ಶೋಕಿಗಾಗಿ ಸಾಲ ಮಾಡಿ, ಸಾಲಕ್ಕಾಗಿ 6 ತಿಂಗಳ ಗಂಡು ಮಗುವನ್ನೇ ಮಾರಿದ ಅಪ್ಪ
ಮುಕ್ಕೋಟಿ ದೇವತೆಗಳಿಗೆ ಹರಕೆ ಕಟ್ಟಿದ ತಾಯಿ ಗಂಡು ಮಗುವಿಗೆ ಜನ್ಮ ನೀಡಿದರೆ, 3 ತಿಂಗಳಲ್ಲಿ ಮಗುವಿನ ಅಪ್ಪ ಶೋಕಿಗಾಗಿ ಮಗುವನ್ನೇ ಮಾರಾಟ ಮಾಡಿದ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ (ಮೇ 14): ಮದುವೆಯಾಗಿ ಹಲವು ವರ್ಷಗಳು ಮಕ್ಕಳಾಗದೇ ಕೊರಗುತ್ತಿದ್ದ ತಾಯಿ, ಕಂಡ ಕಂಡ ದೇವರಿಗೆಲ್ಲಾ ಹರಕೆ ಹೊತ್ತು ವೈದ್ಯರ ಬಳಿ ಚಿಕಿತ್ಸೆ ಪಡೆದು ಮಗುವನ್ನು ಮಾಡಿಕೊಂಡಿದ್ದಾಳೆ. ಆದರೆ, ಶೋಕಿಗಾಗಿ ಸಾಲ ಮಾಡಿಕೊಂಡಿದ್ದ ಗಂಡ ಸಾಲವನ್ನು ತೀರಿಸಲಾಗದೇ ತನ್ನ ಸ್ವಂತ ಮಗುವನ್ನೇ ಮಾರಾಟ ಮಾಡಿದ ದುರ್ಘಟನೆ ಕೋಲಾರದಲ್ಲಿ ನಡೆದಿದೆ. 9 ತಿಂಗಳು ಹೊತ್ತು ಹೆತ್ತಿರುವ ಮಗುವನ್ನು ನಿಷ್ಕರುಣಿ ತಂದೆಯೇ ಮಾರಾಟ ಮಾಡಿದ್ದರಿಂದ, ಕರುಳ ಕುಡಿ ಬಿಟ್ಟಿರಲಾಗದ ತಾಯಿಯ ಸ್ಥಿತಿ ಕರುಣಾಜನಕವಾಗಿದೆ.
ಹೌದು, ಕೋಲಾರ ಜಿಲ್ಲೆಯ ಬಂಗಾರಪೇಟೆಯ ಕೆರೆಕೋಡಿ ಬಡಾವಣೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಬಂಗಾರಪೇಟೆ ನಗರ ನಿವಾಸಿಗಳಾದ ಮುನಿರಾಜು ಹಾಗು ಪವಿತ್ರ ದಂಪತಿಗಳ ಮೂರು ತಿಂಗಳ ಮಗುವನ್ನು ಮಾರಾಟ ಮಾಡಲಾಗಿದೆ. ಗಂಡ ಮುನಿರಾಜು ಮಗು ಮಾರಾಟ ಮಾಡಿದರೆ, ಮಗುವನ್ನು ಮರಳಿ ಕೊಡಿಸುವಂತೆ ತಾಯಿ ಪವಿತ್ರಾ ಬಂಗಾರಪೇಟೆ ಪೊಲೀಸ್ ಠಾಣೆಗೆ ತನ್ನ ಗಂಡನ ವಿರುದ್ಧವೇ ದೂರು ದಾಖಲಿಸಿದ್ದಾಳೆ. ಇನ್ನು ಮಗುವನ್ನು ಕಳೆದುಕೊಂದ ಸಂತ್ರಸ್ತ ಮಹಿಳೆಯ ನೆರವಿಗೆ ಮಹಿಳಾ ಆಯೋಗದ ಸದಸ್ಯರು ಮುಂದೆ ಬಂದಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಸಿಬ್ಬಂದಿಯ ಖುಲ್ಲಂ ಖುಲ್ಲಾ ಕಿಸ್ಸಿಂಗ್; ದಾಖಲಾಯ್ತು ಕೇಸ್
ಮದುವೆಯಾಗಿದ್ದರೂ ಹಲವು ವರ್ಷಗಳು ಮಕ್ಕಳಾಗದೇ ಬಂಜೆ ಎಂಬ ಸಮಾಜದ ಅಪವಾದ ಹೊತ್ತಿದ್ದ ಪವಿತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ತವರು ಮನೆಯಲ್ಲಿ 3 ತಿಂಗಳ ಕಾಲ ಚೆನ್ನಾಗಿಯೇ ನೋಡಿಕೊಂಡಿದ್ದಳು. ನಂತರ ಗಂಡ ತನ್ನನ್ನು ಕರೆದುಕೊಂಡು ಬಂದಿದ್ದನು. ಒಂದು ದಿನ ನನಗೆ ನಾರೋಗ್ಯವಿದ್ದ ಕಾರಣ ಮಗುವನ್ನು ಎತ್ತಿಕೊಂಡು ಹೋಗಿ ಪಕ್ಕದ ಮನೆಯ ನಿವಾಸಿ ವಲ್ಲಿ ಎಂಬುವವರಿಗೆ ಕೊಟ್ಟಿದ್ದನು. ನಿನಗೆ ಹುಷಾರಾಗುವವರೆಗೆ ಮಗುವನ್ನು ಅವರೇ ನೋಡಿಕೊಳ್ಳುತ್ತಾರೆ ಎಂದು ಗಂಡ ಹೇಳಿದ್ದನು.
