ಬೆಳೆದ ತರಕಾರಿಯನ್ನು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರಾಟ ಮಾಡಲಾಗದೆ ರೈತನೊಬ್ಬ ತಾನು ಬೆಳೆದಿದ್ದ ಸುಮಾರು 5 ಟನ್‌ ಕ್ಯಾಪ್ಸಿಕಂ ಅನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದ್ದಾನೆ.

ಶ್ರೀನಿವಾಸಪುರ(ಏ.14): ಬೆಳೆದ ತರಕಾರಿಯನ್ನು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರಾಟ ಮಾಡಲಾಗದೆ ರೈತನೊಬ್ಬ ತಾನು ಬೆಳೆದಿದ್ದ ಸುಮಾರು 5 ಟನ್‌ ಕ್ಯಾಪ್ಸಿಕಂ ಅನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದ್ದಾನೆ.

ಪಟ್ಟಣದ ಪ್ರಗತಿಪರ ರೈತ ಮುಜಾಹಿದ್‌ ಅನ್ಸಾರಿ ಬೆಳೆದಿದ್ದ ಕ್ಯಾಪ್ಸಿಕಂ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಹಾಗೇ ಬಿಟ್ಟರೆ ತೋಟದಲ್ಲೇ ಕ್ಯಾಪ್ಸಿಕಂ ಕೊಳೆÜತು ಹಾಳಾಗುತ್ತದೆ ಎಂಬ ಆತಂಕ ಅವರನ್ನು ಕಾಡಲಾರಂಭಿಸಿತು.

ಆಗ ತೋಟ ನಿರ್ವಹಣೆ ಮಾಡುತ್ತಿದ್ದ ಯುವಕರು ಬೆಳೆಯನ್ನು ತಿಪ್ಪೆಗೆ ಎಸೆದು ಬಿಡೋಣ ಎಂದು ಮಾಲಿಕನಿಗೆ ಸಲಹೆ ನೀಡಿದ್ದಾರೆ. ಇದಕ್ಕೆ ಒಪ್ಪದ ಮಾಲಿಕ ಮುಜಾಹಿದ್‌ ಅನ್ಸಾರಿ ತಮ್ಮ ಸಹೋದರರೊಂದಿಗೆ ಚರ್ಚಿಸಿ ಎರಡು ದಿನಗಳಿಂದ ಶ್ರೀನಿವಾಸಪುರ ಪಟ್ಟಣದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಸುಮಾರು 5 ಟನ್‌ ಕ್ಯಾಪ್ಸಿಕಾಮ್‌ ಅನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಿದ್ದಾರೆ.

ಲಕ್ಷಾಂತರ ರು.ಗಳ ನಷ್ಟ

ಈ ಸಂದರ್ಭದಲ್ಲಿ ಮಾತನಾಡಿದ ಅನ್ಸಾರಿ ಅವರು, ಲಕ್ಷಾಂತರ ಖರ್ಚು ಮಾಡಿ ಪಾಲಿಹೌಸ್‌ ನಿರ್ಮಿಸಿ ಕಂಪನಿಯೊಂದಿಗೆ ಕೆಜಿಗೆ 60 ರು.ಪಾಯಿಯಂತೆ ಒಪ್ಪಂದ ಮಾಡಿಕೊಂಡು ಕ್ಯಾಪ್ಸಿಕಂ ಬೆಳೆದೆವು.

ಎಲ್ಲಾ ಚಳುವಳಿಗಳಿಗೂ ಡಾ ಅಂಬೇಡ್ಕರ್ ಚಿಂತನೆಗಳೇ ಬಳುವಳಿ: ಬಿಎಸ್‌ವೈ

ಆದರೆ ಕೊರೋನಾ ವೈರಸ್‌ ಮಹಾಮಾರಿಯಿಂದಾಗಿ ದೇಶಾದ್ಯಂತ ಲಾಕ್‌ ಡೌನ್‌ ಹೇರಿದ ಪರಿಣಾಮ ಬೆಳೆಗೆ ಮಾರುಕಟ್ಟೆಇಲ್ಲದಂತಾಯಿತು. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟಉಂಟಾಗಿದೆ. ಬ್ಯಾಂಕ್‌ ಸಾಲ ತೀರಿಸುವುದು ಹೇಗೆ ಎಂಬ ಆತಂಕ ವ್ಯಕ್ತಪಡಿಸಿದರು.

ಜನರಿಗೆ ನೀಡಿದ ಆತ್ಮತೃಪ್ತಿ

ಆದರೂ ಬೆಳೆದ ಬೆಳೆಯನ್ನು ರಸ್ತೆಗೆ ಸುರಿಯದೆ ಅಥವಾ ತಿಪ್ಪೆಗೆ ಹಾಕದೆ ಪಟ್ಟಣದ ಪ್ರತಿ ವಾರ್ಡ್‌ಗಳಲ್ಲಿ ನೂರಾರು ಜನಕ್ಕೆ ವಿತರಿಸಿದ ಆತ್ಮತೃಪ್ತಿ ತಮಗಿದೆ ಎಂದು ಅನ್ಸಾರಿ ಹೆಳಿದರು. ತಮ್ಮ ಈ ಕಾರ್ಯಕ್ಕೆ ನೆರವು ನೀಡಿದ ಪೋಲಿಸ್‌ ಇಲಾಖೆ ಹಾಗು ಪುರಸಭೆ ಅ​ಧಿಕಾರಿಗಳಿಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದರು. ಉಚಿತ ವಿತರಣಾ ಕಾರ್ಯದಲ್ಲಿ ಪುರಸಭೆ ಸದಸ್ಯ ಅನಿಸ್‌ ಅಹ್ಮದ್‌ ಹಾಗು ಪರಿಸರ ಅಭಿಯಂತರ ಶೇಖರರೆಡ್ಡಿ ಮತ್ತು ತ್ರಿಭವನ್‌ ನೆರವಾಗಿದ್ದಾಗಿ ತಿಳಿಸಿದರು.