ಕೋಲಾರ(ಡಿ.07): ತಾಲೂಕಿನ ವಕ್ಕಲೇರಿ ಹೋಬಳಿ ಬೆಟ್ಟಬೆಣಜೇನಹಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕಶಾಲೆ ಹಾಗೂ ಕನ್ನಡಕಿರಿಯ ಪ್ರಾಥಮಿಕ ಶಾಲೆ ಶಿಥಿಲವಾಗಿದ್ದು,ಶಾಲಾ ಕಟ್ಟಡ ಕುಸಿಯುವ ಭೀತಿಯಲ್ಲಿ ಶಾಲಾ ಮಕ್ಕಳ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಚಿಂತೆಪಡುವಂತಾಗಿದೆ.

ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಶಿಥಿಲವಾದ ಶಾಲಾ ಕಟ್ಟಡವು ವಿದ್ಯಾರ್ಥಿಗಳ ಜೀವಕ್ಕೆ ಮಾತ್ರವಲ್ಲದೆ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳಿಗೂ ಅಪಾಯವನ್ನುಂಟುಮಡುವ ಸ್ಥಿತಿಗೆ ತಲುಪಿದೆ.

ಬೆಳೆದ ಬೆಳೆ ವರುಣನ ಪಾಲು: ಉಳಿದದ್ದು ಪ್ರಾಣಿಗಳ ಪಾಲು

ಶಿಥಿಲವಾದ ಶಾಲಾ ಕಟ್ಟಡ, ಕಾಪೌಂಡ್‌, ಶೌಚಾಲಯ, ಗೋಡೆ ಬಿರುಕು, ಉದುರಿ ಬೀಳುತ್ತಿರುವ ಕಾಂಕ್ರೀಟ್‌ಚಾವಣಿ, ಅಡುಗೆ ಕೋಣೆ. ಇಂತಹ ಶಾಲೆಗೆ ಶುಕ್ರವಾರ ಶಾಲೆಗೆ ಭೇಟಿ ನೀಡಿದ ವಕ್ಕಲೇರಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಅರುಣ್‌ ಪ್ರಸಾದ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೊಸ ಕಟ್ಟಡ ನಿರ್ಮಿಸುವ ಭರವಸೆ

ಶಾಲೆ ಕಟ್ಟಡ ಶಿಥಿಲಗೊಂಡಿದೆ ಇಂತಹ ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರು ಇರುವುದು ಹೇಗೆ ಎಂದು ಪ್ರಶ್ನೆ ಮಾಡಿದರು. ಕೂಟಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆಗೆ ಮಾತನಾಡಿ ನೂತನ ಕಟ್ಟಡವನ್ನು ನಿರ್ಮಿಸುವ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಅವರು ಶಿಕ್ಷಣ ಇಲಾಖೆ ವಿರುದ್ಧ ಗರಂ ಆದರೂ ಕಟ್ಟಡ ಇಷ್ಟೊಂದು ಶಿಥಿಲಾವಸ್ಥೆಯಲ್ಲಿ ಇದ್ದರೂ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಕೊಡಗಿನಲ್ಲಿ ಚುಮು ಚುಮು ಚಳಿ, 10 ಗಂಟೆಯಾದ್ರೂ ಬಿಸಿಲೇ ಬರಲ್ಲ..!

ಸರ್ಕಾರಿ ಶಾಲೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು, ಸರ್ಕಾರಿ ಶಾಲೆಗಳು ಉಳಿಯಬೇಕು ಮತ್ತು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿಮಕ್ಕಳು ದಾಖಲಾಗಬೇಕು, ಇದಕ್ಕೆ ಬೇಕಾದ ಮೂಲಭೂತ ಸೌಕರ್ಯವನ್ನುಜಿಲ್ಲಾ ಪಂಚಾಯಿತಿಯಿಂದ ನೀಡುವುದಾಗಿ ತಿಳಿಸಿದ್ದಾರೆ.

ಶಾಲೆ ತಾತ್ಕಾಲಿಕ ಸ್ಥಳಾಂತರ

ಸರ್ಕಾರಿಉರ್ದು ಶಾಲೆಯಲ್ಲಿ 15 ಮಕ್ಕಳು, ಕನ್ನಡ ಶಾಲೆಯಲ್ಲಿ 12 ಮಕ್ಕಳು ಓದುತ್ತಿದ್ದು ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಆತಂಕ ಪಡಬಾರದು. ನೂತನ ಕಟ್ಟಡ ನಿರ್ಮಿಸುವ ವರೆಗೂ ಬೇರೆಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸುವಂತೆ ಶಿಕ್ಷಕರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಿಕೊಡುವಂತೆ ಬೆಟ್ಟಬೆಣಜೇನಹಳ್ಳಿಗ್ರಾಮಸ್ಥರು ಹಾಗೂ ಶಾಲೆಯ ಶಿಕ್ಷಕರು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಅರುಣ್‌ ಪ್ರಸಾದ್‌ರವರಿಗೆ ಮನವಿ ಸಲ್ಲಿಸಿದ್ದಾರೆ.

ಆರೋಗ್ಯ ಕೇಂದ್ರ ಬಂದ್‌: ತಮಿಳುನಾಡಿಗೆ ಅಲೆಯುತ್ತಿದ್ದಾರೆ ರೋಗಿಗಳು..!

ಬೆಟ್ಟಬೆಣಜೇನಹಳ್ಳಿ ಗ್ರಾಮದ ಮುಖಂಡರಾದಜಹೀರ್‌,ಖದೀರ್‌, ಹನುಮಂತಪ್ಪ, ಗೋಪಾಲಣ್ಣ, ಸರ್ಕಾರಿಉರ್ದು ಹಿರಿಯ ಪ್ರಾಥಮಿಕ ಶಾಲೆಯಮುಖ್ಯ ಶಿಕ್ಷಕಿ ನಯುಬ್‌ವುನೀಸಾ, ಕನ್ನಡಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸ್ವರ್ಣಲತ, ಸಹಶಿಕ್ಷಕರಾದ ನಂಜುಂಡಪ್ಪ, ನಾರಾಯಣಸ್ವಾಮಿ, ನಾಜಿಃಮಾ ಮತ್ತಿತರಿದ್ದರು.