ನನಗೆ ಅನಾರೋಗ್ಯಕ್ಕೆ ಚಿಕಿತ್ಸೆಯನ್ನೂ ಕೊಡಿಸದೇ ಬಾಣಂತಿ ಎಂಬುದನ್ನು ನೋಡದೇ ಹಿಂಸಿಸುತ್ತಿದ್ದನು. ಜೊತೆಗೆ, ನನಗೆ ಮಗುವನ್ನು ಕೊಡು ಎಂದು ಕೇಳಲು ಶುರು ಮಾಡಿದಾಗ ಗೃಹ ಬಂಧನ ಮಾಡಿದ್ದಾನೆ. ಕೆಲವು ದಿನಗಳ ನಂತರ ನೆರೆಹೊರೆಯವರ ಸಹಾಯ ಪಡೆದು ಮನೆಯಿಂದ ಹೊರಗೆ ಬಂದು ಮಗು ಕೊಡು ಎಂದು ಪಕ್ಕದ ಮನೆಯ ವಲ್ಲಿಯ ಬಳಿ ಕೇಳಿದ್ದಾಳೆ. ಆದರೆ, ಇದಕ್ಕೆ ಉತ್ತರಿಸದೇ ನಿನ್ನ ಗಂಡನನ್ನು ಕೇಳು ಎಂದು ದೌರ್ಜನ್ಯ ಮಾಡಿದ್ದಾಳೆ. ಎಷ್ಟೇ ಬೇಡಿಕೊಂಡರೂ ಮಗುವನ್ನು ಕೊಡದೇ ಸತಾಯಿಸಿದ್ದಾಳೆ. ಕೊನೆಗೆ ನೆರೆಹೊರೆಯವರು ಬಂದು ನಿನ್ನ ಮಗುವನ್ನು ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
14ರ ಅಣ್ಣನಿಂದಲೇ ಅತ್ಯಾಚಾರ: 12 ವರ್ಷದ ಬಾಲಕಿ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್
ಮಗು ಕಳೆದುಕೊಂಡ ತಾಯಿ ಪವಿತ್ರಾ ತನ್ನ ಗಂಡ ಮುನಿರಾಜುನನ್ನು ವಿಚಾರಿಸಿದಾಗ ಹೌದು ನಾನು ಮಗುವನ್ನು ಸಾಲ ತೀರಿಸುವುದಕ್ಕೆ ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದಾನೆ. ಆಗ ನನಗೆ ಮಗು ಬೇಕು ಎಂದು ಕೇಳಿದಾಗ ಪುನಃ ಗೃಹಬಂಧನಕ್ಕೆ ಹಾಕಿದ್ದನು. ಈಗ ಮಗುವನ್ನು ಕಳೆದುಕೊಂಡು ಸುಮಾರು ಹಲವು ದಿನಗಳು ಉರುಳಿ ಹೋಗಿವೆ. ಪುನಃ ನೆರೆಹೊರೆಯವರ ಸಹಾಯದೊಂದಿಗೆ ಮನೆಯಿಂದ ಹೊರಬಂದು ಮಹಿಳಾ ಆಯೋಗದ ನೆರವಿನೊಂದಿಗೆ ಪೊಲೀಸ್ ಠಾಣೆಗೆ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಗಂಡ ಮುನಿರಾಜು, ಪಕ್ಕದ ಮನೆಯ ವಲ್ಲಿ ಇಬ್ಬರೂ ನಾಪತ್ತೆ ಆಗಿದ್ದಾರೆ. ಇತ್ತ ಮಗುವೂ ಇಲ್ಲದೇ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದು, ತನಗೆ ಮಗು ಕೊಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗ ಹಾಗೂ ಬಂಗಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾಳೆ.