Kolara Dalith Boy Case; ದೇವರನ್ನು ಮುಟ್ಟಿದ್ದಕ್ಕೆ ದಲಿತ ಕುಟುಂಬದ ಬಹಿಷ್ಕಾರ, ಸದನ ಸಮಿತಿ ಭೇಟಿ
ಭೂತಮ್ಮ ದೇವಿಯ ಉತ್ಸವ ಮೂರ್ತಿಯ ಗುಜ್ಜುಗೋಲು ಮುಟ್ಟಿದ ಅನ್ನೋ ಕಾರಣಕ್ಕೆ ದಲಿತ ಕುಟುಂಬವೊಂದರ ಮೇಲೆ ದೌರ್ಜನ್ಯ ಎಸಗಿ 60 ಸಾವಿರ ರೂಪಾಯಿ ದಂಡ ಹಾಕಿ ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಸೆ.23): ಭೂತಮ್ಮ ದೇವಿಯ ಉತ್ಸವ ಮೂರ್ತಿಯ ಗುಜ್ಜುಗೋಲು ಮುಟ್ಟಿದ ಅನ್ನೋ ಕಾರಣಕ್ಕೆ ದಲಿತ ಕುಟುಂಬವೊಂದರ ಮೇಲೆ ದೌರ್ಜನ್ಯ ಎಸಗಿ 60 ಸಾವಿರ ರೂಪಾಯಿ ದಂಡ ಹಾಕಿ ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡಾ ವಿಧಾನಮಂಡಲ ಸದನ ಸಮಿತಿ ಸದಸ್ಯರು ಗ್ರಾಮಕ್ಕೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಗ್ರಾಮದಲ್ಲಿ ಸೇರಿರುವ ಜನರು ಹಾಗೂ ಅಧಿಕಾರಿಗಳ ತಂಡ, ಗ್ರಾಮದಲ್ಲಿ ಬಂದಿಳಿದ ಕರ್ನಾಟಕ ವಿಧಾನಮಂಡಲದ ಸದಸನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ದೌರ್ಜನ್ಯಕ್ಕೊಳಗಾದ ಕುಟುಂಬದ ಜೊತೆಗೆ ಸಾಂತ್ವನ ಹೇಳಿ, ದೈರ್ಯ ಹೇಳುತ್ತಿರುವ ಸಮಿತಿಯ ಸದಸ್ಯರು ಈ ಎಲ್ಲಾ ದೃಷ್ಯಗಳು ಕಂಡು ಬಂದಿದ್ದು ಅದೇ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ. ದಲಿತ ಕುಟುಂಬವೊಂದು ಜಾತಿ ಅನ್ನೋ ಅಸ್ಪೃಷ್ಯತೆಯ ಮೌಡ್ಯದಲ್ಲಿ ಬಿದ್ದು ಗ್ರಾಮದ ಕೆಲವರು, ದಲಿತ ಜನಾಂಗಕ್ಕೆ ಸೇರಿದ ಬಾಲಕನೊಬ್ಬ ಭೂತಮ್ಮ ದೇವಿಯ ಉತ್ಸವ ಮೂರ್ತಿಯ ಗುಜ್ಜುಕೋಲು ಮುಟ್ಟಿದ ಅನ್ನೋ ಕಾರಣಕ್ಕೆ ಗ್ರಾಮದ ಮುಖಂಡರು ದಲಿತ ಕುಟುಂಬಕ್ಕೆ 60 ಸಾವಿರ ದಂಡು ವಿಧಿಸಿ ದಂಡ ಕೊಡದಿದ್ದರೆ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ರು ಈಸಂಬಂದ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಇಂಥ ಅಸ್ಪೃಷ್ಯತೆ ಮೆರೆದ ಗ್ರಾಮದ 8 ಜನರನ್ನು ಈಗಾಗಲೇ ಬಂದಿಸಲಾಗಿದೆ.
