ಕೋಲಾರ (ಸೆ.14): ಪಾಲಾರ್‌ ನದಿ ಮೂಲದ ದೊಡ್ಡಕೆರೆಯಾದ ಸೋಮಾಂಬು ಅಗ್ರಹಾರ ಕೆರೆ 16 ವರ್ಷಗಳ ಭರ್ತಿಯಾಗಿದ್ದು, ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. 

ಕೆ.ಸಿ.ವ್ಯಾಲಿ ಯೋಜನೆ ಮೂಲಕ ಈ ಕೆರೆ ಭರ್ತಿಯಾಗಿದ್ದು, ಸಂಸದ ಸಂಸದ ಮುನಿಯಪ್ಪ ಎಸ್‌.ಮುನಿಸ್ವಾಮಿ, ಶಾಸಕ ರಮೇಶ್‌ ಕುಮಾರ್‌ ಭಾನುವಾರ ಬಾಗಿನ ಅರ್ಪಿಸಿದರು. 

ಕೆ.ಸಿ.ವ್ಯಾಲಿ ಮೊದಲ ಹಂತದಲ್ಲಿ 126 ಹಾಗೂ 2ನೇ ಹಂತದಲ್ಲಿ 225 ಕೆರೆಗಳನ್ನು ತುಂಬಿಸುವ ಉದ್ದೇಶವಿದ್ದು, ಈಗಾಗಲೇ ಜಿಲ್ಲೆಯ 70 ಕೆರೆಗಳು ಭರ್ತಿಯಾಗಿವೆ. ಈ ಕೆರೆ ಸುತ್ತಮುತ್ತ ಅರಣ್ಯ, ತೋಟಗಾರಿಕಾ ಇಲಾಖೆಗಳ ಸಹಕಾರದೊಂದಿಗೆ ಉದ್ಯಾನವನ ನಿರ್ಮಿಸಲು ಉದ್ದೇಶಿಸಲಾಗಿದೆ. 

ರಾಜ್ಯದ 130 ತಾಲೂಕು ನೆರೆಪೀಡಿತ ಎಂದು ಘೋಷಣೆ ...

ಮೀನುಗಾರಿಕೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಇದರಿಂದ ಕೆರೆ ಭರ್ತಿಯಾಗಿದೆ.