಯಾಣಿಕರ ಜೀವ ಉಳಿಸಿದ್ದಾರೆ.

Konkan Railway Section Man Ran 500 meters on the track To avoid Rajdhani Express disaster san
Author
First Published Sep 7, 2024, 9:10 AM IST | Last Updated Sep 7, 2024, 9:10 AM IST

ಭಟ್ಕಳ (ಸೆ.7): ಕೊಂಕಣ ರೈಲ್ವೆ ವಿಭಾಗದಲ್ಲಿ ಹಳಿಗಳ ನಿರ್ವಹಣೆ ನೋಡಿಕೊಳ್ಳುವ ಮಾದೇವ ನಾಯ್ಕ ಅವರು ತಮ್ಮ ಸಮಯ ಪ್ರಜ್ಞೆಯಿಂದ ಹಳಿ ತಪ್ಪಿ ಅಪಾಯಕ್ಕೆ ಸಿಲುಕಲಿದ್ದ ರೈಲನ್ನು ನಿಲ್ಲಿಸುವುದರ ಮೂಲಕ ಸಾವಿರಾರು ಜನರ ಜೀವ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 5 ನಿಮಿಷದಲ್ಲಿ 500 ಮೀಟರ್‌ ಓಡಿದ ಅವರು ಅಪಾಯದ ಸ್ಥಿತಿ ಎದುರಾಗುವ ಪೂರ್ವದಲ್ಲೇ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿ ಮೆಚ್ಚುಗೆ ಪಡೆದಿದ್ದಾರೆ. ಸೆ. 4 ರಂದು ಕೊಂಕಣ ರೈಲ್ವೆ ಮಾರ್ಗದಲ್ಲಿ ಕುಮಟಾ-ಹೊನ್ನಾವರ ನಡುವೆ ಹಳಿಗಳ ವೆಲ್ಡಿಂಗ್‌ ತಪ್ಪಿಹೋಗಿತ್ತು. ಇದರಿಂದ ಅತಿವೇಗವಾಗಿ ಪ್ರಯಾಣ ಮಾಡುವ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಯ ಹಳಿ ತಪ್ಪುವ ಸಾಧ್ಯತೆಗಳು ಹೆಚ್ಚಿದ್ದವು.

ಬುಧವಾರ ನಸುಕಿನ 4.51ಕ್ಕೆ ಬ್ಯಾಟರಿ ಹಿಡಿದು ರೈಲ್ವೆ ಮಾರ್ಗ ಪರಿಶೀಲನೆ ಮಾಡುತ್ತಿದ್ದ ಮಾದೇವ ನಾಯ್ಕ್, ಇದನ್ನು ಗಮನಿಸಿ ತಿರುವನಂತಪುರದಿಂದ ನವದೆಹಲಿ ಕಡೆಗೆ ಹೋಗುವ ರೈಲನ್ನು ಹೊನ್ನಾವರದಲ್ಲಿಯೇ ನಿಲ್ಲಿಸಲು ಸ್ಟೇಶನ್‌ ಮಾಸ್ಟರ್‌ಗೆ ಫೋನ್‌ ಮಾಡಿದ್ದರು.  ಆದರೆ, ಬೆಳಗ್ಗೆ 4.59ಕ್ಕೆ ರೈಲು ಹೊನ್ನಾವರದಿಂದ ಮುಂದೆ ಸಾಗಿ ಹೋಗಿತ್ತು. ಸ್ಟೇಷನ್‌ ಮಾಸ್ಟರ್‌ ಲೋಕೋಪೈಲಟ್‌ಗೆ ಫೋನ್‌ ಮಾಡಿದ್ದರೂ ಸರಿಯಾದ ಸಂಪರ್ಕ ಸಾಧ್ಯವಾಗಿರಲಿಲ್ಲ. ಬಳಿಕ ಮಾದೇವ ನಾಯ್ಕ್‌, ಕೈಯಲ್ಲಿ ಕೆಂಪು ಬಟ್ಟೆ ಹಿಡಿದು ರೈಲ್ವೆ ಹಳಿಗಳ ಮೇಲೆ ಹೊನ್ನಾವರದ ಕಡೆ ಓಡಲು ಆರಂಭಿಸಿ ಅಪಾಯದ ಮುನ್ಸೂಚನೆ ನೀಡಿ ಮಾರ್ಗದ ನಡುವೆಯೇ ಕೊನೆಗೂ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

ಕಾರವಾರದಲ್ಲಿ ಅರೆಬೆಂದ ಸ್ಥಿತಿಯಲ್ಲಿ 35 ವರ್ಷದ ಮಹಿಳೆ ಶವ ಪತ್ತೆ!

ಮಾನ್ಸೂನ್‌ ಎಫೆಕ್ಟ್‌, ಕೊಂಕಣ್‌ ಲೈನ್‌ನಲ್ಲಿ ಪ್ರಯಾಣಿಸಲಿರುವ ರೈಲುಗಳ ವೇಳಾಪಟ್ಟಿ ಬದಲು!

Latest Videos
Follow Us:
Download App:
  • android
  • ios