ಇನ್ನು ವಿಷಯ ತಿಳಿದು ನಿನ್ನೆ ಶಾಸಕರಾದ ಕೆ.ವೈ,ನಂಜೇಗೌಡ, ಎಸ್.ಎನ್,ನಾರಾಯಣ ಸ್ವಾಮಿ ಮತ್ತು ಸಂಸದ ಮುನಿಸ್ವಾಮಿ ಹಾಗೂ ಜಿಲ್ಲೆಯ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಸಾಂತ್ವನ ಹೇಳಿ ದೈರ್ಯ ತುಂಬಿದ್ದರು.ಇಂದು ಕೂಡಾ ಗ್ರಾಮಕ್ಕೆ ಕರ್ನಾಟಕ ವಿಧಾನಮಂಡಲ ಅನುಸೂಚಿತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಸಮಿತಿಯ ಸದಸ್ಯರಾದ ಹೆಚ್.ಕೆ.ಕುಮಾರಸ್ವಾಮಿ, ಮಹೇಶ್, ಲಿಂಗಣ್ಣ, ಬುಡನ್ಸಿದ್ದಿ ಯವರು ಬೇಟಿ ನೀಡಿದ್ದರು. ಅಲ್ಲದೆ ಗ್ರಾಮದಲ್ಲಿ ದೇವಾಲಯ ಸೇರಿದಂತೆ ದಲಿತ ಕುಟುಂಬ ಹಾಗೂ ಅವರ ಮನೆಗೆ ಬೇಟಿ ನೀಡಿ ಖುದ್ದು ದಲಿತ ಕುಟುಂಬದಿಂದ ಮಾಹಿತಿ ಪಡೆದರು. ಅಲ್ಲದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ರು.
ಇನ್ನು ಗ್ರಾಮದಲ್ಲಿ ಭೇಟಿ ನೀಡಿದ ಸದನ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿ ನಡೆದಿರುವ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ಇಂಥ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಜೊತೆಗೆ ಅವರ ಮನಪರಿವರ್ತನೆಯಾಗ ಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಜನರಿಗೆ ಜಾತಿ ಅನ್ನೋ ಹೆಸರಿನಲ್ಲಿ ಈಕಾಲದಲ್ಲೂ ದೌರ್ಜನ್ಯ ನಡೆಯುತ್ತಿದೆ ಅಂದರೆ ನಿಜಕ್ಕೂ ಬೇಸರದ ವಿಷಯ ಹಾಗಾಗಿ ಈ ಘಟನೆ ಮರು ಕಳಿಸದಂತೆ ನೋಡಿಕೊಳ್ಳಬೇಕು ಎಂದು ಶಾಸಕರಾದ ಮಹೇಶ್ ಹಾಗೂ ಕುಮಾರಸ್ವಾಮಿ ಹೇಳಿದ್ರು.
ಉಡುಪಿ: ದಲಿತ ಬಾಲಕನಿಗೆ ಬಹಿಷ್ಕಾರ: ಪೇಜಾವರ ಶ್ರೀ ಕಳವಳ
ಇನ್ನು ಸರ್ಕಾರದಿಂದ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ನಿವೇಶನ, ಉದ್ಯೋಗ, ಅಲ್ಲದೆ ಆರ್ಥಿಕ ನೆರವನ್ನು ಕೂಡಾ ನೀಡಲಾಗಿದೆ ಎಂದರು.ಗ್ರಾಮಕ್ಕೆ ಬೇಟಿ ನೀಡಿದ ನಂತರ ಸದನ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮಾಲೂರು ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ದೇವರ ಕೋಲು ಮುಟ್ಟಿದ್ದಕ್ಕೆ ದಲಿತ ಬಾಲಕಗೆ ಹಲ್ಲೆ, ದಂಡ
ಒಟ್ಟಾರೆ 21ನೇ ಶತಮಾನದಲ್ಲೂ ಇಂಥ ಜಾತಿ ವಿಚಾರವಾಗಿ ದೌರ್ಜನ್ಯ, ಬಹಿಷ್ಕಾರ ಅನ್ನೋದೆಲ್ಲಾ ನಡೆಯುತ್ತಿದೆ ಅನ್ನೋದೆ ದುರಂತ, ಇನ್ನಾದ್ರು ಇಂಥ ಘಟನೆಗಳು ಮರುಕಳಿಸದಂತೆ ನಡೆದುಕೊಳ್ಳಬೇಕಿದೆ.