ರಾಜ್ಯದ ಮೊದಲ ಕಿಸಾನ್‌ ರೈಲಿಗೆ ಚಾಲನೆ: 250 ಟನ್‌ ಮಾವು ಹೊತ್ತ ರೈಲು ದಿಲ್ಲಿಗೆ

* ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡನೆತ್ತ ರೈಲು ನಿಲ್ದಾಣದಲ್ಲಿ ಚಾಲನೆ
* ರಾಜ್ಯದಲ್ಲಿಯೇ ಮೊದಲ ಬಾರಿಗೆ ಆರಂಭಿಸಿರುವ ಕಿಸಾನ್‌ ಸ್ಪೆಷಲ್‌ ಪಾರ್ಸೆಲ್‌ ರೈಲು 
* ಕೃಷಿ ಉತ್ಪನ್ನ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಲು ರೈತರಿಗೆ ಅನುಕೂಲ
 

Kolar MP Muniswamy S Flagged off Kisan Special Train in Chintamani grg

ಚಿಕ್ಕಬಳ್ಳಾಪುರ(ಜೂ.20): ಕೇಂದ್ರ ಸರ್ಕಾರದ ಕೃಷಿ ಹಾಗೂ ರೈಲ್ವೆ ಇಲಾಖೆ ಜಂಟಿ ಸಹಯೋಗದೊಂದಿಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಆರಂಭಿಸಿರುವ ಕಿಸಾನ್‌ ಸ್ಪೆಷಲ್‌ ಪಾರ್ಸೆಲ್‌ ರೈಲು ಆರಂಭಕ್ಕೆ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ತಾಲೂಕಿನ ದೊಡ್ಡನೆತ್ತ ರೈಲು ನಿಲ್ದಾಣದಲ್ಲಿ ಶನಿವಾರ ಚಾಲನೆ ನೀಡಲಾಯಿತು. 

ಮೊದಲ ದಿನ ದೊಡ್ಡನತ್ತ ರೈಲ್ವೆ ನಿಲ್ದಾಣದ ಮೂಲಕ ದೆಹಲಿಯ ಆದರ್ಶ ನಗರದ ರೈಲು ನಿಲ್ದಾಣಕ್ಕೆ ಬರೋಬ್ಬರಿ 250 ಟನ್‌ ಮಾವು ಹೊತ್ತು ಹೊರಟ ಕಿಸಾನ್‌ ರೈಲಿಗೆ ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹಸಿರು ನಿಶಾನೆ ತೋರಿಸಿದರು.

ತಮ್ಮ ಕ್ಷೇತ್ರದಲ್ಲಿ ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸುಧಾಕರ್

ಈ ವೇಳೆ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಜೊತೆಗೆ ಉತ್ತಮ ಬೆಲೆ ಸಿಗದೇ ಸಾಕಷ್ಟು ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದಾರೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯ ದ್ವಿಗುಣಗೊಳಿಬೇಕು ಎಂಬ ಉದ್ದೇಶದಿಂದ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಲು ರೈತರಿಗೆ ಅನುಕೂಲ ಕಲ್ಪಿಸಲು ಈ ವಿಶೇಷ ಕಿಸಾನ್‌ ರೈಲು ಸಂಚಾರವನ್ನು ಆರಂಭಿಸಲಾಗಿದೆ ಎಂದರು.
 

Latest Videos
Follow Us:
Download App:
  • android
  • ios